ಗಮನ ಸೆಳೆದ ಮಕ್ಕಳ ಮೆರವಣಿಗೆ

| Published : Dec 24 2023, 01:45 AM IST

ಸಾರಾಂಶ

ರೈತ ದಿನಾಚರಣೆ ಅಂಗವಾಗಿ ಚಿಣ್ಣರು ಇಲಕಲ್ ಸೀರೆ, ದೇಶಿಯ ಗತ್ತು ಹೊತ್ತು ಬೃಹತ್‌ ರೈತದ್ವಜ ಹೊತ್ತು ರೈತಪರ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು.

ಮುದೋಳ:

ರೈತ ದಿನಾಚರಣೆ ಅಂಗವಾಗಿ ಚಿಣ್ಣರು ಇಲಕಲ್ ಸೀರೆ, ದೇಶಿಯ ಗತ್ತು ಹೊತ್ತು ಬೃಹತ್‌ ರೈತದ್ವಜ ಹೊತ್ತು ರೈತಪರ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು.ಮುದೋಳದ ಶ್ರೀ ಸಂಗಮನಾಥ ಶಾಲಾ ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಜಿಪಂ ಅಧ್ಯಕ್ಷ ಶಿವಕುಮಾರ ಮಲಘಾಣ ಹಾಗೂ ನಗರಸಭೆ ಸದಸ್ಯ ಡಾ.ಸತೀಶ ಮಲಘಾಣ ಅವರಿಂದ ಚಾಲನೆಗೊಂಡ ಪಥಸಂಚಲನ ನಗರದ ಬಸವೇಶ್ವರ ವೃತ್ತ, ಜಡಗಾಬಾಲ ವೃತ್ತ, ಉತ್ತೂರ ಗೇಟ್, ಕಲ್ಮೇಶ್ವರ ಚೌಕ, ಗಾಂಧಿ ಸರ್ಕಲ್ ಮಾರ್ಗವಾಗಿ ಶಿವಾಜಿ ಸರ್ಕಲ್ ಮೂಲಕ ತ್ರಿವೇಣಿ ಶಿಕ್ಷಣ ಸಂಸ್ಥೆ ತಲುಪಿತು.

ನಂತರ ವಿದ್ಯಾರ್ಥಿಗಳಿಂದ ರೈತ ನೃತ್ಯ, ರೂಪಕ ಹಾಗೂ ಕಿರು ನಾಟಕ, ಬಾಷಣ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ರೈತರಲ್ಲಿ ಹುಮ್ಮಸ್ಸು ತಂದುಕೊಟ್ಟಿತು.

-----------

ಪೋಟೋ ಡಿ.23ಎಮ್‌ಡಿಎಲ್ 4ಎ