ಸಾರಾಂಶ
ಒಟ್ಟು 42 ವಿಭಾಗಗಳಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುವ್ಯಕ್ತಿ ತನ್ನ ಸ್ವಯಂ ಸಾಧನೆಯಿಂದಲೇ ಉನ್ನತ ಮಟ್ಟಕ್ಕೆ ಏರಬೇಕು ಹೊರತು ಮತ್ತೊಬ್ಬನನ್ನು ಮೆಟ್ಟಿ ನಿಂತು ಮೇಲೇರುವುದು ಖಂಡಿತಾ ಸರಿಯಲ್ಲ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಕೃಷ್ಣಾಷ್ಟಮಿಯ ಸಂದರ್ಭ ಶ್ರೀ ಕ್ಷೇತ್ರ ಕದ್ರಿಯ ಅಂಗಣದಲ್ಲಿ ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ಅಡಿಟೋರಿಯಂನಲ್ಲಿ ನಡೆದ ಈ ಸಮಾರಂಭವನ್ನು ಶರವು ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಿದರು.ಒಟ್ಟು 42 ವಿಭಾಗಗಳಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹೋಟೆಲ್ ಜನತಾ ಡಿಲಕ್ಸ್‌ನ ಪತ್ತ್ ಮುಡಿ ಸೂರ್ಯನಾರಾಯಣ ರಾವ್, ಯಕ್ಷಗಾನ ಪ್ರಸಂಗ ಕರ್ತ ನಿತ್ಯಾನಂದ ಕಾರಂತ ಪೊಳಲಿ, ಅರ್ಥಧಾರಿ ಪ್ರೊ. ಜಿ.ಕೆ.ಭಟ್ ಸೇರಾಜೆ, ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಶಿವಪ್ರಸಾದ್ ಪ್ರಭು, ತಾರಾನಾಥ್ ಶೆಟ್ಟಿ ಬೋಳಾರ, ತಮ್ಮ ಲಕ್ಷ್ಮಣ, ಚಂದ್ರಶೇಖರ ಮಯ್ಯ, ದಯಾನಂದ ಕಟೀಲ್, ಪ್ರದೀಪ್ ಆಳ್ವ ಕದ್ರಿ, ತಾರಾನಾಥ್ ಹೊಳ್ಳ, ವಿನೋದಾ ಕಲ್ಕೂರ, ಮಂಜುಳಾ ಶೆಟ್ಟಿ ಮತ್ತಿತರರಿದ್ದರು.