ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಹತ್ಯೆ

| Published : Dec 04 2023, 01:30 AM IST

ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ ವಿವಾದಕ್ಕೆ ನಡೆಯಿತಾ ಕೃತ್ಯ?: ಮಹೇಶಪ್ಪ ಅವರಿಗೆ ಬೆಳಲಕಟ್ಟೆಯಲ್ಲಿ 3 ಎಕರೆ ಜಮೀನಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರಪ್ಪ ಅವರ ಮಗ ಕಾರ್ತಿಕ್ ನಡುವೆ ಮಹೇಶಪ್ಪ ಅವರಿಗೆ ಜಮೀನು ವಿಚಾರ ಮನಸ್ಥಾಪವಿತ್ತು. ಈ ಮನಸ್ಥಾಪವೇ ಮಹೇಶಪ್ಪ ಅವರನ್ನು ಜೀವಂತ ಸುಡಲು ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸುಟ್ಟ ಗಾಯಗಳಿಂದಾಗಿ ಸಾಯುವ ಮುನ್ನ ಮಹೇಶಪ್ಪ ಹೇಳಿಕೆ ನೀಡಿದ್ದು, ಕುಮಾರಪ್ಪ, ಮಗ ಕಾರ್ತಿಕ್ ಮತ್ತು ಇತರರ ಹೆಸರು ಮಹೇಶಪ್ಪ ಹೇಳಿರುವುದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ, ಶಿವಮೊಗ್ಗ

ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ, ಆತನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ.

ಮೇಲಿನ ಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲಕಟ್ಟೆ ವಾಸಿ ಮಹೇಶಪ್ಪ (60) ಮೃತಪಟ್ಟ ವ್ಯಕ್ತಿ. ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಮಹೇಶಪ್ಪ ದ್ವಿಚಕ್ರ ವಾಹನದಲ್ಲಿ ಬೆಳಲಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಲಾಗಿದೆ. ಇದರಿಂದ ಮಹೇಶಪ್ಪ ದೇಹ ಸಂಪೂರ್ಣ ಸುಟ್ಟುಹೋಗಿತ್ತು. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ನೆಲದ ಮೇಲೆ ಹೊರಳಾಡಿ, ನರಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಹೇಶಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಮಹೇಶಪ್ಪ ಕೊನೆ ಉಸಿರೆಳೆದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಬೆಂಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟುಹೋಗಿದೆ.

ಆಸ್ತಿ ವಿವಾದಕ್ಕೆ ನಡೆಯಿತಾ ಕೃತ್ಯ?:

ಮಹೇಶಪ್ಪ ಅವರಿಗೆ ಬೆಳಲಕಟ್ಟೆಯಲ್ಲಿ 3 ಎಕರೆ ಜಮೀನಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರಪ್ಪ ಅವರ ಮಗ ಕಾರ್ತಿಕ್ ನಡುವೆ ಮಹೇಶಪ್ಪ ಅವರಿಗೆ ಜಮೀನು ವಿಚಾರ ಮನಸ್ಥಾಪವಿತ್ತು. ಈ ಮನಸ್ಥಾಪವೇ ಮಹೇಶಪ್ಪ ಅವರನ್ನು ಜೀವಂತ ಸುಡಲು ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಸುಟ್ಟ ಗಾಯಗಳಿಂದಾಗಿ ಸಾಯುವ ಮುನ್ನ ಮಹೇಶಪ್ಪ ಹೇಳಿಕೆ ನೀಡಿದ್ದು, ಕುಮಾರಪ್ಪ, ಮಗ ಕಾರ್ತಿಕ್ ಮತ್ತು ಇತರರ ಹೆಸರು ಮಹೇಶಪ್ಪ ಹೇಳಿರುವುದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.