ಸಾರಾಂಶ
ಬಾಗಲಕೋಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಜಮಖಂಡಿ: ಬಾಗಲಕೋಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಬುಧವಾರ ಬೆಳಗ್ಗೆ ವಿಶ್ವವಿದ್ಯಾಲಯದಿಂದ ಹನುಮಾನ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿದರು.
ರಾಜ್ಯ ಸರ್ಕಾರವು 9 ವಿಶ್ವವಿದ್ಯಾಲಯಗಳನ್ನು ರದ್ದು ಮಾಡಲು ನಿರ್ಧರಿಸಿದ್ದು. ಅದರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವು ಒಂದು. ಸತತವಾಗಿ ಮೂರು ದಿನಗಳ ಕಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ, ಪತ್ರ ಚಳವಳಿ ನಡೆಸಿ ಸರ್ಕಾರಕ್ಕೆ ದೀರ್ಘದಂಡ ನಮಸ್ಕಾರದ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ವಿವಿಯಿಂದ ಟಿಪ್ಪು ಸುಲ್ತಾನವೃತ್ತದ ಮಾರ್ಗವಾಗಿ ನಗರದ ಹನುಮಾನ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯ ಕುಮಾರ ತಿಪರೆಡ್ಡಿ, ಶಂಭು ಪಡಸಾಲಿ, ಸಿದರಾಯಿ ಚೌರಿ, ಅನೀಲ ಮೀಶಿ, ಅಮರ, ರಮೇಶ ಅಮಾತಿ, ಸಚೀನ ರಾಠೋಡ, ಪ್ರಭು ಹೊಸಮನಿ, ವಿಜಯ ಮಾಂಗ, ಉತ್ತಮಕುಮಾರ, ಶರಣಪ್ಪ, ಕುಮಾರ ಗಡಗಿ, ಬೋರಮ್ಮ ತೋಟಗಿ, ಪೂಜಾ ಕಣಬೂರ, ಅಬುಬಕ್ಕರ ಕಮಲನ್ನವರ, ಚಂದ್ರವ್ವ, ಸೀಮಾ, ಬಾಳಪ್ಪ, ಅಶ್ವೀನಿ, ಕಾವೇರಿ, ನಮೀತಾ, ಸುಷ್ಮಿತಾ ಪಾಟೀಲ, ಮಂಜು, ಸಚೀನ ಅಂಬಿ, ಕಿರಣ ಡವಳೇಶ್ವರ ಇತರರಿದ್ದರು.