ಸಾರಾಂಶ
ರೈತ ಯೋಗೇಶ್ ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷಗೊಂಡು ಜನರದಲ್ಲಿ ಆತಂಕ ಸೃಷ್ಟಿಸಿತ್ತು. ಜತೆಗೆ ಹಲವು ಕುರಿ, ಮೇಕೆಗಳನ್ನು ಸಹ ಕೊಂದು ತಿಂದು ಹಾಕಿತ್ತು. ಇದರಿಂದ ಸ್ಥಳೀಯರ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಚಿರತೆ ಹೆಜ್ಜೆಗಳು ಪತ್ತೆಯಾಗಿದ್ದವು.
ಪಾಂಡವಪುರ: ತಾಲೂಕಿನ ಜಾಗಟೆಮಲ್ಲೇನಹಳ್ಳಿ ಹೊರವಲಯದ ಯೋಗೇಶ್ ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನ್‌ಗೆ ನಾಲ್ಕು ವರ್ಷದ ಗಂಡು ಚಿರತೆ ಬಿದ್ದಿದೆ.
ರೈತ ಯೋಗೇಶ್ ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷಗೊಂಡು ಜನರದಲ್ಲಿ ಆತಂಕ ಸೃಷ್ಟಿಸಿತ್ತು. ಜತೆಗೆ ಹಲವು ಕುರಿ, ಮೇಕೆಗಳನ್ನು ಸಹ ಕೊಂದು ತಿಂದು ಹಾಕಿತ್ತು. ಇದರಿಂದ ಸ್ಥಳೀಯರ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಚಿರತೆ ಹೆಜ್ಜೆಗಳು ಪತ್ತೆಯಾಗಿದ್ದವು. ಇದರಿಂದ ರೈತ ಯೋಗೇಶ್ ಜಮೀನಿನಲ್ಲಿ ಅರಣ್ಯಾಧಿಕಾರಿಗಳು ಕಳೆದ ನಾಲ್ಕು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಹಾಕಿ ನಾಯಿ ಕಟ್ಟಿದ್ದರು.ಮಂಗಳವಾರ ರಾತ್ರಿ ಚಿರತೆ ಅರಣ್ಯ ಇಲಾಖೆ ಬೋನ್‌ಗೆ ಬಿದ್ದಿದೆ. ಬುಧವಾರ ಬೆಳಗ್ಗೆ ರೈತ ಯೋಗೇಶ್ ಜಮೀನಿನ ಬಳಿ ಹೋದಾಗ ಚಿರತೆ ಬೋನಿಗೆ ಬಿದ್ದಿರುವ ವಿಚಾರ ತಿಳಿದಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಚಿರತೆಯನ್ನು ಬೋನ್‌ಸಮೇತ ತೆಗೆದುಕೊಂಡು ತೆರಳಿದರು. ಬೋನಿಗೆ ಬಿದ್ದ ಚಿರತೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಮೇಲಾಧಿಕಾರಿಗಳ ಸೂಚನೆಯಂತೆ ಮಹದೇಶ್ವರಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ ತಿಳಿಸಿದರು.