ಸಂಸ್ಕಾರ ಪಡೆದ ಮನುಜ ಸಮಾಜಕ್ಕೆ ಬೆಳಕಾಗಬಲ್ಲ: ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು

| Published : Apr 27 2025, 01:48 AM IST

ಸಂಸ್ಕಾರ ಪಡೆದ ಮನುಜ ಸಮಾಜಕ್ಕೆ ಬೆಳಕಾಗಬಲ್ಲ: ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಮಾತ್ರವಲ್ಲದೆ ಪಾಲಕರಿಗೂ ಕೂಡ ಇಂತಹ ಧಾರ್ಮಿಕ ಸಂಸ್ಕಾರ ಶಿಬಿರದ ಅವಶ್ಯಕತೆಯಿದೆ

ರಾಣಿಬೆನ್ನೂರು: ಹೊಲದಲ್ಲಿ ಬೆಳೆಯುವ ಭತ್ತವು ಸೂಕ್ತ ಸಂಸ್ಕಾರ ಸಿಕ್ಕು ಅಕ್ಕಿಯಾಗಬಲ್ಲದು. ಸಂಸ್ಕಾರ ಪಡೆದುಕೊಂಡ ಅನ್ನ ಪ್ರಸಾದವಾಗುತ್ತದೆ. ಹಾಗೆಯೇ ಸಂಸ್ಕಾರ ಪಡೆದ ಮನುಜ ಸಮಾಜಕ್ಕೆ ಬೆಳಕಾಗಬಲ್ಲನು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಸ್ಥಳೀಯ ಹೊನ್ನಾಳಿ ಶ್ರೀಚೆನ್ನಮಲ್ಲಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ 19ನೆಯ ವೇದಾಧ್ಯಯನ ಮತ್ತು ಪೂಜಾ ವಿಧಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಕ್ಕಳಿಗೆ ಮಾತ್ರವಲ್ಲದೆ ಪಾಲಕರಿಗೂ ಕೂಡ ಇಂತಹ ಧಾರ್ಮಿಕ ಸಂಸ್ಕಾರ ಶಿಬಿರದ ಅವಶ್ಯಕತೆಯಿದೆ. ಗುರು ಮುಖೇನ ಪಡೆದ ಸಂಸ್ಕಾರ ನಿತ್ಯ ವೃತ್ತಿಯಾಗಿ ಆಚಾರ ವಿಚಾರಗಳನ್ನು ಪಾಲಿಸುವಂತಾಗಲಿ ಎಂದರು.

ಶ್ರೀಗಳು 18 ಜಂಗಮ ವಟುಗಳಿಗೆ ಗುರು ಮಂತ್ರ ಉಪದೇಶದೊಂದಿಗೆ ಶಿವ ದೀಕ್ಷೆ ನೀಡಿದರು.

ಶಿವರಾಜ ಶಾಸ್ತ್ರಿಗಳು, ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರಿಗಳು, ಪ್ರಭಯ್ಯ ಶಾಸ್ತ್ರಿಗಳು, ವೀರೇಶ ಶಾಸ್ತ್ರಿಗಳು, ಗೌರಿಶಂಕರ ನೆಗಳೂರುಮಠ ಶಾಸ್ತ್ರಿಗಳು ಶಿವ ದೀಕ್ಷಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಬಸವರಾಜಣ್ಣ ಪಟ್ಟಣಶೆಟ್ಟಿ, ಅಮೃತಗೌಡ ಹಿರೇಮಠ, ಜಯಶ್ರೀ, ಗಂಗಾಧರ ಕೋರಿ, ಶಿವಪ್ಪ ಗುರಿಕಾರ, ಬಿದ್ದಾಡೆಪ್ಪ ಚಕ್ರಸಾಲಿ, ಆರ್.ಬಿ.ಪಾಟೀಲ, ಜಗದೀಶ ಮಳೆಮಠ, ವಿ.ವಿ. ಹರಪನಹಳ್ಳಿ, ಕಸ್ತೂರಮ್ಮ ಪಾಟೀಲ, ಶಾರದಮ್ಮ ಹಾಗೂ ತಾಲೂಕು ಶ್ರೀವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ಶ್ರೀದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು