ಸಾರಾಂಶ
ಮಹಿಳೆಯರ ಸಮಸ್ಯೆ ಹೇಳಿಕೊಳ್ಳಲು ಮಹಿಳಾ ಆಯೋಗ, ಮಕ್ಕಳ ಸಮಸ್ಯೆ ಹೇಳಲು ಮಕ್ಕಳ ಆಯೋಗ ಇರುವಂತೆ ಪುರುಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂವಿಧಾನಾತ್ಮಕವಾಗಿ ಪುರುಷ ಆಯೋಗ ರಚನೆ ಆಗಲೇಬೇಕೆಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ಒತ್ತಾಯಿಸಿದರು. ಹುಡುಗ ಮೋಸ ಮಾಡಿದರೆ ಯುವತಿ ಮಹಿಳಾ ಆಯೋ ಅಥವಾ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ. ಆದರೆ, ಮೋಸಕ್ಕೊಳಗಾದ ಯುವಕರ ಗೋಳನ್ನು ಕೇಳುವವರೇ ಇಲ್ಲ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಮಹಿಳೆಯರ ಸಮಸ್ಯೆ ಹೇಳಿಕೊಳ್ಳಲು ಮಹಿಳಾ ಆಯೋಗ, ಮಕ್ಕಳ ಸಮಸ್ಯೆ ಹೇಳಲು ಮಕ್ಕಳ ಆಯೋಗ ಇರುವಂತೆ ಪುರುಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂವಿಧಾನಾತ್ಮಕವಾಗಿ ಪುರುಷ ಆಯೋಗ ರಚನೆ ಆಗಲೇಬೇಕೆಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಂವಿಧಾನದಲ್ಲಿ ಹುಡುಗನಿಗೆ ಒಂದು ನ್ಯಾಯ, ಹುಡುಗಿಗೆ ಒಂದು ನ್ಯಾಯ ಎಂದು ಎಲ್ಲಿಯೂ ಇಲ್ಲ. ಇಂದಿನ ದಿನಗಳಲ್ಲಿ ಪ್ರೀತಿಯ ವಿಚಾರದಲ್ಲಿ ಯುವತಿಯರಿಂದಲೇ ಹೆಚ್ಚು ಮೋಸವಾಗುತ್ತಿದೆ. ವಂಚನೆಗೊಳಗಾದ ಯುವಕರು ಆತ್ಮಹತ್ಯೆ ದಾರಿ ಹಿಡಿದ ಉದಾಹರಣೆಗಳೂ ಇವೆ. ಅದೇ ಹುಡುಗ ಮೋಸ ಮಾಡಿದರೆ ಯುವತಿ ಮಹಿಳಾ ಆಯೋ ಅಥವಾ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ. ಆದರೆ, ಮೋಸಕ್ಕೊಳಗಾದ ಯುವಕರ ಗೋಳನ್ನು ಕೇಳುವವರೇ ಇಲ್ಲ. ಇಂತವರಿಗೆ ತಾನು ಬೆಂಬಲ ನೀಡುವುದಾಗಿ ಧೈರ್ಯ ತುಂಬಿದರು.
ಪೊಲೀಸ್ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಹೆಚ್ಚು ಒತ್ತಡ ಇದೆ, ಕಿರುಕುಳ ಇದೆ. ಇದರಿಂದ ಅಲ್ಲಿನ ಸಿಬ್ಬಂದಿ ಕುಗ್ಗಿ ಹೋಗಿದ್ದಾರೆ. ಆದರೆ, ಅದನ್ನು ಅವರು ಎಲ್ಲಿಯೂ ಹೇಳಲಾಗುತ್ತಿಲ್ಲ. ಹಾಗಾಗಿ ಪುರುಷರಿಗೆ ನ್ಯಾಯ ಸಿಗಬೇಕಾದರೆ ಪುರುಷ ಆಯೋಗ ರಚನೆಯಾಗಬೇಕು ಎಂದು ಒತ್ತಾಯಿಸಿದರು.-----
ಫೋಟೋ: ಅಶೋಕ್