ಸಾರ್ವಜನಿಕ ವಿಜಯದಶಮಿ ಉತ್ಸವ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ದಸರಾ ಮಹೋತ್ಸವದ ವಿಜೃಂಭಣೆಯ ಆಚರಣೆ ಪ್ರಚಾರಕ್ಕಾಗಿ ಭಾನುವಾರ ಯುವಕರ ಬೃಹತ್ ಬೈಕ್ ರ್ಯಾಲಿ ನಡೆಯಿತು. ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ ಬೈಕ್ ರ್ಯಾಲಿಗೆ ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ್ ಚಾಲನೆ ನೀಡಿದ್ದಾರೆ.
- ಕೊಟ್ರ ಬಸಪ್ಪ ವೃತ್ತದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಆನಂದ್ ಚಾಲನೆ
- - -ದಾವಣಗೆರೆ: ಸಾರ್ವಜನಿಕ ವಿಜಯದಶಮಿ ಉತ್ಸವ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ದಸರಾ ಮಹೋತ್ಸವದ ವಿಜೃಂಭಣೆಯ ಆಚರಣೆ ಪ್ರಚಾರಕ್ಕಾಗಿ ಭಾನುವಾರ ಯುವಕರ ಬೃಹತ್ ಬೈಕ್ ರ್ಯಾಲಿ ನಡೆಯಿತು. ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ ಬೈಕ್ ರ್ಯಾಲಿಗೆ ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ್ ಚಾಲನೆ ನೀಡಿದರು.
ರ್ಯಾಲಿಯು ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಿಂದ ಆರಂಭಗೊಂಡು ಅಕ್ಕ ಮಹಾದೇವಿ ರಸ್ತೆ, ಜಯಚಾಮರಾಜೇಂದ್ರ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ವಿನೋಬ ನಗರ 2ನೇ ಮುಖ್ಯ ರಸ್ತೆ, ಶಾಮನೂರು ಮುಖ್ಯ ರಸ್ತೆ, ಗುಂಡಿ ಸರ್ಕಲ್, ಡೆಂಟಲ್ ಕಾಲೇಜು ರಸ್ತೆ, ಮಹಾತ್ಮಾ ಗಾಂಧಿ ವೃತ್ತ, ಐಟಿಐ ಕಾಲೇಜು, ನಿಟ್ಟುವಳ್ಳಿ 60 ಅಡಿ ರಸ್ತೆ, ದುರ್ಗಾಂಬಿಕಾ ದೇವಸ್ಥಾನ, ಕಾಲೇಜು ರಸ್ತೆ, ಎಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ ರಸ್ತೆ, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಚಿತ್ರಮಂದಿರ ರಸ್ತೆ, ಈರುಳ್ಳಿ ಮಾರುಕಟ್ಟೆ, ಗಣೇಶ ಹೋಟೆಲ್, ಬಂಬೂ ಬಜಾರ್, ವೆಂಕಟೇಶ್ವರ ವೃತ್ತ, ಅರಳಿಮರ ಸರ್ಕಲ್, ಹಳೇ ಬೇತೂರು ರಸ್ತೆ, ಹಗೇದಿಬ್ಬ ಸರ್ಕಲ್, ಮದಕರಿ ನಾಯಕ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಪಿ.ಬಿ. ರಸ್ತೆ ಮೂಲಕ ಅಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು.ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಸತೀಶ ಪೂಜಾರಿ, ಜಿಲ್ಲಾ ಸಂಚಾಲಕ ಎಲ್.ಚೇತನ್, ಮಾಜಿ ಮೇಯರ್ ಎಸ್.ಟಿ.ವೀರೇಶ, ಸಮಿತಿ ಸಂಚಾಲಕ ಡಿ.ಎಲ್.ಶಿವಪ್ರಕಾಶ, ಎ.ಆರ್.ಮಲ್ಲಿಕಾರ್ಜುನ್, ಗೌತಮ್ ಜೈನ್, ಲೋಕಿಕೆರೆ ನಾಗರಾಜ, ವೀರೇಶ, ಪುನೀತ್, ಸಂಜು, ರಾಕೇಶ ಭಜರಂಗಿ, ಟಿಂಕರ್ ಮಂಜಣ್ಣ, ಅನಿಲ್, ಪರಶುರಾಮ್, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
- - --18ಕೆಡಿವಿಜಿ47, 48: