ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಮೀಪದ ಕೃಷಿ ಭೂಮಿಯಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಅವರ ಸಹೋದರ ಪುರಸಭೆ ಮಾಜಿ ಸದಸ್ಯ ಎಚ್.ಕೆ.ಗಂಗಾಧರ ಹಾಗೂ ಸ್ನೇಹಿತರು ಆಯೋಜಿಸಿರುವ ೨ ದಿನಗಳ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಧೂಳೆಬ್ಬಿಸಿ, ಮೈ ನವಿರೇಳಿಸಿದರು. ಎರಡು ದಿನದ ಈ ಸ್ಪರ್ಧೆಯು ಸಾಹಸ ಪ್ರಿಯರಿಗೆ ಅಮೋಘ ಮನೋರಂಜನೆ ನೀಡಲಿದೆ. ಪುರಸಭೆ ಮಾಜಿ ಸದಸ್ಯ ಎಚ್.ಕೆ.ಗಂಗಾಧರ ಮಾತನಾಡಿ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣನವರ ಆಶೀರ್ವಾದೊಂದಿಗೆ, ಡಾ. ಸೂರಜ್ ಅವರ ಸಹಕಾರದಲ್ಲಿ ಸ್ನೇಹಿತರ ಜತೆಗೂಡಿ ಪಟ್ಟಣದಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ವಿಶಿಷ್ಟವಾಗಿ ಸಿದ್ಧಪಡಿಸಿದ್ದ ಅಂಕುಡೊಂಡು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಬೈಕ್ ಹಾಗೂ ಕಾರುಗಳ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ, ೧೩ ವಿಭಾಗಗಳ ದ್ವಿಚಕ್ರ ವಾಹನಗಳ ಸ್ಪರ್ಧೆ ಹಾಗೂ ೯ ವಿಭಾಗದಲ್ಲಿ ನಾಲ್ಕು ಚಕ್ರ ವಾಹನಗಳ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲೂ ವಿಜೇತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನಗಳು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಜತೆಗೆ ಅತ್ಯುತ್ತಮ ರೈಡರ್, ಅತಿವೇಗದ ಚಾಲಕ ಹಾಗೂ ಟ್ಯೂನರ್‌ಗಳ ಟ್ರೋಫಿಯನ್ನು ಬೈಕ್ ಹಾಗೂ ಕಾರ್ ಚಾಲಕ ಸ್ಪರ್ಧಿಗಳಿಗೆ ನೀಡಲಾಗುತ್ತದೆ ಎಂದರು.ಟಾಪರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಎಚ್.ಕೆ.ಚಲುವರಾಜು, ರಾಘವೇಂದ್ರ, ರಾಜು, ಚಲುವ, ಗುರು, ಮಹೇಶ, ಸುಬ್ಬು, ಬಾಬು, ರಾಜೇಶ, ಇತರರು ಸಹಕರಿಸಿದರು.