ಸಾರಾಂಶ
ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳದಲ್ಲಿ 4 ತಿಂಗಳ ಮಗುವಿನ ಮೇಲೆ ಕೋತಿಗಳು ದಾಳಿ ಮಾಡಿದ್ದು, ಗಂಭೀರ ಗಾಯವಾದ ಘಟನೆ ಶನಿವಾರ ಸಂಜೆ ನಡೆದಿದೆ.
ಕುಷ್ಟಗಿ: ತಾಲೂಕಿನ ಹಿರೇಮುಕರ್ತಿನಾಳದಲ್ಲಿ 4 ತಿಂಗಳ ಮಗುವಿನ ಮೇಲೆ ಕೋತಿಗಳು ದಾಳಿ ಮಾಡಿದ್ದು, ಗಂಭೀರ ಗಾಯವಾದ ಘಟನೆ ಶನಿವಾರ ಸಂಜೆ ನಡೆದಿದೆ.ಶಿವಾನಿ ನಿರುಪಾದಿ ವಾಲ್ಮೀಕಿ ಗಾಯಗೊಂಡ ಬಾಲಕಿ. ಮಗುವನ್ನು ತಾವರಗೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.
ಸುಮಾರು ಐದು ತಿಂಗಳ ಹಿಂದೆ ಇಂತಹ ಪ್ರಕರಣ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಪಿಡಿಒಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಗ್ರಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳನ್ನು ಸ್ಥಳಾಂತರಿಸಲು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.