ತನ್ನ ಧರ್ಮವನ್ನು ಪಾಲನೆ ಮಾಡದೆ ಇರುವ ಮನುಷ್ಯ: ಹಿರೇಕಲ್ಮಠ ಸ್ವಾಮೀಜಿ

| Published : Nov 04 2025, 02:00 AM IST

ತನ್ನ ಧರ್ಮವನ್ನು ಪಾಲನೆ ಮಾಡದೆ ಇರುವ ಮನುಷ್ಯ: ಹಿರೇಕಲ್ಮಠ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಪ್ರಾಣಿಗಳು ತಮ್ಮ ಧರ್ಮವನ್ನು ಬಿಟ್ಟಿಲ್ಲ, ಆದರೆ ಮನುಷ್ಯ ಮಾತ್ರ ತಮ್ಮ ಮನುಷ್ಯ ಧರ್ಮವನ್ನು ಪರಪಾಲಿಸುತ್ತಿಲ್ಲ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಎಲ್ಲಾ ಪ್ರಾಣಿಗಳು ತಮ್ಮ ಧರ್ಮವನ್ನು ಬಿಟ್ಟಿಲ್ಲ, ಆದರೆ ಮನುಷ್ಯ ಮಾತ್ರ ತಮ್ಮ ಮನುಷ್ಯ ಧರ್ಮವನ್ನು ಪರಪಾಲಿಸುತ್ತಿಲ್ಲ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಸಗೊಲ್ಲರಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಗೃಹ ಪ್ರವೇಶ, ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರದ ಕಳಸಾರೋಹಣ ಮತ್ತು ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಎಲ್ಲಾ ಜಾತಿ ಜನಾಂಗದ ದೇವರೆಂದರೆ ಶನಿಮಹಾತ್ಮ ಮತ್ತು ಆಂಜನೇಯಸ್ವಾಮಿ, ಈ ದೇವರು ಜಾತ್ಯತೀತ ದೇವರಾಗಿದ್ದಾರೆ ಎಂದು ಹೇಳಿದರು.

ಎಲ್ಲಾ ಭಕ್ತರಿಗೆ ಶನಿಮಾಹತ್ಮ ದೇವರ ಕೃಪಾರ್ಶಿವಾದ ಹಾಗೂ ಆಂಜನೇಯಸ್ವಾಮಿ ಶಕ್ತಿ ಬೇಕಾಗಿದ್ದು, ಈ ಉಭಯ ದೇವರುಗಳನ್ನು ಬಹುತೇಕ ಜನರು ಪ್ರಾರ್ಥಿಸುತ್ತಾರೆ. ಎರಡೂ ದೇವರುಗಳ ದೇವಸ್ಥಾನಗಳು ಹೊಸಗೊಲ್ಲರಹಳ್ಳಿಯಲ್ಲಿ ಅಕ್ಕಪಕ್ಕ ಇರುವುದು ಒಂದು ವಿಶೇಷವಾಗಿದೆ ಎಂದು ತಿಳಿಸಿದರು.

ಸಂಸ್ಕೃತಿ ಇದ್ದಲ್ಲಿ ಉತ್ತಮ ಭಾವನೆಗಳು ಇರುತ್ತವೆ. ಪ್ರತಿಯೊಬ್ಬ ವ್ಯಕ್ತಿ ಸುಸಂಸ್ಕೃತನಾದರೆ ಉತ್ತಮ ಭಾವನೆಗಳು ತನ್ನಿಂದ ತಾನೇ ಸೃಷ್ಟಿಯಾಗಿ ಸಮಾಜಕ್ಕೆ ಒಳಿತಾಗುತ್ತದೆ ಎಂದರು.

ಮನುಷ್ಯರಿಗೆ ಮಾತ್ರ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಪ್ರಾಣಿಗಳಿಗೆ ಇಂತಹ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಕಾರಣ ಪ್ರಾಣಿಗಳು ಪ್ರಕೃತಿಗೆ ವಿರುದ್ಧವಾಗಿ ಯಾವತ್ತೂ ನಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 1994ರಲ್ಲಿ ಹೊಸಗೊಲ್ಲರಹಳ್ಳಿ ಹುಟ್ಟಿಕೊಂಡಿತು, ಅಂದು ಕೆಲ ನಿವೇಶನಗಳನ್ನು ಇಲ್ಲಿ ವಿತರಿಸಲಾಯಿತು. ಹೊಸಪೇಟಿ ಮತ್ತು ಶಿವಮೊಗ್ಗ ರಾಜ್ಯ ಹೆದ್ದಾರಿ ಪಕ್ಕ ಇರುವ ಕಾರಣ ಇದೊಂದು ದೊಡ್ಡ ಹಳ್ಳಿಯಾಗಿ ಮಾರ್ಪಟ್ಟು ಈಗ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭಕ್ತಿ ಎನ್ನುವುದು ವ್ಯಕ್ತಿಯಲ್ಲಿ ಹಾಸುಹೊಕ್ಕಾಗಿದ್ದಾಗ ಮಾತ್ರ ದೇವರು ಒಲಿಯಲಿಕ್ಕೆ ಸಾಧ್ಯ, ಧರ್ಮದಿಂದ ಬಾಳುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ನಮ್ಮಲ್ಲಿ ದೇವರು,ಧರ್ಮ ಶ್ರದ್ದೆ ಇರುವುದರಿಂದಾಗಿಯೇ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರಗಳು ಇನ್ನೂ ಜೀವಂತವಾಗಿವೆ ಎಂದರು.

ಗ್ರಾಪಂ ಸದಸ್ಯ ನಟರಾಜ್, ಮುಖಂಡರಾದ ಜಿ.ಪಿ.ವರದರಾಜಪ್ಪ, ಶಾಂತರಾಜಪಾಟೀಲ್, ಎಂ.ಆರ್.ಮಹೇಶ್, ಬಾಷಾಸಾಬ್ ಮಾತನಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಸಿ.ಸುರೇಂದ್ರನಾಯ್ಕ, ಗ್ರಾಮದ ಮುಖಂಡರಾದ ಹಾಲಪ್ಪ, ಸಂತೋಷ್, ರಮೇಶ್‌ ಇತರರು ಇದ್ದರು.

ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ಮಟ್ಟದ ಅಧಿಕಾರಿ ನರಸಿಂಹಪ್ಪ ವಹಿಸಿದ್ದರು. ಹೊನ್ನಾಳಿ ಫೋಟೋ 2ಎಚ್.ಎಲ್.ಐ2: ಹೊನ್ನಾಳಿ ಹೊಸಗೊಲ್ಲರಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿರೇಕಲ್ಮಠದ ಸ್ವಾಮಿಜಿ ಆಶೀರ್ವಚನ ನೀಡಿದರು. ಶಾಸಕ ಶಾಂತನಗೌಡ, ಮಂಜಪ್ಪ ಇತರರು ಇದ್ದರು.