ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗೌರ್‍ನರ್ ಅಧಿಕೃತ ಭೇಟಿಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸೇವೆಯೇ ಧ್ಯೇಯ ಎನ್ನುವ ತತ್ವವನ್ನು ಅಕ್ಷರಶಃ ಪಾಲಿಸುತ್ತಾ, ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜಿತವಾಗಿ ಜಾರಿಗೊಳಿಸಿರುವ ಹಾಸನ ಲಯನ್ಸ್ ಕ್ಲಬ್ ನಿಜಕ್ಕೂ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ” ಎಂದರು. ಆರೋಗ್ಯ ಶಿಬಿರಗಳು, ಶಿಕ್ಷಣ ಸಹಾಯ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ನೆರವು ನೀಡುವಂತಹ ವಿವಿಧ ಸೇವಾ ಕಾರ್ಯಗಳನ್ನು ಸಮರ್ಪಕವಾಗಿ ಆಯೋಜಿಸಿರುವುದನ್ನು ಅವರು ವಿಶೇಷವಾಗಿ ಕೊಂಡಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಲಯನ್ಸ್ ಕ್ಲಬ್ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಇತರೆ ಲಯನ್ಸ್ ಕ್ಲಬ್‌ಗಳಿಗೆ ಮಾದರಿಯಾಗಿದೆಯೆಂದು ಲಯನ್ಸ್ ಕ್ಲಬ್ ಜಿಲ್ಲಾ ಗೌರ್ನರ್ ಕುಡ್ಪಿ ಅರವಿಂದ್ ಶೆಣ್ಯೆ ಅಭಿಪ್ರಾಯಪಟ್ಟರು.ನಗರದ ಬಿ.ಎಂ. ರಸ್ತೆ ಬಳಿ ಕುವೆಂಪು ರಸ್ತೆಯಲ್ಲಿರುವ ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗೌರ್‍ನರ್ ಅಧಿಕೃತ ಭೇಟಿಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸೇವೆಯೇ ಧ್ಯೇಯ ಎನ್ನುವ ತತ್ವವನ್ನು ಅಕ್ಷರಶಃ ಪಾಲಿಸುತ್ತಾ, ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜಿತವಾಗಿ ಜಾರಿಗೊಳಿಸಿರುವ ಹಾಸನ ಲಯನ್ಸ್ ಕ್ಲಬ್ ನಿಜಕ್ಕೂ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ” ಎಂದರು. ಆರೋಗ್ಯ ಶಿಬಿರಗಳು, ಶಿಕ್ಷಣ ಸಹಾಯ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ನೆರವು ನೀಡುವಂತಹ ವಿವಿಧ ಸೇವಾ ಕಾರ್ಯಗಳನ್ನು ಸಮರ್ಪಕವಾಗಿ ಆಯೋಜಿಸಿರುವುದನ್ನು ಅವರು ವಿಶೇಷವಾಗಿ ಕೊಂಡಾಡಿದರು. ಕ್ಲಬ್ ಅಧ್ಯಕ್ಷರಾದ ಎಚ್. ರಮೇಶ್ ಅವರ ನಾಯಕತ್ವವನ್ನು ಮೆಚ್ಚಿದ ಅವರು, “ನಾಯಕತ್ವ ಎನ್ನುವುದು ಕೇವಲ ಹುದ್ದೆಯಲ್ಲ, ಕಾರ್ಯದ ಮೂಲಕ ತೋರಿಸಬೇಕಾದದ್ದು. ಆ ದೃಷ್ಟಿಯಿಂದ ಎಚ್. ರಮೇಶ್ ಅವರು ನೂರಕ್ಕೆ ನೂರು ಅರ್ಹತೆಯ ನಾಯಕತ್ವ ನೀಡುವುದರ ಜೊತೆಗೆ, ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತೋರಿಸಿದ್ದಾರೆ” ಎಂದು ಪ್ರಶಂಸಿಸಿದರು. ಅಧ್ಯಕ್ಷರಾಗುವ ಎರಡು ತಿಂಗಳ ಮುಂಚೆಯೇ ವರ್ಷಪೂರ್ತಿ ನಡೆಯುವ ಸೇವಾ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಿ, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿರುವುದು ಕ್ಲಬ್‌ನ ಯಶಸ್ಸಿಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಯೋಜಿತ ಕಾರ್ಯಪದ್ಧತಿ ಹಾಗೂ ಸದಸ್ಯರ ಸಕ್ರಿಯ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದರು. ಈ ಒಂದು ಸದನದಲ್ಲೇ ಹತು ಹಲವಾರು ಸೇವಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದಲ್ಲದೆ, ಕ್ಲಬ್ ಆರಂಭಿಕ ಹಂತದಲ್ಲೇ ೫೦ ಸದಸ್ಯರನ್ನು ಸೇರ್ಪಡೆಗೊಳಿಸಿಕೊಂಡು ಸಂಘಟನೆಯನ್ನು ಬಲಪಡಿಸಿರುವುದು ಗಮನಾರ್ಹ ಸಾಧನೆಯಾಗಿದ್ದು, ಇಂತಹ ಚಟುವಟಿಕೆಗಳು ಇತರೆ ಕ್ಲಬ್‌ಗಳಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ನಂತರ ಜಿಲ್ಲಾ ಗೌರ್ನರ್ ಕುಡ್ಪಿ ಅರವಿಂದ್ ಶೆಣೈ ಹಾಗೂ ಪತ್ನಿ ಮಮತಾ ಶಣೈ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ರಮೇಶ್ ತಂಡದ ಸಾಧನೆಗೆ ಜಿಲ್ಲಾ ಗೌರ್‍ನರ್ ಅವರು ಉಡುಗರೆಯಾಗಿ ಚಿನ್ನದ ಪದಕ ನೀಡಿ ಸೇವೆಗೆ ಉತ್ತೇಜನ ನೀಡಿದರು. ಇದೆ ವೇಳೆ ವಿವಿಧ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನ ಗೌರವಿಸಿದರು. ಕಾರ್ಯಕ್ರಮದಲ್ಲಿ ಹಾಸನ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಎಚ್.ಆರ್. ಚನ್ನೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್. ಆರ್. ಚಂದ್ರೇಗೌಡ, ಸಂಪೂಟ ಖಜಾಂಚಿ ಬಾಲಕೃಷ್ಣ ಹೆಗ್ಗಡೆ, ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರ ಆಶ್ರರೈ, ಖಜಾಂಚಿ ಎಚ್.ಪಿ. ಅಶೋಕ್ ಕುಮಾರ್, ಛೇರ್‍ಮನ್ ಕೆ.ಎಂ. ಮಂಜುನಾಥ್, ಎ.ಸಿ. ರುಕ್ಮಾಂಗದ, ಬಿ.ವಿ. ಹೆಗ್ಗಡೆ, ಸಂಜೀವ್ ಹೆಗ್ಗಡೆ, ವಲಯ ಅಧ್ಯಕ್ಷ ಎಚ್.ಕೆ. ನಾಗೇಶ್, ಸಿ.ಬಿ. ವೆಂಕಟೇಗೌಡ, ಸಿ.ಕೆ. ಕಿರಣ್ ಕುಮಾರ್, ಅರುಣಾ ಅಶೋಕ್ ಕುಮಾರ್, ರೂಪ ಆನಂದ್, ಶಕುಂತಲಾ ಹೆಗ್ಗಡೆ, ಪ್ರೇಮ ಸತ್ಯನಾರಾಯಣ್ಮ, ಪ್ರಕಾಶ್ ಯಾಜಿ, ಎಸ್.ಕೆ. ಸತ್ಯನಾರಾಯಣ್, ಬಿ.ಎಸ್. ಸೋಮಶೇಖರ್, ಎಸ್.ಪಿ. ಅನಂತರಾಜು, ಎಸ್.ಪಿ. ಪ್ರಕಾಶ್ ಹಾಗೂ ಲಿಯೋ ಕ್ಲಬ್ ಕಾರ್ಯದರ್ಶಿ ಸಿ.ಕೆ. ಗುಣಶ್ರೀ, ಖಜಾಂಚಿ ವಿ. ಲೊನಾಲಿ ಗೌಡ ಇತರರು ಉಪಸ್ಥಿತರಿದ್ದರು.