ಪುಟ...4ಕ್ಕೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು

| Published : Jan 02 2025, 12:31 AM IST

ಸಾರಾಂಶ

ದೇವರಹಿಪ್ಪರಗಿ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ತಾಯಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹರನಾಳ ಗ್ರಾಮದ ಬಸಪ್ಪ ತಿಪ್ಪಣ್ಣ ನಾಯ್ಕೋಡಿ ಎಂಬುವರ ಜಮೀನಿನಲ್ಲಿ ಶುಕ್ರವಾರ ಸಂಭವಿಸಿದೆ. ಹರನಾಳ ಗ್ರಾಮದ ರಾಮಪ್ಪ ನಾಯ್ಕೋಡಿ ಮಗಳಾದ ಯಾಳವಾರದ ಗೀತಾ ಶ್ರೀಶೈಲ ಬಡಗಿ (30), ಇವರ ಮಕ್ಕಳಾದ ಶರತ್ ಶ್ರೀಶೈಲ ಬಡಗಿ (6) ಹಾಗೂ ಶ್ರವಣ ಶ್ರೀಶೈಲ ಬಡಗಿ(4) ಮೃತಪಟ್ಟವರು.

ಗೀತಾ ಹಾಗೂ ಮಕ್ಕಳು ಹೊಲಕ್ಕೆ ತೆರಳಿದ್ದ ವೇಳೆ ಮೆಕ್ಕೆಜೋಳಕ್ಕೆ ನೀರು ಬಿಡಲು ಕೃಷಿ ಹೊಂಡದ ಬಳಿ ಮೂವರು ಹೋಗಿದ್ದರು. ಈ ವೇಳೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೋ ಅಥವಾ ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಬಿದಿದ್ದಾರೋ ತಿಳಿದಿಲ್ಲ. ಆಗ ತಾಯಿ ಗೀತಾ ಅವರನ್ನು ರಕ್ಷಣೆ ಮಾಡಲು ಹೋಗಿದ್ದು, ಆಕೆಗೂ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮೃತಳ ತಂದೆ ರಾಮಪ್ಪ ನಾಯ್ಕೋಡಿ ದೇವರಹಿಪ್ಪರಗಿ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.