ಕೂತನೂರಲ್ಲಿ ಹೊಸ ಬೋರ್‌ವೆಲ್‌ ಕೊರೆದಾಯ್ತು, ನೀರು ಬಂತು: ಪಿಡಿಒ ಕುಮಾರಸ್ವಾಮಿ

| Published : Jul 28 2024, 02:03 AM IST

ಕೂತನೂರಲ್ಲಿ ಹೊಸ ಬೋರ್‌ವೆಲ್‌ ಕೊರೆದಾಯ್ತು, ನೀರು ಬಂತು: ಪಿಡಿಒ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಕೂತನೂರಲ್ಲಿ ಕುಡಿಯುವ ನೀರಿಗೆ ಬರ ಸುದ್ದಿಯ ಬೆನ್ನಲ್ಲೆ ಗ್ರಾಮದ ಬಳಿ ಶನಿವಾರ ಬೆಳಗ್ಗೆಯೆ ಹೊಸ ಬೋರ್‌ವೆಲ್‌ ಕೊರೆಸಿ, ನೀರು ಕೂಡ ಮಧ್ಯಾಹ್ನದ ಬಳಿಕ ಬಂದಿದೆ ಎಂದು ಕೂತನೂರು ಗ್ರಾಮ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕೂತನೂರಲ್ಲಿ ಕುಡಿಯುವ ನೀರಿಗೆ ಬರ ಸುದ್ದಿಯ ಬೆನ್ನಲ್ಲೆ ಗ್ರಾಮದ ಬಳಿ ಶನಿವಾರ ಬೆಳಗ್ಗೆಯೆ ಹೊಸ ಬೋರ್‌ವೆಲ್‌ ಕೊರೆಸಿ, ನೀರು ಕೂಡ ಮಧ್ಯಾಹ್ನದ ಬಳಿಕ ಬಂದಿದೆ ಎಂದು ಕೂತನೂರು ಗ್ರಾಪಂ ಪಿಡಿಒ ಕುಮಾರಸ್ವಾಮಿ ತಿಳಿಸಿದ್ದಾರೆ.ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಕಂಡು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಹಾಗೂ ತಾಪಂ ಇಒ ಸಹಕಾರದಲ್ಲಿ ಬೋರ್‌ ಕೊರೆಸಿದ್ದು ನೀರು ಕೂಡ ಬಂದಿದೆ ಎಂದರು. ಹೊಸ ಬೋರ್‌ ವೆಲ್‌ಗೆ ಕೇಬಲ್‌ ಅಳವಡಿಸಿ ನೀರು ವಿತರಿಸಲು ಗ್ರಾಪಂ ಕ್ರಮ ತೆಗೆದುಕೊಂಡಿದ್ದು, ಗ್ರಾಮಸ್ಥರು ಬಹುಗ್ರಾಮ ಯೋಜನೆಯ ನೀರು ಬರುವ ತನಕ ನೀರನ್ನು ಮಿತವಾಗಿ ಬಳಸಲು ಕೋರಿದ್ದಾರೆ.

ಕೂತನೂರಿಗೆ ಬಹುಗ್ರಾಮದ ಯೋಜನೆ ನೀರು ಸ್ಥಗಿತಗೊಂಡಿದೆ. ಜೊತೆಗೆ ಗ್ರಾಮದ ಬಳಿಯಿದ್ದ ಬೋರ್‌ ವೆಲ್‌ ಗಳು ಇದ್ದ ಜಾಗದಲ್ಲಿ ನೀರು ತುಂಬಿದ ಕಾರಣ ನೀರಿನ ಸಮಸ್ಯೆ ಉಲ್ಭಣಗೊಂಡಿತು ಎಂದರುಮೋಟರ್‌ ಕದ್ದವರ ಮೇಲೇಕೆ ಪೊಲೀಸರಿಗೆ ಅನುಕಂಪ?ಕೂತನೂರು ಗ್ರಾಪಂಗೆ ಸೇರಿದ ಎರಡು ನೀರೆತ್ತುವ ಮೋಟರ್‌ ಕದ್ದವರ ಮೇಲೇಕೆ ಗುಂಡ್ಲುಪೇಟೆ ಪೊಲೀಸ್‌ ಠಾಣೇಲಿ ಕೇಸು ದಾಖಲು ಆಗಿಲ್ಲ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳಿದ್ದಾರೆ. ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಅರಿತು ಕನ್ನಡಪ್ರಭ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳದಲ್ಲಿದ್ದ ಗ್ರಾಮಸ್ಥರಲ್ಲಿ ಕೆಲವರು ಗ್ರಾಪಂ ನೀರೆತ್ತುವ ಯಂತ್ರ ಕದ್ದವರ ಮೇಲೆ ದೂರು ನೀಡಿದ್ರೂ ಕೇಸು ದಾಖಲಿಸಿಲ್ಲವೇಕೆ ಎಂದಿದ್ದಾರೆ.