ಸಾರಾಂಶ
ಪಕ್ಷ ನಿಷ್ಠೆಗೆ ಮನ್ನಣೆ ಹೊರತು ವ್ಯಕ್ತಿಪೂಜೆ ಸಹಿಸಲಾಗದು. ಪಕ್ಷ ಬಿಟ್ಟಿರುವ ಸಕ್ರಿಯ ಕಾರ್ಯಕರ್ತರನ್ನು ಗುರ್ತಿಸಿ ಪುನಃ ಮನೆಗೆ ಕರೆತರುವ ಕೆಲಸ ಮಾಡಲಾಗುತ್ತದೆಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ಕೋಲಾರ : ಪಕ್ಷ ನಿಷ್ಠೆಗೆ ಮನ್ನಣೆ ಹೊರತು ವ್ಯಕ್ತಿಪೂಜೆ ಸಹಿಸಲಾಗದು. ಪಕ್ಷ ಬಿಟ್ಟಿರುವ ಸಕ್ರಿಯ ಕಾರ್ಯಕರ್ತರನ್ನು ಗುರ್ತಿಸಿ ಪುನಃ ಮನೆಗೆ ಕರೆತರುವ ಕೆಲಸ ಮಾಡಲಾಗುತ್ತದೆಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ಜಿಲ್ಲಾ ಕಬಡ್ಡಿ ಅಮೇಚುರ್ ಅಸೋಸಿಯೇಷನ್ ಮತ್ತು ಮೆಡಿಕಲ್ ಅಸೋಸಿಯೇಷನ್‌ನಿಂದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಯಾವೊಬ್ಬ ಮುಖಂಡರು ಮತ್ತು ಕಾರ್ಯಕರ್ತರು ಬಹಿರಂಗ ಹೇಳಿಕೆಗಳನ್ನು ನೀಡುವುದು ಬೇಡ. ಇದು ಜಿಲ್ಲಾಧ್ಯಕ್ಷರಿಂದ ಸಾಮಾನ್ಯ ಕಾರ್ಯಕರ್ತರವರೆಗೂ ಅನ್ವಯ ಆಗುತ್ತದೆ. ಪಕ್ಷದ ಚೌಕಟ್ಟನ್ನು ಮೀರಬೇಡಿ
ಪಕ್ಷದ ಚೌಕಟ್ಟಿನಲ್ಲಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹೇಳಿಕೊಳ್ಳಬಹುದಾಗಿದ್ದು ಸಾಧ್ಯವಾಗುವ ಎಲ್ಲ ಸಲಹೆಗಳನ್ನು ಪರಿಗಣಿಸುವ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತದೆ. ಪಕ್ಷದಲ್ಲಿ ಹಳಬರು ಮತ್ತು ಹೊಸಬರು ಎಂಬ ತಾರತಮ್ಯಕ್ಕೆ ಅವಕಾಶವೇ ಇಲ್ಲ. ಜಿಲ್ಲೆಯ ಕೆಲವೆಡೆ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದು ಎಲ್ಲರನ್ನೂ ಕುಳ್ಳರಿಸಿ ಚರ್ಚೆ ಮಾಡಿ ಸಮಾನವಾಗಿ ಒಗ್ಗೂಡಿಸಿಕೊಂಡು ಪಕ್ಷವನ್ನು ಬಲಪಡಿಸಲಾಗುತ್ತದೆ ಎಂದು ಹೇಳಿದರು.
ಪಕ್ಷಕ್ಕೆ ವಾಪಸ್ ಬನ್ನಿ
ಬಿಜೆಪಿ ಬಿಟ್ಟು ಹೋಗಿರುವ ಪ್ರಾಮಾಣಿಕರು ಬೇರೆ ಪಕ್ಷದಲ್ಲಿದ್ದರೂ ಪಕ್ಷಕ್ಕೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತದೆ ಎಂದು ಓಂಶಕ್ತಿ ಚಲಪತಿ ಪ್ರತಿಕ್ರಿಯಿಸಿದರು. ಬಿಜೆಪಿ ಮುಖಂಡ ಅಪ್ಪಿ ನಾರಾಯಣಸ್ವಾಮಿ, ಜಿಲ್ಲಾ ಕಬಡ್ಡಿ ಅಮೇಚುರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪ್ರಭು, ಟೌನ್ ಕ್ಲಬ್ ಅಧ್ಯಕ್ಷ ಬಾಬು, ಮೆಡಿಕಲ್ ಅಸೋಸಿಯೇಷನ್ ಬಾಬು, ಕೀಲುಕೋಟೆ ಶಿವು, ಪೇಟೆಚಾಮನಹಳ್ಳಿ ಶ್ರೀಧರ್, ಬಸಾಪುರ ಶಿವಕುಮಾರ್ ಇದ್ದರು.