ಸಾರಾಂಶ
- ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತಿ ವೀರಭದ್ರಪ್ಪ ತೆಲಗಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಈ ಬಹುಭಾಷಾ ಕವಿಗೋಷ್ಠಿ ಭಾವೈಕ್ಯತೆಯ ಸಾಮರಸ್ಯವನ್ನು ಕಲ್ಪಿಸುವ ವೇದಿಕೆಯಾಗಿದೆ. ಪ್ರಸ್ತುತ ಇದರ ಅವಶ್ಯಕತೆ ಇತ್ತು ಎಂದು ಚುಟುಕು ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ, ಸಾಹಿತಿ ವೀರಭದ್ರಪ್ಪ ತೆಲಗಿ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ, ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಾತುಗಳಲ್ಲಿ, ಬರಹಗಳಲ್ಲಿ ಭಾವೈಕ್ಯತೆ ಕುರಿತು ಮಾತನಾಡಿದ್ದಾರೆ. ಅದನ್ನು ಕಾರ್ಯರೂಪದಲ್ಲಿ ತರಲು ಈ ಬಹುಭಾಷಾ ಕವಿಗೋಷ್ಠಿ ಮೂಲಕ ಸಣ್ಣಪ್ರಯತ್ನ ಮಾಡಲಾಗಿದೆ ಎಂದರು.ಮಾದರಿ ಕವಿಗೋಷ್ಠಿ:
ಇಲ್ಲಿ ನಡೆಯುತ್ತಿರುವ ಕವಿಗೋಷ್ಠಿಯಲ್ಲಿ 31 ಕವಿಗಳು ತಮ್ಮ ಇಚ್ಛಿತ ಭಾಷೆಯ ಕವನಗಳನ್ನು ವಾಚನ ಮಾಡುತ್ತಿದ್ದಾರೆ. ಅವರಲ್ಲಿ 17 ಕವಿಗಳು ಕನ್ನಡದಲ್ಲಿ, ನಾಲ್ವರು ಇಂಗ್ಲಿಷ್‌ನಲ್ಲಿ, ಐವರು ಹಿಂದಿಯಲ್ಲಿ, ಮೂವರು ಉರ್ದು ಭಾಷೆಯಲ್ಲಿ, ಇಬ್ಬರು ಕೊಂಕಣಿ ಭಾಷೆಯಲ್ಲಿ ಕವನ ವಾಚನ ಮಾಡುತ್ತಿದ್ದಾರೆ. ಭರತ ಖಂಡದಲ್ಲಿಯೇ ಅಲ್ಲ ಇಡೀ ವಿಶ್ವದ ನಾಲ್ಕು ಭಾಗಗಳಲ್ಲಿಯೂ ಕೂಡ ಬಹುಭಾಷಾ ಕವಿಗಳು ಸಿಗುತ್ತಾರೆ. ನಮ್ಮ ದಾವಣಗೆರೆಯಲ್ಲಿ ಈ ಬಹುಭಾಷಾ ಕವಿಗೋಷ್ಠಿ ಮಾದರಿ ಕವಿಗೋಷ್ಠಿಯಾಗಿದೆ ಎಂದು ತಿಳಿಸಿದರು.ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ ಕಾಣುತ್ತದೆ. ಕವಿತೆಗೂ ಕಣ್ಣು ಇದೆ. ಕವಿಯ ಕಾಣಿಕೆ ಕಾವ್ಯ ಆಗಿರಬೇಕು. ಆ ಕಾಣಿಕೆ ಎನ್ನುವುದು ಅವರ ಅಂತರಂಗದ ಶಾಂತಿ, ಕಾಂತಿಯನ್ನು ಬಿಂಬಿಸುತ್ತದೆ. ಅಂತರಂಗವಿಲ್ಲದೇ ಯಾವುದೇ ಬಹಿರಂಗದ ಚಟುವಟಿಕೆಗಳು ಪ್ರಾಪಂಚಿಕವಾಗಿ ಬರಲು ಸಾಧ್ಯವಿಲ್ಲ. ಪ್ರಾಪಂಚಿಕವಾಗಿ, ಆಧ್ಯಾತ್ಮಿಕವಾಗಿ ಅವು ಬರಬೇಕಾದರೆ ಅಂತರಂಗದೊಳಗೆ ಕಾರ್ಯಗತವಾಗಬೇಕು. ಆಗ ಮಾತ್ರ ಬಹಿರಂಗಕ್ಕೆ ಬರಲು ಸಾಧ್ಯ ಎಂದು ತಿಳಿಸಿದರು.
