ಸಾರಾಂಶ
ಕೆರೂರ: ಪರಕೀಯರ ದುರಾಡಳಿತ, ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಿದ ಅಪ್ಪಟ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರು ಎಂದು ಮುಖ್ಯಶಿಕ್ಷಕ ಎಂ.ಎ. ಚಿಗರೊಳ್ಳಿ ಹೇಳಿದರು. ಸೋಮವಾರ ಪಟ್ಟಣದ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೆರೂರ
ಪರಕೀಯರ ದುರಾಡಳಿತ, ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಿದ ಅಪ್ಪಟ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರು ಎಂದು ಮುಖ್ಯಶಿಕ್ಷಕ ಎಂ.ಎ. ಚಿಗರೊಳ್ಳಿ ಹೇಳಿದರು.ಸೋಮವಾರ ಪಟ್ಟಣದ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿವಾಜಿ ಮಹಾರಾಜರ ಸೌರ್ಯ, ಸಾಹಸ, ಇತಿಹಾಸದ ಕುರಿತು ವಿವರಿಸಿದರು. ಅವರು ನೀಡಿದ ಸಂದೇಶ ಅವರ ಆದರ್ಶ ಇಂದಿಗೂ ಪ್ರಸ್ತುತವಾಗಿದ್ದು, ಅವರು ಆದರ್ಶ ಮಾರ್ಗದರ್ಶಕರೆಂದರು. ವೇದಿಕೆಯಲ್ಲಿ ಸಹಶಿಕ್ಷಕಿಯರಾದ ಸೈರಾಬಾನು ಅತ್ತಾರ, ಆರ್.ಬಿ. ಅತ್ತಾರ, ಎ.ಎಸ್. ಪಟ್ಟಣಶೆಟ್ಟಿ, ಯು.ಎಂ. ಕಟಗಿ ಇದ್ದರು.