ಜ್ಞಾನಾರ್ಜನೆಗೆ ಗ್ರಂಥಾಲಯ ಅವಶ್ಯ: ಆಂಜನೆಯ ಗುಡಿಗೇರಿ

| Published : Aug 18 2025, 12:00 AM IST

ಜ್ಞಾನಾರ್ಜನೆಗೆ ಗ್ರಂಥಾಲಯ ಅವಶ್ಯ: ಆಂಜನೆಯ ಗುಡಿಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಸಾಪ ಬಂಕಾಪುರ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ ಮಾತನಾಡಿ, ಹಳೆಯ ಗ್ರಂಥಾಲಯದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಅವಶ್ಯ ಎಂದರು.

ಶಿಗ್ಗಾಂವಿ: ಮಕ್ಕಳ ಜ್ಞಾನಾರ್ಜನೆಗೆ ಗ್ರಂಥಾಲಯದ ಅವಶ್ಯವಿದ್ದು, ಹೀಗಾಗಿ ಗ್ರಂಥಾಲಯದ ನೂತನ ಕಟ್ಟಡ ನಿರ್ಮಾಣ ಆಗುವವರೆಗೆ ಪುರಸಭೆ ಸಭಾಭವನದಲ್ಲಿ ಗ್ರಂಥಾಲಯ ನಡೆಸಿ. ಕಟ್ಟಡ ನಿರ್ಮಾಣಕ್ಕೆ ಪಕ್ಷಾತೀತವಾಗಿ ಬೆಂಬಲಿಸುವ ಮೂಲಕ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಕೆಲಸಕ್ಕೆ ಅಣಿಯಾಗೋಣ ಎಂದು ಬಂಕಾಪುರ ಪುರಸಭೆ ಉಪಾಧ್ಯಕ್ಷ ಆಂಜನೆಯ ಗುಡಿಗೇರಿ ತಿಳಿಸಿದರು.ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಗ್ರಂಥಾಲಯದ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಸಾಪ ಬಂಕಾಪುರ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ ಮಾತನಾಡಿ, ಹಳೆಯ ಗ್ರಂಥಾಲಯದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಿ ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಅವಶ್ಯ ಎಂದರು.ಗ್ರಂಥಾಲಯ ಪಟ್ಟಣದ ದೊಡ್ಡ ಆಸ್ತಿಯಾಗಿದೆ. ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಈ ಕಡೆ ಹೆಚ್ಚಿನ ಗಮನ ಹರಿಸಬೇಕು. ಕಟ್ಟಡ ಓದುಗರ ತಲೆ ಮೇಲೆ ಬೀಳುವ ಹಂತದಲ್ಲಿರುವ ಕಾರಣ ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಂಥಾಲಯದ ನೂತನ ಕಟ್ಟಡ ಆಗಬೇಕು. ಶಾಸಕರ ಗಮನಕ್ಕೆ ತರಬೇಕು. ಕಟ್ಟಡಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಸಮಾಜ ಸೇವಕ ಮಂಜುನಾಥ ಕೂಲಿ ಮಾತನಾಡಿದರು. ಪುರಸಭೆ ಸದಸ್ಯರಾದ ಸುರೇಶ ಕುರಗೋಡಿ, ಅಯೋಬಖಾನ್ ಪಠಾಣ, ರಾಜಶೇಖರ ಬಡ್ಡಿ, ತಹಮೀದ್ ಖಾಜಿ, ಮಖಬೂಲ್ ಬೊಮ್ಮನಹಳ್ಳಿ, ರಮೇಶ ಸಿದ್ದಣ್ಣವರ, ಮಂಜು ತಳವಾರ, ನೂರಅಹ್ಮದ ಡೊರಳ್ಳಿ, ರಾಜು ತೋಪಣ್ಣವರ ಮುಖಂಡರಾದ ಶಿವು ಮಾಗಿ, ರಾಮಕೃಷ್ಣ ಆಲದಕಟ್ಟಿ, ಗದಿಗೆಪ್ಪ ಬಳ್ಳಾರಿ, ಗುರುಸಿದ್ದಪ್ಪ ನಾರಾಯಣಪುರ, ಸಜ್ಜನಗೌಡ್ರ, ಯಲ್ಲಪ್ಪ ಹುಲತ್ತಿಯರ, ಸೋಮಣ್ಣ ರಾಮಣ್ಣವರ, ಗ್ರಂಥಪಾಲಕ ಮೆಹಬೂಬಸಾಬ, ಗ್ರಂಥಾಲಯದ ಸಹಾಯಕಿ ಶೈಲಾ ಮಿಶ್ರಿಕೋಟಿ, ಕೀರ್ತಿ ಕಾಲೇಜಿನ ಗ್ರಂಥಪಾಲಕ ಎಂ.ವಿ. ಗಾಡದ, ಪತ್ರಕರ್ತರಾದ ಗೌಡಪ್ಪ ಬನ್ನೆ, ಸದಾನಂದ ಹಿರೇಮಠ ಇದ್ದರು.

ಸಂಗೊಳ್ಳಿ ರಾಯಣ್ಣನ ಜನ್ಮದಿನಾಚರಣೆ

ಹಿರೇಕೆರೂರು: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನ ಆಚರಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲ, ಯುವ ಜನತೆಗೆ ರಾಯಣ್ಣನ ಹೋರಾಟದ ಬಗ್ಗೆ ಹೋರಾಟದ ಬಗ್ಗೆ ಹಾಗೂ ರಾಯಣ್ಣನ ದೇಶಪ್ರೇಮದ ಬಗ್ಗೆ ಮಾತನಾಡಿದರು.ಬಜರಂಗದಳ ಜಿಲ್ಲಾ ಸಹ ಸಂಯೋಜಕ ವಿನಾಯಕ ಕರ್ನೂಲ್, ನಗರ ಸಂಯೋಜಕ ಬಸವರಾಜ ಓಲೇಕಾರ, ಸಂತೋಷ್ ಬೆಳಗುತ್ತಿ, ವಿನಯ, ನೇಶ್ವಿ, ಹರ್ಷ ಗೊಲ್ಲರ, ಪ್ರಮೋದ್ ಹಾದ್ರಿಹಳ್ಳಿ, ಆಕಾಶ ಮಾರವಳ್ಳಿ, ಜಗದೀಶ್ ಸೀತಾಳ, ವಿನಯ್ ಡಿ., ಶಿವು, ಪ್ರಜ್ವಲ್ ಮೋಹಿತೆ, ಜೀವನ್ ಹಾಗೂ ಕಾರ್ಯಕರ್ತರಿದ್ದರು.