ಸಾರಾಂಶ
ಆನೆ ತುಳಿತಕ್ಕೆ ಮಾವುತನ ಸಹಾಯಕ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದಿದೆ.
ರಾಯಬಾಗ : ಆನೆ ತುಳಿತಕ್ಕೆ ಮಾವುತನ ಸಹಾಯಕ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದಿದೆ.ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ಮಾವುತ.
ಧೃವ ಎಂಬ ಆನೆ ಮಾವುತನ ಸಹಾಯಕನಾಗಿದ್ದ. ಧರೆಪ್ಪ ಬೆಳಗ್ಗೆ 7 ಗಂಟೆ ಸುಮಾರಿಗೆ ಆನೆಗೆ ಮೇವು ಹಾಕಲು ಹೋದಾಗ ಮದವೇರಿದ್ದ 21 ವರ್ಷದ ಧೃವ ಆನೆ ಧರೆಪ್ಪನ ಮೇಲೆ ದಾಳಿ ಮಾಡಿದ್ದು, ಆನೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಮೃತ ಧರೆಪ್ಪ ಭೇವನೂರಗೆ 10 ದಿನಗಳ ಹಿಂದೆ ಗಂಡ ಮಗು ಜನಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.