ಚಿಕ್ಕಮಗಳೂರುಅರಣ್ಯ ಇಲಾಖೆ ಅಧಿಕಾರಿಗಳು, ಆರು ಕುಮ್ಕಿ ಆನೆಗಳು, ವಿಶೇಷ ತರಬೇತಿ ಪಡೆದ ಶ್ವಾನ, ಥರ್ಮಲ್ ಡ್ರೋನ್ ಸೇರಿದಂತೆ ಬೃಹತ್ ತಂಡದೊಂದಿಗೆ ನಡೆಸುತ್ತಿದ್ದ ಸೆರೆ ಕಾರ್ಯಾಚರಣೆಗೆ ಸವಾಲೊಡ್ಡಿದ್ದ ಒಂಟಿ ಸಲಗ ರಾತ್ರೋರಾತ್ರಿ ಚಿಕ್ಕಮ ಗಳೂರು ಗಡಿ ದಾಟಿ ಬೇಲೂರು ಭಾಗಕ್ಕೆ ತೆರಳಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಕುಮ್ಕಿ ಆನೆಗಳ ಕಣ್ತಪ್ಪಿಸಿ ಮೂಡಿಗೆರೆ ತಾಲೂಕು ವ್ಯಾಪ್ತಿಯ ಬಸ್ಕಲ್, ಮಾಕೋನಹಳ್ಳಿ ಮಾರ್ಗವಾಗಿ ಬೇಲೂರು ಗಡಿ ಭಾಗದ ನಂದಿಪುರದಲ್ಲಿ ಕಾಣಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅರಣ್ಯ ಇಲಾಖೆ ಅಧಿಕಾರಿಗಳು, ಆರು ಕುಮ್ಕಿ ಆನೆಗಳು, ವಿಶೇಷ ತರಬೇತಿ ಪಡೆದ ಶ್ವಾನ, ಥರ್ಮಲ್ ಡ್ರೋನ್ ಸೇರಿದಂತೆ ಬೃಹತ್ ತಂಡದೊಂದಿಗೆ ನಡೆಸುತ್ತಿದ್ದ ಸೆರೆ ಕಾರ್ಯಾಚರಣೆಗೆ ಸವಾಲೊಡ್ಡಿದ್ದ ಒಂಟಿ ಸಲಗ ರಾತ್ರೋರಾತ್ರಿ ಚಿಕ್ಕಮ ಗಳೂರು ಗಡಿ ದಾಟಿ ಬೇಲೂರು ಭಾಗಕ್ಕೆ ತೆರಳಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಕುಮ್ಕಿ ಆನೆಗಳ ಕಣ್ತಪ್ಪಿಸಿ ಮೂಡಿಗೆರೆ ತಾಲೂಕು ವ್ಯಾಪ್ತಿಯ ಬಸ್ಕಲ್, ಮಾಕೋನಹಳ್ಳಿ ಮಾರ್ಗವಾಗಿ ಬೇಲೂರು ಗಡಿ ಭಾಗದ ನಂದಿಪುರದಲ್ಲಿ ಕಾಣಿಸಿಕೊಂಡಿದೆ.ಕಳೆದ 11 ದಿನಗಳಿಂದ ಚಿಕ್ಕಮಗಳೂರು ಹೊರವಲಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಉಪಟಳ ನೀಡು ತ್ತಿದ್ದ ಒಂಟಿ ಸಲಗ ಸೆರೆಗೆ ಕಳೆದ ಶುಕ್ರವಾರ ಮತ್ತಾವರ-ನಲ್ಲೂರು ಗುಡ್ಡದ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿ ಅಧಿಕಾರಿಗಳ ನೇತೃತ್ವದಲ್ಲಿ ಆರು ಕುಮ್ಕಿ ಆನೆಗಳು, ವಿಶೇಷ ತರಬೇತಿ ಪಡೆದ ಶ್ವಾನ, ಥರ್ಮಲ್ ಡ್ರೋನ್ ಹಾಗೂ ತಜ್ಞರ ತಂಡ ಸುಮಾರು 8 ಗಂಟೆ ಕಾರ್ಯಾಚರಣೆ ನಡೆಸಿತ್ತು.