ಭಾರತವು ಶಿಲ್ಪಕಲೆಯ ತವರೂರು. ದೇಶದ ಪ್ರಾಚೀನ ಶಿಲ್ಪಕಲೆಯಲ್ಲಿ ಜೀವ ಕಳೆ ಮೂಡುವಂತೆ ಮಾಡುವ ಕಲೆ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಕರಗತವಾಗಿತ್ತು.

ಲಕ್ಷ್ಮೇಶ್ವರ: ದೇಶದ ಪ್ರಾಚೀನ ಶಿಲ್ಪಕಲೆಯು ಜಗತ್ತಿನ ಯಾವುದೇ ಭಾಗದಲ್ಲಿ ಕಂಡುಬರಲು ಸಾಧ್ಯವಿಲ್ಲ. ಇಂತಹ ಅದ್ಭುತ ಶಿಲ್ಪಕಲೆಯ ರೂವಾರಿ ಮಹಾನ್ ಶಿಲ್ಪಿ ಜಕಣಾಚಾರಿ ಎಂದರೆ ತಪ್ಪಾಗಲಾರದು ಎಂದು ತಹಸೀಲ್ದಾರ್ ಧನಂಜಯ ಎಂ. ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಕಣಾಚಾರಿ ಜಯಂತಿ ಆಚರಿಸಿ ಮಾತನಾಡಿದರು.

ಭಾರತವು ಶಿಲ್ಪಕಲೆಯ ತವರೂರು. ದೇಶದ ಪ್ರಾಚೀನ ಶಿಲ್ಪಕಲೆಯಲ್ಲಿ ಜೀವ ಕಳೆ ಮೂಡುವಂತೆ ಮಾಡುವ ಕಲೆ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಕರಗತವಾಗಿತ್ತು. ಪ್ರಾಚೀನ ಭಾರತವನ್ನು ಆಳಿದ ಹಿಂದೂ ದೊರೆಗಳು ತಮ್ಮ ಕಾಲದಲ್ಲಿ ದೇವಾಲಯಗಳನ್ನು ಕಲ್ಲಿನ ನಿರ್ಮಿಸುತ್ತಿದ್ದರು. ಇಂತಹ ಮಹಾನ್ ದೇವಾಲಯಗಳ ಗೋಡೆ, ಪ್ರಾಂಗಣ, ಗರ್ಭಗುಡಿ ಸೇರಿದಂತೆ ಎಲ್ಲ ಭಾಗಗಳಲ್ಲಿ ಸುಂದರ ಕೆತ್ತನೆಗಳನ್ನು ಕೆತ್ತುವ ಮೂಲಕ ಭಕ್ತರನ್ನು ತಮ್ಮಲ್ಲಿಗೆ ಸೆಳೆಯುವಂತೆ ಮಾಡುವ ಕಲೆ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಕರಗತವಾಗಿತ್ತು ಎಂದರು.

ಈ ವೇಳೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈರಣ್ಣ ಬಡಿಗೇರ, ರಾಮಚಂದ್ರ ಬಡಿಗೇರ, ರಾಘವೇಂದ್ರ ಬಡಿಗೇರ, ಅಶೋಕ ಮ. ಸೊರಟೂರ, ಮಹಾಂತೇಶ ಬಡಿಗೇರ, ರಮೇಶ ಬಡಿಗೇರ, ಮೋಹನ ಸುತಾರ, ಶಿವಣ್ಣ ಬಡಿಗೇರ, ಮನೋಹರ ಪತ್ತಾರ, ರವಿ ಬಡಿಗೇರ, ಹೂವಪ್ಪ ಬಡಿಗೇರ, ಹೂವಪ್ಪ ಸೊರಟೂರ, ಮಹೇಶ ಬಡಿಗೇರ, ಶ್ರೀಕಾಂತ ಪತ್ತಾರ ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಅನೇಕರು ಇದ್ದರು. ವೈಯಕ್ತಿಕ ಶೌಚಾಲಯ ನಿರ್ಮಾಣ: ಅರ್ಜಿ ಆಹ್ವಾನ

ಗದಗ: ಮುಂಡರಗಿ ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಾರ್ವಜನಿಕರು ಎಸ್ಎಫ್‌ಸಿ, ನಿಧಿ 2025- 26ನೇ ಸಾಲಿನ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಪುರಸಭೆಗೆ ಒಟ್ಟು 22 ವೈಯಕ್ತಿಕ ಶೌಚಾಲಯ ಗುರಿಯನ್ನು ನಿಗದಿಪಡಿಸಿದೆ.ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ -17, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ- 5 ಶೌಚಾಲಯಗಳನ್ನು ಮಾತ್ರ ನಿಗದಿಪಡಿಸಲಾಗಿದೆ. ಪ್ರತಿ ಒಟ್ಟು ಫಲಾನುಭವಿಗಳಿಗೆ ₹23333 ನಿಯಮಾನುಸಾರವಾಗಿ ಭರಿಸಲು ಅವಕಾಶ ಇರುತ್ತದೆ.ಆಸಕ್ತರು ಅರ್ಜಿಗಳನ್ನು ಜ. 17ರೊಳಗಾಗಿ ಕಚೇರಿಯ ವೇಳೆಯಲ್ಲಿ ಮುಂಡರಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಂಡರಗಿ ಪುರಸಭೆ ಕಾರ್ಯಾಲಯ ದೂ. 08371-262638 ಸಂಪರ್ಕಿಸಬಹುದು ಎಂದು ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.