ಕಾನೂನು ಕೃತಿಗಳ ಬರಹಗಾರ, ವಕೀಲ ಕೆ.ದಾದಾಪೀರ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ, ಸಂಧ್ಯಾ ಸುರೇಶ, ಮಹಾಂತೇಶ ಬಿ.ನಿಟ್ಟೂರು, ಚುಸಾಪ ಕಾರ್ಯದರ್ಶಿ ಕೆ.ಪಿ.ತಾರೇಶ ಅಣಬೇರು, ಪಕ್ಕೀರೇಶ ಆದಾಪುರ, ಬಿಎಂಜಿ ವೀರೇಶ, ಉಮಾದೇವಿ ಹಿರೇಮಠ, ಸತ್ಯಭಾಮ, ಸುನಿತಾ ಪ್ರಕಾಶ, ಲಲಿತಕುಮಾರ ಜೈನ್, ಜಿ.ವಿ.ಸುನಿತಾ ಇತರರು ಭಾಗವಹಿಸಿದ್ದರು.ಸಾಲಿಗ್ರಾಮ ಗಣೇಶ ಶೆಣೈ, ಶ್ರೀಕಾಂತ ಭಟ್, ಜಯಮ್ಮ ನೀಲಗುಂದ, ಡಾ.ಆರತಿ ಸುಂದರೇಶ, ಸೈಯದ್ ಖಮರುದ್ದೀನ್, ವೀಣಾ ಹರಿಹರ, ಇತರರು ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.
- - -ಬಾಕ್ಸ್ * ಮೊದಲ ಪ್ರಯೋಗವಿದು: ಜಿಲ್ಲಾಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಎಚ್.ರಾಜಶೇಖರ ಗುಂಡಗಟ್ಟಿ ಮಾತನಾಡಿ, ಬಹುಭಾಷಾ ಕವಿಗೋಷ್ಠಿ ನಮ್ಮ ಪರಿಷತ್ತಿನ ಮೊದಲ ಪ್ರಯೋಗವಾಗಿದೆ. ಇದು ಸಮಾಜಕ್ಕೆ ಒಂದು ಬಳುವಳಿಯಾಗಿ, ಮುಂದಿನ ಪೀಳಿಗೆಗೆ ಕೂಡ ಇದು ಬೆಳೆಯಬೇಕು. ಭಾಷಾ ಸಾಮರಸ್ಯ, ಭಾವೈಕ್ಯತೆಯ ಸಾಮರಸ್ಯ ಪ್ರಸ್ತುತ ಕಾಲದಲ್ಲಿ ಬೆಳೆಯಬೇಕಾಗಿದೆ. ಆದಕಾರಣ ಈ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುವಂತಾಗಬೇಕು. ಈ ಕಾರ್ಯಕ್ರಮಕ್ಕೆ ಪರಿಷತ್ತು ಸಹ ಸಹಕಾರಿ ಆಗಿರುತ್ತದೆ ಎಂದರು.
- - - -6ಕೆಡಿವಿಜಿ44ಃ:ದಾವಣಗೆರೆಯಲ್ಲಿ ಜಿಲ್ಲಾ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯನ್ನು ಕೆ.ದಾದಾಪೀರ್ ಉದ್ಘಾಟಿಸಿದರು. ಗುಂಡಗತ್ತಿ ರಾಜಶೇಖರ ಮತ್ತಿತರ ಮುಖಂಡರು ಇದ್ದರು.