ಸಾರಾಂಶ
ವ್ಯಸನಮುಕ್ತ ಸಮಾಜದ ಅರಿವು ಮೂಡಿಸಬೇಕಾಗಿದೆ. ಆನಂದವೇ ಸುಖವಾಗಬೇಕು. ವಸ್ತುಗಳೇ ಸುಖ ಎಂಬ ಭಾವನೆ ಬದಲಾಗಬೇಕು.
ಹಾನಗಲ್ಲ: ಸಾಧು ಸತ್ಪುರುಷರ ಪ್ರೇರಣೆ ಸದ್ಗುರುವಿನ ಅನುಗ್ರಹ, ಸತ್ಸಂಗದಿಂದ ಮಾತ್ರ ನೆಮ್ಮದಿ ಶಾಂತಿ ಸಿಗಲಿದೆ. ಅದಕ್ಕಾಗಿ ಉತ್ತಮ ವಾತಾವರಣಕ್ಕಾಗಿ ಮಂದಿರಗಳ ನಿರ್ಮಾಣವೂ ಅಗತ್ಯವಿದೆ ಎಂದು ಹೆಬ್ಬಳ್ಳಿಯ ಚೈತನ್ಯಾಶ್ರಮದ ಶ್ರೀದತ್ತಾವಧೂತರು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಆಶ್ರಮದಿಂದ ನಾಡಿನಾದ್ಯಂತ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಶ್ರೀರಾಮ ಲಕ್ಷ್ಮಣ ಸೀತಾ ಹನುಮಂತನ ಮೂರ್ತಿ ಸ್ಥಾಪನೆಯ ಸಂಕಲ್ಪ ಮಾಡಲಾಗಿದ್ದು, ಮೊಟ್ಟ ಮೊದಲನೆಯದಾಗಿ ಹಾನಗಲ್ಲಿನಲ್ಲಿ ಜು. 18ರಂದು ಮೂರ್ತಿ ಸ್ಥಾಪನೆ ನಡೆಯುತ್ತಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಮೂಲಕ ಹಾನಗಲ್ಲಿನಲ್ಲಿ ಬಹುದಿನಗಳ ಭಕ್ತರ ಅಪೇಕ್ಷೆ ಈಡೇರುತ್ತಿದೆ.ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಹರಿಹರ, ಶಿವಮೊಗ್ಗ, ಭದ್ರಾವತಿ, ಹೈದರಾಬಾದ್ ಸೇರಿದಂತೆ ಹಲವೆಡೆ ಇದೇ ಮೂರ್ತಿಗಳ ಸ್ಥಾಪನೆ ನಮ್ಮ ಸಂಕಲ್ಪವಾಗಿದೆ ಎಂದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಸಂಸ್ಕೃತಿಯ ಮೇಲೆ ಶತಮಾನಗಳಿಂದ ದಾಳಿ, ಆಘಾತಗಳು ನಡೆಯುತ್ತಲೇ ಇವೆ. ಸಂಸ್ಕೃತಿಗೆ ಮನ್ನಣೆ ಸಿಗುವ ಕಾಲ ಬರಬೇಕು. ಅದೇ ನಮ್ಮ ಶ್ರದ್ಧೆ ಕೂಡ ಹೌದು. ಬಾಹ್ಯ ಸೌಂದರ್ಯಕ್ಕೆ ಕಾಲ ಸೋಲುತ್ತಿದೆ. ಅಂತರಂಗದ ಸೌಂದರ್ಯವಿರುವುದೇ ಧರ್ಮ ಸಂಸ್ಕೃತಿಯ ನಡೆಯಲ್ಲಿ ಮಾತ್ರ ಎಂದರು.
ವ್ಯಸನಮುಕ್ತ ಸಮಾಜದ ಅರಿವು ಮೂಡಿಸಬೇಕಾಗಿದೆ. ಆನಂದವೇ ಸುಖವಾಗಬೇಕು. ವಸ್ತುಗಳೇ ಸುಖ ಎಂಬ ಭಾವನೆ ಬದಲಾಗಬೇಕು. ಸುಂಸ್ಕೃತಿಯಿಂದ ಎಲ್ಲವನ್ನೂ ಬದಲಾಯಿಸಲು ಸಾಧ್ಯ. ಎಲ್ಲವೂ ಕಾನೂನಿನಿಂದ ಸಾಧ್ಯ ಎಂಬ ವಿಚಾರ ಬೇಡ. ಗೋವುಗಳನ್ನು ಉಳಿಸಲು ಎಲ್ಲರ ಸಂಕಲ್ಪ ಬೇಕಾಗಿದೆ. ಅದರಿಂದ ಮಾತ್ರ ಸಾಧ್ಯ. ಗೋವಿನ ಬಗೆಗೆ ಮೊದಲು ಶ್ರದ್ಧೆ ಮೂಡಿಸಬೇಕು. ಚಿತ್ತ ಶುದ್ಧಿ ಅಂತರಂಗ ಅರಳಿಸುವ ಕಾರ್ಯ ಸಂಸ್ಕಾರದಿಂದ ಮಾತ್ರ ಸಾಧ್ಯ ಎಂದರು.ಶುಕ್ರವಾರ ನಡೆಯುವ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿ ಗುರೂಜಿ ವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೆ.ಎಲ್. ದೇಶಪಾಂಡೆ, ಗಿರೀಶ ದೇಶಪಾಂಡೆ ಇದ್ದರು.20ರಂದು ಪೂರ್ವಭಾವಿ ಸಭೆ
ರಾಣಿಬೆನ್ನೂರು: ನಗರದ ಹಳೇ ಪಿ.ಬಿ. ರಸ್ತೆ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಜು. 20ರಂದು ಸಂಜೆ 5.30ಕ್ಕೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪೂರ್ವಭಾವಿ ಸಭೆ ಕರೆಯಲಾಗಿದೆ.ಸಭೆಯಲ್ಲಿ ನೇಕಾರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಜಾತಿ ಜನಗಣತಿ ಆ್ಯಪ್ ಕುರಿತು ಚರ್ಚಿಸಲಾಗುವುದು. ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.