ಕೆಸರುಗದ್ದೆಯಂತಾದ ರಸ್ತೆ, ರೈತರ ಪರದಾಟ

| Published : Aug 01 2025, 12:30 AM IST

ಸಾರಾಂಶ

ರಸ್ತೆಯನ್ನು ದುರಸ್ತಿ ಮಾಡಬೇಕೆಂದು ರೈತರಾದ ಧನಪಾಲ ಕೋಳೂರ, ಮಲ್ಲಿಕಾರ್ಜುನ ಪೂಜಾರ, ವೀರಭದ್ರಯ್ಯ ಪೂಜಾರ, ಎಲ್ಲಪ್ಪ ಕಾಳಿ, ಹುಸೇನಸಾಬ ಬಂಕಾಪೂರ, ಮುತ್ತಪ್ಪ ಯಲ್ಲಾಪುರ ಇತರರು ಆಗ್ರಹಿಸಿದ್ದಾರೆ.

ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಮತ್ತು ಕುನ್ನೂರ ಗ್ರಾಮಗಳ ಮಧ್ಯೆ ಹಾದು ಹೋಗಿರುವ ದೊಡ್ಡಕೇರಿ(ಹೊಳಗಟ್ಟಿ)ಕಾಲುವೆಯ ಪಕ್ಕದ ಹೊಲಗಳಿಗೆ ಸಂಪರ್ಕಿಸುವ ರಸ್ತೆಯು ಅತಿಯಾದ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದ್ದು, ಕೆಸರುಗದ್ದೆಯಂತಾಗಿದೆ.

ಇದರಿಂದ ಪ್ರತಿನಿತ್ಯ ಹೊಲಗಳಿಗೆ ಕೆಲಸಕ್ಕೆ ಹೋಗುವ ರೈತರು ಹರಸಾಹಸ ಪಡುವಂತಾಗಿದೆ. ಶ್ಯಾಡಂಬಿ ಮತ್ತು ಕುನ್ನೂರ ಗ್ರಾಮದ ಈ ರಸ್ತೆಯ ಆಸುಪಾಸಿನಲ್ಲಿ ನೂರಾರು ಹೆಕ್ಟೇರ್ ಭೂಮಿಯಿದ್ದು, ಶ್ಯಾಡಂಬಿ ಹದ್ದಿನವರೆಗಾದರೂ ರಸ್ತೆ ದುರಸ್ತಿ ಇಲ್ಲದೆ ಸಾಕಷ್ಟು ರೈತರು ಹೊಲಗಳಿಗೆ ಹೋಗಿ ಬರಲು ಸಮಸ್ಯೆಯಾಗಿದೆ.ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ರೈತರಾದ ಧನಪಾಲ ಕೋಳೂರ, ಮಲ್ಲಿಕಾರ್ಜುನ ಪೂಜಾರ, ವೀರಭದ್ರಯ್ಯ ಪೂಜಾರ, ಎಲ್ಲಪ್ಪ ಕಾಳಿ, ಹುಸೇನಸಾಬ ಬಂಕಾಪೂರ, ಮುತ್ತಪ್ಪ ಯಲ್ಲಾಪುರ ಇತರರು ಆಗ್ರಹಿಸಿದ್ದಾರೆ.ಕಸಾಪದಿಂದ ಶ್ರಾವಣ ಸಂಜೆ ಸಾಹಿತ್ಯ ಗೋಷ್ಠಿ

ಹಿರೇಕೆರೂರು: ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದಿಂದ ಆ. 1, 4, 11 ಹಾಗೂ 18ರಂದು ಶ್ರಾವಣ ಸಂಜೆ ಸಾಹಿತ್ಯ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಆ. 1ರಂದು ದೂದೀಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಂಜೆ 5ಕ್ಕೆ ಶ್ರಾವಣ ಸಂಜೆಯ 1ನೇ ಸಾಹಿತ್ಯ ಗೋಷ್ಠಿ ನಡೆಯಲಿದೆ. ಗೋಷ್ಠಿಯನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸುವರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸುವರು.ಚನ್ನಳ್ಳಿ ಗ್ರಾಪಂ ಅಧ್ಯಕ್ಷೆ ಕುಸುಮಾ ಮಾಗನೂರ, ಕಸಾಪ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ರಟ್ಟೀಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ, ತಹಸೀಲ್ದಾರ್ ಎಂ. ರೇಣುಕಾ, ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಕೆ.ಡಿ. ದೀವಿಗಿಹಳ್ಳಿ, ಎಂ.ಬಿ. ಕಾಗಿನೆಲ್ಲಿ, ಪ್ರಾಚಾರ್ಯ ನಾಗರಾಜ ಕೆರೂರ, ಪ್ರಕಾಶ ಹಿತ್ಲಳ್ಳಿ, ಬಿ.ಎಸ್. ಪಾಟೀಲ ಉಪಸ್ಥಿತರಿರುವರು. ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಪ್ರಾಧ್ಯಾಪಕ ಸಂತೋಷಕುಮಾರ ಎಸ್.ಜಿ. ಉಪನ್ಯಾಸ ನೀಡುವರು.

ಆ. 4ರಂದು ಹಿರೇಕೆರೂರಿನ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಸಂಜೆ 5 ಗಂಟೆಗೆ ಶ್ರಾವಣ ಸಂಜೆಯ 2ನೇ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಗೋಷ್ಠಿಯನ್ನು ತಾಪಂ ಇಒ ರವಿ ಎನ್. ಉದ್ಘಾಟಿಸುವರು. ಶರಣರ ದೇಗುಲ ಕಲ್ಪನೆ ಕುರಿತು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ್ ಉಪನ್ಯಾಸ ನೀಡುವರು.

ಆ. 11ರಂದು ಸಂಜೆ 5ಕ್ಕೆ ಹಿರೇಕೆರೂರಿನ ವಿಶ್ವಚೇತನ ನವೋದಯ ತರಬೇತಿ ಕೇಂದ್ರದಲ್ಲಿ ಶ್ರಾವಣ ಸಂಜೆಯ 3ನೇ ಸಾಹಿತ್ಯ ಗೋಷ್ಠಿ ನಡೆಯಲಿದೆ. ಗೋಷ್ಠಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ ಉದ್ಘಾಟಿಸುವರು. ಮಹಿಳಾ ವಚನಗಾರ್ತಿಯರ ಕಾಯಕ ಪ್ರಜ್ಞೆ ಕುರಿತು ಶಾರದಾ ಗೋಪಾಲ ಉಪನ್ಯಾಸ ನೀಡುವರು.

ಆ. 18ರಂದು ಪಟ್ಟಣದ ಸಿಇಎಸ್ ಸಂಸ್ಥೆಯ ಆವರಣದಲ್ಲಿ ಮಧ್ಯಾಹ್ನ 4.30ಕ್ಕೆ ಶ್ರಾವಣ ಸಂಜೆಯ 4ನೇ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಗೋಷ್ಠಿಯನ್ನು ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಪಾಟೀಲ ಉದ್ಘಾಟಿಸುವರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಬಿಇಒ ಎನ್. ಶ್ರೀಧರ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.