ಸಾರಾಂಶ
ತರೀಕೆರೆ: ಕಾಡಂಚಿನಲ್ಲಿ 16 ಮೇಕೆಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಮೇಕೆ ಸಹಿತ ನಾಪತ್ತೆಯಾಗಿರುವ ಘಟನೆ ಸಮೀಪದ ಬರ್ಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರುವನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ತರೀಕೆರೆ: ಕಾಡಂಚಿನಲ್ಲಿ 16 ಮೇಕೆಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಮೇಕೆ ಸಹಿತ ನಾಪತ್ತೆಯಾಗಿರುವ ಘಟನೆ ಸಮೀಪದ ಬರ್ಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರುವನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಹರುವನಹಳ್ಳಿ ನಿವಾಸಿ ಯೋಗೀಶ್ (55) ನಾಪತ್ತೆ ಯಾದವರು. ಇವರು ಪ್ರತಿನಿತ್ಯ ಮೇಕೆಗಳನ್ನು ಮೇಯಿಸಲು ಹೋಗತ್ತಿದ್ದು, ಜುಲೈ 29 ರಂದು ಎಂದಿನಂತೆಯೇ ಗ್ರಾಮದ ಸಮೀಪದ ಭದ್ರಾ ಅಭಯಾರಣ್ಯದ ಕಾಡಂಚಿಗೆ ಮೇಕೆಗಳನ್ನು ಮೇಯಿಸಲು ಹೋದವರು ಸಂಜೆಯಾದರೂ ಮನೆಗೆ ಹಿಂತಿರುಗದಿದ್ದುದನ್ನು ಕಂಡು ಯೋಗೀಶ್ ಅವರ ಮಗ ಜಗದೀಶ್ ಕೂಡಲೇ ಗ್ರಾಮಸ್ಥರೊಂದಿಗೆ ಸೇರಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ತಂದೆ ಯೋಗೀಶ್ ಮತ್ತು ಮೇಕೆಗಳ ಸುಳಿವು ಸಿಗಲಿಲ್ಲ ಎಂದು ಅವರ ಮಗ ಜಗದೀಶ್ ತಿಳಿಸಿದ್ದಾರೆ.ಈ ಬಗ್ಗೆ ಲಕ್ಕವಳ್ಳಿ ಪೋಲೀಸ್ ಠಾಣೆಗೆ ಯೋಗೀಶ್ ಅವರ ಪತ್ನಿ ಗೌರಮ್ಮ ದೂರು ನೀಡಿದ್ದು, ಪೋಲೀಸ್ ಜಾಗೃತ ದಳ ಮತ್ತು ಅರಣ್ಯ ಇಲಾಖೆಯವರು ಶ್ವಾನಗಳೊಂದಿಗ ಹುಡುಕಾಟ ನಡೆಸಿದರೂ ತಮ್ಮ ತಂದೆ ಯೋಗೀಶ್ ಮತ್ತು ಮೇಕೆಗಳ ಸುಳಿವು ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.
4ಕೆಟಿಆರ್.ಕೆ.2.ಃ ನಾಪತ್ತೆಯಾದ ಯೋಗೀಶ್