ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಸಾಧ್ಯ

| Published : Feb 29 2024, 02:07 AM IST

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶರಣ ಬಸವೇಶ್ವರ ಪೂರಾಣ ಮಹಾಮಂಗಲ ಪ್ರಯುಕ್ತ ಬೆಳಿಗ್ಗೆ ಶರಣ ಬಸವೇಶ್ವರ ಭಾವಚಿತ್ರ ಹಾಗೂ ಮಹಿಳೆಯರು ಕುಂಭ ಕಳಸ ಹೊತ್ತು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಯಿತು.

ಯಲಬುರ್ಗಾ: ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ 9ನೇ ವರ್ಷದ ಈಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ತ್ರಿವಿಧ ದಾಸೋಹ ಮೂರ್ತಿ ಕಲಬುರ್ಗಿ ಶರಣಬಸವೇಶ್ವರ ಪುರಾಣವನ್ನು ಚಿಕ್ಕಬೊಮ್ಮನಾಳ ಮಲ್ಲಿಕಾರ್ಜುನ ಸ್ವಾಮಿ ಸೋಮನಾಳ ಹಾಗೂ ಭರಮಣ್ಣ ಜಿನ್ನಾಪುರ ಅವರಿಂದ ಸಾಗಿ ಬಂದು ಮಹಾಮಂಗಲಗೊಂಡಿತು.ಶರಣ ಬಸವೇಶ್ವರ ಪೂರಾಣ ಮಹಾಮಂಗಲ ಪ್ರಯುಕ್ತ ಬೆಳಿಗ್ಗೆ ಶರಣ ಬಸವೇಶ್ವರ ಭಾವಚಿತ್ರ ಹಾಗೂ ಮಹಿಳೆಯರು ಕುಂಭ ಕಳಸ ಹೊತ್ತು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಯಿತು.ಬಳಿಕ ಕಟಗಿಹಳ್ಳಿಯ ವೀರಯ್ಯ ಹಿರೇಮಠ ಮಾತನಾಡಿ, ಪ್ರತಿಯೊಬ್ಬರು ಸಾಮೂಹಿಕ ವಿವಾಹ ಮಾಡಿಕೊಳ್ಳುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಹುಚ್ಚಿರೇಶ್ವರ ಮಠದ ವೀರಯ್ಯ ಸ್ವಾಮೀಜಿ ಮಾತನಾಡಿದರು. ನಂತರ ಒಂಬತ್ತು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.ಸುಭಾಷ ಚಂದ್ರಯ್ಯ ಸ್ವಾಮೀಜಿ, ಮುಖಂಡರಾದ ಶರಣಪ್ಪ ಜಿನ್ನಾಪುರ, ಹನುಮೇಶಪ್ಪ ಹನುಮನಾಳ, ಹನುಮರೆಡ್ಡಿ ರೆಡ್ಡೆರ, ಹನುಮಂತಪ್ಪ ಹೊರಪೇಟಿ ,ಮರಿಯಪ್ಪ ಓಲೆಕಾರ, ಮಾರುತಿ ಪಿ.ಆರ್. ಹೆಗ್ಡೆ, ಶಂಕರ್ ಅಂಗಡಿ, ಬಸವರಾಜ್ ಕಡಾಪುರ, ಭೀಮನಗೌಡ ಅಂಗಡಿ, ಗಿರೇಗೌಡ ಪೊಲೀಸ್ ಪಾಟೀಲ್, ಹನುಮಂತಪ್ಪ ತರಲಕಟ್ಟಿ, ನಿರುಪಾದಿ ಹನುಮನಾಳ, ಹನುಮೇಶ ಇದ್ದರು.