ಹೊಸ ವರ್ಷದ ಆಚರಣೆಗೆ ತೆರಳುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

| Published : Jan 02 2025, 12:31 AM IST

ಹೊಸ ವರ್ಷದ ಆಚರಣೆಗೆ ತೆರಳುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ಬಿರಿಯಾನಿ ಹಾಗೂ ಬೇಕರಿ ತಿನಿಸುಗಳನ್ನು ಖರೀದಿ ಮಾಡಿ ಮನೆಗೆ ತೆರಳುವ ಸಮಯದಲ್ಲಿ ರಾತ್ರಿ 8 ರ ಸಮಯದಲ್ಲಿ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರ ಕುಪ್ಪೆ ಬಳಿ ಡಿಸೆಂಬರ್ 31ರ ರಾತ್ರಿ ತನ್ನ ಸ್ವಗ್ರಾಮಕ್ಕೆ ಹೊಸ ವರ್ಷ ಆಚರಣೆಗೆ ಕುಟುಂಬದ ಸದಸ್ಯರಿಗಾಗಿ ಬಿರಿಯಾನಿ ಸಮೇತ ತೆರಳುವಾಗ ಅಪರಿಚಿತ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ.ಮೃತ ವ್ಯಕ್ತಿ ಮಧು 28 ಹೆಬ್ಬೂರು ಹೋಬಳಿಯ ಮಣಿಕುಪ್ಪೆ ವಾಸಿ ಆಗಿದ್ದು, ಸ್ನೇಹಿತ ಹಾಗೂ ಕುಟುಂಬಸ್ಥರ ಜೊತೆ ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ಬಿರಿಯಾನಿ ಹಾಗೂ ಬೇಕರಿ ತಿನಿಸುಗಳನ್ನು ಖರೀದಿ ಮಾಡಿ ಮನೆಗೆ ತೆರಳುವ ಸಮಯದಲ್ಲಿ ರಾತ್ರಿ 8 ರ ಸಮಯದಲ್ಲಿ ಕುಣಿಗಲ್ ತುಮಕೂರು ರಸ್ತೆಯ ವಡ್ಡರ ಕುಪ್ಪೆ ಬಳಿ ಹಿಂಬದಿಯ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ತುಮಕೂರಿನಿಂದ ಕುಣಿಗಲ್‌ಗೆ ಬರುತ್ತಿದ್ದ ಮಾಜಿ ಪುರಸಭಾ ಅಧ್ಯಕ್ಷ ಕೆ.ಎಲ್. ಹರೀಶ್ ಘಟನೆಯನ್ನು ಕುಣಿಗಲ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಸಿಪಿಐ ನವೀನ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಶವವನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಇರಿಸಿದ್ದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೋಟೋ ಇದೆ : 1 ಕೆಜಿಎಲ್ 1 : ವಡ್ಡರ ಕುಪ್ಪೆ ಬಳಿ ಡಿಸೆಂಬರ್ 31ರ ರಾತ್ರಿ ಅಪಘಾತದ ಸ್ಥಳ ಪರಿಶೀಲಿಸಿದ ಪೊಲೀಸರು