ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ರಾಯರಕೊಪ್ಪಲು ಮಗ್ಗೆ ಇನ್ಸ್ಪೈರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಡಿ.6ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರಾಧಮ್ಮ ಜನಸ್ಪಂದನ ವತಿಯಿಂದ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ರಾಧಮ್ಮ ಜನಸ್ಪಂದನಾ ಸಂಸ್ಥೆಯ ಅಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.ಪತ್ರಿಕಾ ಹೇಳಿಕೆ ನೀಡಿದ ಅವರು, ಶುಕ್ರವಾರದಂದು ಬಾಲಗಂಗಾಧರನಾಥ ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ಆಸ್ಪತ್ರೆ, ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಶಂಭುನಾಥ ಸ್ವಾಮೀಜಿಯವರ ಸಂಪೂರ್ಣ ಸಹಕಾರದೊಂದಿಗೆ ನುರಿತ 30 ವೈದ್ಯರ ತಂಡವನ್ನ ಹಾಗೂ ನೇತ್ರ ತಪಾಸಣೆ ನಡೆಸಿ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಶಸ್ತ್ರ ಚಿಕಿತ್ಸೆಗೆ ಒಳಗಾದಂತಹ ರೋಗಿಗಳನ್ನ ಅವರ ಮನೆಗೆ ಬಿಡುವ ವ್ಯವಸ್ಥೆಯನ್ನ ಮಾಡಲಾಗಿದೆ. ಮತ್ತು ಇದೇ ಶಿಬಿರದಲ್ಲಿ ಹಾಸನದ ಪ್ರಸಿದ್ಧ ಆಸ್ಪತ್ರೆಯಾದ ಸ್ಪರ್ಶ ಆಸ್ಪತ್ರೆ ಕೂಡ ಭಾಗವಹಿಸುತ್ತಿದ್ದು, ಸೇವಾ ಮನೋಭಾವದಿಂದ ಈ ಆಸ್ಪತ್ರೆಯಲ್ಲಿ ಇರುವ ಪ್ರಖ್ಯಾತ ವೈದ್ಯರಾದ ಹರ್ಷ ಸುರೇಶ್ ಮತ್ತು ಕೀಲು ಮತ್ತು ಮೂಳೆಗೆ ಸಂಬಂಧಪಟ್ಟಂತಹ ವೈದ್ಯರಾದ ಶರತ್ ಕೌಶಿಕ್ ಕೂಡ ಆರೋಗ್ಯ ತಪಾಸಣೆ ಮಾಡಲು ಮತ್ತು ಇವರೊಂದಿಗೆ ಸ್ಪರ್ಶ ಆಸ್ಪತ್ರೆಯ ನರ್ಸಿಂಗ್ ಇಸಿಜಿ ವ್ಯವಸ್ಥೆ ಸಹ ಉಚಿತವಾಗಿದ್ದು, ಇದರ ಸದುಪಯೋಗವನ್ನು ಆಲೂರು ತಾಲೂಕಿನ ಸಮಸ್ತ ನಾಗರಿಕರು ಬಳಸಿಕೊಳ್ಳಬೇಕೆಂದು ಹೇಮಂತ್ ಕುಮಾರ್ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಈ ಶಿಬಿರದಲ್ಲಿ ಭಾಗವಹಿಸುವವರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಔಷಧಿಗಳನ್ನ ಸಹ ಉಚಿತವಾಗಿ ಕೊಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಧಮ್ಮ ಜನಸ್ಪಂದನ ಕಚೇರಿಯ ದೂರವಾಣಿ 91 90196 66011 ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.