ಸುಸಂಸ್ಕೃತ ರಾಜಕಾರಣಕ್ಕಾಗಿ ಪಾದಯಾತ್ರೆ

| Published : Mar 20 2025, 01:16 AM IST

ಸಾರಾಂಶ

ಭ್ರಷ್ಟರಲ್ಲದ, ಕೋಮುವಾದಿಗಳಲ್ಲದ, ಕುಟುಂಬ ರಾಜಕಾರಣ ಮಾಡದ ಪ್ರಬುದ್ಧ, ಜನಪರ ಮತ್ತು ಸುಸಂಸ್ಕೃತ ವ್ಯಕ್ತಿಗಳು ರಾಜಕಾರಣಕ್ಕೆ ಅಗತ್ಯವಿದೆ ಎಂದು ಬಾಗಲಕೋಟೆಯ ಎಂಟೆಕ್ ಪದವೀಧರ ನಾಗರಾಜು ಶಿ.ಕಲಕುಟಗರ ಹೇಳಿದರು.

ಚಾಮರಾಜನಗರ: ಭ್ರಷ್ಟರಲ್ಲದ, ಕೋಮುವಾದಿಗಳಲ್ಲದ, ಕುಟುಂಬ ರಾಜಕಾರಣ ಮಾಡದ ಪ್ರಬುದ್ಧ, ಜನಪರ ಮತ್ತು ಸುಸಂಸ್ಕೃತ ವ್ಯಕ್ತಿಗಳು ರಾಜಕಾರಣಕ್ಕೆ ಅಗತ್ಯವಿದೆ ಎಂದು ಬಾಗಲಕೋಟೆಯ ಎಂಟೆಕ್ ಪದವೀಧರ ನಾಗರಾಜು ಶಿ.ಕಲಕುಟಗರ ಹೇಳಿದರು.

ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛ ವಿಧಾನಸಭೆ ಅಭಿಯಾನದ ಅಂಗವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು ಬುಧವಾರ ಚಾಮರಾಜನಗರಕ್ಕೆ ಆಗಮಿಸಿ ಭುವನೇಶ್ವರಿ ವೃತ್ತದಲ್ಲಿ ಮಾತನಾಡಿದರು.ನಾನು ಪ್ರಬುದ್ಧ ರಾಜಕಾರಣಕ್ಕಾಗಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹೆಚ್ಚುತ್ತಿರುವ ಅಪರಾಧಗಳನ್ನು ಕಡಿಮೆ ಮಾಡುವು ಸಲುವಾಗಿ ಫೆ. ೧೬ ರಂದು ಬೆಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಈಗಾಗಲೇ 4 ಜಿಲ್ಲೆಗಳನ್ನು ಪೂರ್ಣಗೊಳಿಸಿ, ಇದು ೫ನೇ ಜಿಲ್ಲೆ, ಇಲ್ಲಿಂದ ಮಂಡ್ಯ, ಮೈಸೂರು, ಕೊಡಗು ಜಿಲ್ಲೆ ಸೇರಿದಂತೆ ೩೧ ಜಿಲ್ಲೆಗಳಲ್ಲೂ ಪಾದಯಾತ್ರೆ ಮಾಡುತ್ತೇನೆ ಎಂದರು.ಭ್ರಷ್ಟರು, ಕೋಮುವಾದಿಗಳು ಕುಟುಂಬ ರಾಜಕಾರಣ ಮಾಡುವವರನ್ನು ಅಧಿಕಾರದಿಂದ ದೂರವಿಡಿ. ಜನಪರ ಕಾಳಜಿ ಇರುವ ಪ್ರಬುದ್ಧರನ್ನು ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಆಯ್ಕೆ ಮಾಡಿ, ಹಣ, ಹೆಂಡಕ್ಕೆ ಮಾರುಹೋಗಬೇಡಿ, ೨೦೨೮ಕ್ಕಾದರೂ ಪ್ರಬುದ್ದ ರಾಜಕಾರಣಿಗಳನ್ನು ಆಯ್ಕೆ ಮಾಡಿ ಸ್ವಚ್ಛ ವಿಧಾನಸಭೆ ಮಾಡಿ ಎಂದು ಮನವಿ ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದರು. ಆ.೧೫ರ ವೇಳೆಗೆ ಮೊದಲ ಹಂತದ ಜಿಲ್ಲಾ ಕೇಂದ್ರದ ಪಾದಯಾತ್ರೆ ಮುಕ್ತಾಯಗೊಳ್ಳಲಿದ್ದು, 2ನೇ ಹಂತದ ಪಾದಯಾತ್ರೆಯನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸುವುದಾಗಿ ತಿಳಿಸಿದರು.