ಜ್ಞಾನ, ಕೌಶಲ ಹೊಂದಿದ ವ್ಯಕ್ತಿಗೆ ಸೋಲಿಲ್ಲ: ಎನ್.ಆರ್. ಗಜು

| Published : Jan 12 2025, 01:18 AM IST

ಸಾರಾಂಶ

ಕುಮಟಾ ತಾಲೂಕಿನ ಬಾಡದ ಜನತಾ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ನಿವೃತ್ತ ಮುಖ್ಯಶಿಕ್ಷಕ ಎನ್.ಆರ್. ಗಜು ಉದ್ಘಾಟಿಸಿದರು. ಶಾಲಾ ಹಸ್ತಪತ್ರಿಕೆ ’ಅಭಿಜಾತ’ವನ್ನು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರತ್ನಾಕರ ನಾಯ್ಕ ಅನಾವರಣಗೊಳಿಸಿದರು.

ಕುಮಟಾ: ಜ್ಞಾನ, ಕೌಶಲ್ಯ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ವ್ಯಕ್ತಿ ಜೀವನದಲ್ಲೆಂದೂ ಸೋಲಲಾರ. ಅವಕಾಶಗಳನ್ನೆಂದೂ ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು, ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎನ್.ಆರ್. ಗಜು ಹೇಳಿದರು.

ತಾಲೂಕಿನ ಬಾಡದ ಜನತಾ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಶಾಲಾ ಹಸ್ತಪತ್ರಿಕೆ ’ಅಭಿಜಾತ’ವನ್ನು ಅನಾವರಣಗೊಳಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರತ್ನಾಕರ ನಾಯ್ಕ, ಶಿಸ್ತಿನಿಂದ ವ್ಯಾಸಂಗ ಮಾಡಿ ದೃಢತೆಯಿಂದ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸದಾ ಪ್ರಗತಿಪಥದಲ್ಲಿ ವಿದ್ಯಾರ್ಥಿಗಳು ಸಾಗಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಯಾವತ್ತೂ ನೆರವಾಗುತ್ತೇನೆ. ಬಾಡ ಜನತಾ ವಿದ್ಯಾಲಯ ನಮ್ಮ ಹೆಮ್ಮೆ ಎಂದರು.

ವಕೀಲೆ ಮಮತಾ ಆರ್. ನಾಯ್ಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎಸ್. ಭಟ್ ಲೋಕೇಶ್ವರ, ವಿದ್ವಾನ್ ಡಾ. ಗೋಪಾಲಕೃಷ್ಣ ಹೆಗಡೆ, ಎಚ್.ಎಸ್. ಹಳ್ಳೇರ, ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಬ್ರಾಯ ಜಿ. ನಾಯ್ಕ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸುಮುಖ ಆಚಾರಿ, ಮಾನ್ಯ ನಾಯ್ಕ ಇದ್ದರು.

ವಾಲಿಬಾಲ್ ಕ್ರೀಡಾಪಟು ಯತೀಶ ನಾಯ್ಕ, ಓಟಗಾರ್ತಿ ಜಯಾ ಗೌಡ, ಬಿಸಿಯೂಟದ ಸಿಬ್ಬಂದಿ ಜಯಾ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಮಾನಸಾ ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಮುಖ್ಯಶಿಕ್ಷಕ ಸಂದೇಶ ಡಿ. ಉಳ್ಳಿಕಾಸಿ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕರಾದ ಐ.ವಿ. ಭಟ್ಟ, ರಂಜನಾ ಬಿ., ಸಿ.ಬಿ. ಪಿಸ್ಸೆ, ತನುಜಾ ನಾಯಕ ನಿರೂಪಿಸಿದರು.ಶಿಕ್ಷಕ ಮಧುಕರ ಜೆ. ನಾಯಕ ಕ್ರೀಡಾ ಸಂಪದ ನಡೆಸಿಕೊಟ್ಟರು. ಶಿಕ್ಷಕ ಫಕ್ಕೀರಪ್ಪ ಎಚ್. ನಾಗಣ್ಣವರ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ರಂಜಿಸಿತು.