ಸಾರಾಂಶ
- 4.17 ಲಕ್ಷ ರೂ. ಮೌಲ್ಯದ 250 ಮೂಟೆ ಪಡಿತರ ಅಕ್ಕಿ ಪತ್ತೆ- ಸಿಸಿಬಿ ಪೊಲೀಸರ ಕಾರ್ಯಾಚರಣೆ
- 4.17 ಲಕ್ಷ ರೂ. ಮೌಲ್ಯದ 250 ಮೂಟೆ ಪಡಿತರ ಅಕ್ಕಿ ಪತ್ತೆ
- ಸಿಸಿಬಿ ಪೊಲೀಸರ ಕಾರ್ಯಾಚರಣೆ--ಕನ್ನಡಪ್ರಭ ವಾರ್ತೆ ಮೈಸೂರು
ಅನ್ನಭಾಗ್ಯ ಯೋಜನೆಯ 4.17 ಲಕ್ಷ ರೂ. ಮೌಲ್ಯದ 250 ಮೂಟೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಮಂಗಳವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ಖಚಿತ ಮಾಹಿತಿ ಮೇರೆಗೆ ಮೈಸೂರು- ಬೆಂಗಳೂರು ರಸ್ತೆಯ ಸಿದ್ದಲಿಂಗಪುರದ ಬಳಿ ಮಂಗಳವಾರ ಸಂಜೆ ಲಾರಿಯೊಂದನ್ನು ಸಿಸಿಬಿ ಪೊಲೀಸರು ತಡೆ ಪರಿಶೀಲಿಸಿದಾಗ 50 ಕೆ.ಜಿ ತೂಕದ 250 ಚೀಲ ಪಡಿತರ ಅಕ್ಕಿಯು ಪತ್ತೆಯಾಗಿದೆ. ಲಾರಿ ಚಾಲಕ ಸಣ್ಣಪ್ಪ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಅಕ್ಕಿಯನ್ನು ಮಂಡ್ಯದ ಎಸ್ ವಿಪಿ ಮಿಲ್ ಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಹೀಗಾಗಿ, ಅಕ್ಕಿ ತುಂಬಿದ್ದ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು, ಮೇಟಗಳ್ಳಿ ಠಾಣೆಯ ಪೊಲೀಸರಿಗೆ ದೂರು ಸಲ್ಲಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಹಾರ ನಿರೀಕ್ಷಕ ಕಿರಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಕೆ.ಸಿ. ಪೂವಯ್ಯ, ಎಸ್ಐಗಳಾದ ಲೇಪಾಕ್ಷ, ರಾಜು ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.