ಆದರೆ, ಒಂಟಿ ಸಲಗವೇ ಕುಮ್ಕಿ ಆನೆಗಳನ್ನು ಬೆದರಿಸಿ ಹಿಮ್ಮೆಟ್ಟಿಸಿತ್ತು. ಇದರಿಂದ ಅಯ್ಯಪ್ಪ-ಜೂನಿಯರ್ ಅರ್ಜುನ ಸೇರಿದಂತೆ ಕುಮ್ಕಿ ಆನೆಗಳು ಗಲಿಬಿಲಿಗೊಂಡಿದ್ದವು. ಒಂಟಿ ಸಲಗ ಪೊದೆಯೊಳಗೆ ಸೇರಿ ಡ್ರೋನ್ ಕ್ಯಾಮೆರಾಗಳ ಕಣ್ತಪ್ಪಿಸಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ ಮೊದಲ ದಿನದ ಕಾರ್ಯಾ ಚರಣೆ ಸ್ಥಗಿತಗೊಳಿಸಲಾಗಿತ್ತು.2ನೇ ದಿನದ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಹೊಸ ಕಾರ್ಯತಂತ್ರ ರೂಪಿಸಿ ಮೈಸೂರಿನ ಭೀಮನಕಟ್ಟೆಯಿಂದ ಹೆಚ್ಚುವರಿ ಕುಮ್ಕಿ ಆನೆ ಏಕಲವ್ಯನನ್ನು ರಾತ್ರೋರಾತ್ರಿ ಮತ್ತಾವರ ಅರಣ್ಯ ಇಲಾಖೆ ಐಬಿಗೆ ಕರೆಸಲಾಗಿತ್ತು. ವಿಶೇಷ ತರ ಬೇತಿ ಪಡೆದ ಈಶ ಶ್ವಾನವನ್ನೂ ಕಾರ್ಯಾಚರಣೆಗೆ ಬಳಸಲು ಸಿದ್ಧತೆ ನಡೆಸಲಾಗಿತ್ತು.ಅಷ್ಟರಲ್ಲಾಗಲೇ ಒಂಟಿ ಸಲಗ ಸ್ಥಳದಿಂದ ಕಾಲ್ಕಿತ್ತಿದೆ. ಮತ್ತಾವರ ಭಾಗದಿಂದ ಬಸ್ಕಲ್, ಹಾಂದಿ, ಮಾಲಹಳ್ಳಿ, ಇಂದ್ರು ವಳ್ಳಿ, ದೊಡ್ಡನಗುಡ್ಡ, ನಂದಿಪುರ, ಬಾರೀಕೆರೆ, ಗಬ್ಬಳ್ಳಿ, ಪುರ, ಗೌತಹಳ್ಳಿ, ಹಂಡ್ಲು ಎಸ್ಟೇಟ್ ಹಾಗೂ ಕಾರ್‌ಬೈಲು ಗ್ರಾಮಗಳ ಸುತ್ತಮುತ್ತ ಓಡಾಡಿದ ಮಾಹಿತಿ ಲಭ್ಯವಾಗಿದೆ. ಬಸ್ಕಲ್‌ನಲ್ಲಿ ಮನೆಯೊಂದರ ಸಮೀಪ ಸಲಗ ಕಾಣಿಸಿಕೊಂಡಿದೆ.ಸದ್ಯ ಕುಮ್ಕಿ ಆನೆಗಳು ಮತ್ತಾವರ ಅರಣ್ಯ ಇಲಾಖೆ ಕ್ಯಾಂಪ್‌ನಲ್ಲೇ ಉಳಿದಿದ್ದು, ಒಂಟಿ ಸಲಗದ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದೆ. ಈ ಭಾಗದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚಿಸಿದೆ.

-- ಬಾಕ್ಸ್---ಮತ್ತೆ ಹಿಂಡು ಸೇರುವತ್ತ ಒಂಟಿ ಸಲಗ?ಬೇಲೂರು ಭಾಗದಿಂದ ಚಿಕ್ಕಮಗಳೂರು ಕಡೆಗೆ ಬಂದಿದ್ದ ಆನೆಗಳ ಹಿಂಡಿಗೆ ಸೇರಿದ ಈ ಒಂಟಿ ಸಲಗ ಕಳೆದ 11 ದಿನಗಳಿಂದ ಹಿಂಡಿನಿಂದ ಬೇರ್ಪಟ್ಟು ಚಿಕ್ಕಮಗಳೂರು ಹೊರವಲಯದಲ್ಲಿ ಬೀಡುಬಿಟ್ಟಿತ್ತು. ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಲಗ, ಮತ್ತೆ ತನ್ನ ಹಿಂಡು ಇರುವ ಪ್ರದೇಶದತ್ತ ತೆರಳಿರುವ ಸಾಧ್ಯತೆ ಯಿದೆ. ಹಿಂಡಿನೊಂದಿಗೆ ಸೇರುವುದೇ ಸುರಕ್ಷಿತ ಎಂಬ ಕಾರಣಕ್ಕೆ ಅದು ಬೇಲೂರು ಭಾಗದತ್ತ ಸಾಗಿರಬಹುದು ಎಂದು ಅಂದಾಜಿಸಲಾಗಿದೆ.