ಮೈಸೂರು ರಸ್ತೆಯಲ್ಲಿರುವ ಪುಣ್ಯ ಆಸ್ಪತ್ರೆ, ಸಿಟಿ ಸ್ಕ್ಯಾನ್ ಹಾಗೂ ಲಯನ್ಸ್ ಕ್ಲಬ್ ಇವರ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮೇಳ ಮತ್ತು ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯನಿಗೆ ಯಾವುದಾದರೂ ರೀತಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಸು ಸ್ಥಿತಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಅದಕ್ಕಿಂತ ಒಳ್ಳೆಯ ಕೆಲಸ ಮತ್ತೊಂದಿಲ್ಲ, ಇಂದು ನಾವು ಅನೇಕರನ್ನು ನೋಡುತ್ತಿದ್ದೇವೆ. ಬಹಳಷ್ಟು ರೀತಿಯಲ್ಲಿ ಹಣ ಐಶ್ವರ್ಯ ಇವುಗಳು ಇದ್ದರೂ ಕೂಡ ಸಮಾಜಮುಖಿ ಸೇವೆಗಳನ್ನು ಮಾಡಲು ಯಾರು ಕೂಡ ಇಂದು ಮುಂದೆ ಬರುವುದಿಲ್ಲ. ಮನುಷ್ಯನಿಗೆ ಯಾವುದಾದರೂ ರೀತಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಥಿತಿ ಇರಬೇಕು. ಅದರಿಂದ ಬಹಳಷ್ಟು ಜನರಿಗೆ ಒಳಿತಾಗುತ್ತದೆ ಎಂದು ರಸ್ತೆ ಸಾರಿಗೆ ಪ್ರಾದೇಶಿಕ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮನುಷ್ಯನಿಗೆ ಯಾವುದಾದರೂ ರೀತಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಥಿತಿ ಇರಬೇಕು. ಅದರಿಂದ ಬಹಳಷ್ಟು ಜನರಿಗೆ ಒಳಿತಾಗುತ್ತದೆ ಎಂದು ರಸ್ತೆ ಸಾರಿಗೆ ಪ್ರಾದೇಶಿಕ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪುಣ್ಯ ಆಸ್ಪತ್ರೆ, ಸಿಟಿ ಸ್ಕ್ಯಾನ್ ಹಾಗೂ ಲಯನ್ಸ್ ಕ್ಲಬ್ ಇವರ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮೇಳ ಮತ್ತು ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯನಿಗೆ ಯಾವುದಾದರೂ ರೀತಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂಬ ಮನಸ್ಸು ಸ್ಥಿತಿಯನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಅದಕ್ಕಿಂತ ಒಳ್ಳೆಯ ಕೆಲಸ ಮತ್ತೊಂದಿಲ್ಲ, ಇಂದು ನಾವು ಅನೇಕರನ್ನು ನೋಡುತ್ತಿದ್ದೇವೆ. ಬಹಳಷ್ಟು ರೀತಿಯಲ್ಲಿ ಹಣ ಐಶ್ವರ್ಯ ಇವುಗಳು ಇದ್ದರೂ ಕೂಡ ಸಮಾಜಮುಖಿ ಸೇವೆಗಳನ್ನು ಮಾಡಲು ಯಾರು ಕೂಡ ಇಂದು ಮುಂದೆ ಬರುವುದಿಲ್ಲ. ಆದರೆ ಡಾ. ಮಹೇಶ್ ಅವರು ತಮ್ಮ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಮತ್ತು ಆಟೋ ಚಾಲಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಇಂತಹ ವೈದ್ಯರು ತಮ್ಮ ಸಮಾಜಮುಖಿ ಸೇವೆಯಲ್ಲಿ ತೊಡಗಿರುವುದು ಒಂದು ರೀತಿಯ ಸಂತೋಷದ ವಿಚಾರವಾಗಿದೆ ಅದರಲ್ಲೂ ಕೂಡ ಆಟೋ ಚಾಲಕರನ್ನು ಮತ್ತು ಸಾರ್ವಜನಿಕರನ್ನು ಇಂತಹ ಕಾರ್ಯಕ್ರಮಕ್ಕೆ ಕರೆಸಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲು ಸಹಕಾರ ನೀಡಿದ್ದಾರೆ. ಇಂತಹ ಸಹಕಾರಗಳು ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ವಿ. ಮಹೇಶ್ ಮಾತನಾಡಿ, ಮೊದಲಿಗೆ ಆಸ್ಪತ್ರೆ ಎಂದರೆ ನೆನಪು ಆಗುವುದು ಅಪಘಾತ ಅಥವಾ ಆರೋಗ್ಯ ಸಮಸ್ಯೆ ಈ ಎರಡು ಸಮಸ್ಯೆಗಳಿಂದ ಮಾತ್ರ ಮನುಷ್ಯರು ಆಸ್ಪತ್ರೆಗೆ ಬರುತ್ತಾರೆ. ಈ ಎರಡು ಪರಿಹಾರ ಎಂದರೆ ಒಂದು ಆರೋಗ್ಯ ಸಮಸ್ಯೆಯನ್ನು ನಾವೇ ಸುಧಾರಣೆ ಮಾಡಿಕೊಳ್ಳುವುದು ಮತ್ತೊಂದು ಅಪಘಾತವನ್ನು ತಡೆಗಟ್ಟುವುದು ಈಗಾಗಲೇ ಅತಿ ಹೆಚ್ಚು ಅನಾಹುತಗಳು ಮತ್ತು ಸಾವು ನೋವುಗಳು ಅಪಘಾತದಿಂದ ಸಂಭವಿಸುತ್ತಿವೆ. ಆದ್ದರಿಂದ ದಯಮಾಡಿ ಸಾರ್ವಜನಿಕರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಅರಿವಿನ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ಮತ್ತು ವಾಹನ ಸವಾರರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಹೆಚ್ಚು ಅರಿವುಗಳನ್ನು ಪಡೆದುಕೊಳ್ಳುವುದು ಸೂಕ್ತವಾಗಿದೆ. ದಯಮಾಡಿ ವಾಹನ ಸವಾರರು ಮೊಬೈಲ್ ಬಳಕೆ ಮಾಡಿಕೊಂಡು ವಾಹನವನ್ನು ಚಲಾಯಿಸಬಾರದು ಹಾಗೂ ೧೮ ವ? ಒಳಪಟ್ಟ ಮಕ್ಕಳಿಗೆ ಯಾವುದೇ ರೀತಿಯ ವಾಹನವನ್ನು ಚಲಾಯಿಸಲು ಅವಕಾಶವನ್ನು ನೀಡಬೇಡಿ ಇದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂದರು.

ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ ಆಟೋ ಹಿಂಭಾಗ ಸಾರಿಗೆ ಇಲಾಖೆಯ ಸ್ಟಿಕರ್‌ ಅಂಟಿಸಿದರು.ಇದೇ ಸಂದರ್ಭದಲ್ಲಿ ಸುಮಾರು ೫೦೦ಕ್ಕೂ ಅಧಿಕ ಆಟೋ ಚಾಲಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ. ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಟಿಎಪಿಎಂಸಿ ಅಧ್ಯಕ್ಷ ವೆಂಕಟೇಶ್, ರಸ್ತೆ ಸಾರಿಗೆ ನಿರೀಕ್ಷೆಕೆ ಆಶಾ, ಸಮರಸೇನೆ ಜಿಲ್ಲಾಧ್ಯಕ್ಷ ಭರತ್ ಗೌಡ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್ ಇನ್ನು ಮುಂತಾದವರು ಹಾಜರಿದ್ದರು.