ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಹುನಗುಂದ ತಾಲೂಕಿನ ಅಂಬಲಿಕೊಪ್ಪ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರಧನ ವಿತರಿಸಲಾಯಿತು. ಇತ್ತೀಚೆಗೆ ಸುರಿದ ಮಳೆಯಿಂದ ರೈತ ಮಲ್ಲಪ್ಪ ಶಿವಪ್ಪ ಬಸನಾಳ ಎಂಬಾತ ಅಂಬಲಿಕೊಪ್ಪ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಂಬಲಿಕೊಪ್ಪ ಗ್ರಾಮದ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಶಾಸಕ ಎಚ್.ವೈ.ಮೇಟಿ ಒತ್ತಾಯಿಸಿದ್ದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಂಬಲಿಕೊಪ್ಪ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರಧನ ವಿತರಿಸಲಾಯಿತು. ಇತ್ತೀಚೆಗೆ ಸುರಿದ ಮಳೆಯಿಂದ ರೈತ ಮಲ್ಲಪ್ಪ ಶಿವಪ್ಪ ಬಸನಾಳ ಎಂಬಾತ ಅಂಬಲಿಕೊಪ್ಪ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಂಬಲಿಕೊಪ್ಪ ಗ್ರಾಮದ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಶಾಸಕ ಎಚ್.ವೈ.ಮೇಟಿ ಒತ್ತಾಯಿಸಿದ್ದರು. ಸರ್ಕಾರದಿಂದ ಮೃತನ ಪತ್ನಿ ನೀಲವ್ವ ಬಸನಾಳ ಅವರಿಗೆ ₹5 ಲಕ್ಷ ಪರಿಹಾರದ ಚೆಕ್ ಅನ್ನು ಶುಕ್ರವಾರ ಶಾಸಕ ಮೇಟಿ ವಿತರಿಸಿದರು. ಹುನಗುಂದ ತಹಶೀಲ್ದಾರ ನಿಂಗಪ್ಪ ಬಿರಾದಾರ, ಕಂದಾಯ ನಿರೀಕ್ಷಕ ಡಿ.ಎಸ್. ಯತ್ನಟ್ಟಿ, ಮುಗನೂರ ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಹಾವಳಗಿ, ತಾಪಂ ಮಾಜಿ ಸದಸ್ಯ ಹೊಳಿಯಪ್ಪ ಗೌಡರ, ಕಾಂಗ್ರೆಸ್ ಮುಖಂಡರಾದ ಅರವಿಂದ ಮುರನಾಳ, ತಿಮ್ಮಣ್ಣ ಹರದೊಳ್ಳಿ, ಯಮನೂರ ಬಡಕಣ್ಣವರ, ಆರ್.ಎಸ್. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.