ಸಾರಾಂಶ
ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ತಗುಲಿ ₹೬೦ಸಾವಿರ ಮೌಲ್ಯದ ಭತ್ತದ ಹುಲ್ಲಿನ ಬಣವೆ ಸುಟ್ಟಿದೆ. ಸಿದ್ದಾಪುರ ಗ್ರಾಮದ ೯ನೇ ವಾರ್ಡಿನ ಹಗಲು ವೇಷಗಾರರ ಓಣಿಯ ಮಲ್ಲಪ್ಪ ತಂದೆ ಬಸಪ್ಪಗೆ ಸೇರಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಸಿದ್ದಾಪುರದಲ್ಲಿ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ತಗುಲಿ ₹೬೦ಸಾವಿರ ಮೌಲ್ಯದ ಭತ್ತದ ಹುಲ್ಲಿನ ಬಣವೆ ಸುಟ್ಟಿದೆ.ಸಿದ್ದಾಪುರ ಗ್ರಾಮದ ೯ನೇ ವಾರ್ಡಿನ ಹಗಲು ವೇಷಗಾರರ ಓಣಿಯ ಮಲ್ಲಪ್ಪ ತಂದೆ ಬಸಪ್ಪಗೆ ಸೇರಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ನಷ್ಟವಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ರಾಘವೇಂದ್ರ ಈಳಿಗೇರ್, ಸಿಬ್ಬಂದಿ ಸುಮಾರು ೨ ಗಂಟೆ ಕಾಲ ಬೆಂಕಿ ನಂದಿಸುವಲ್ಲಿ ಶ್ರಮ ವಹಿಸಿದರು. ಪಕ್ಕದಲ್ಲಿರುವ ಇನ್ನು ಎರಡು ಬಣವೆಗಳಿಗೆ ಬೆಂಕಿ ಬೀಳದಂತೆ ಎಚ್ಚರ ವಹಿಸಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ.ಈ ವೇಳೆ ಬಣವೆಯ ಮಾಲೀಕ ಮಲ್ಲಪ್ಪ ಮಾತನಾಡಿ, ವರ್ಷಪೂರ್ತಿ ನಮ್ಮ ದನ-ಕರುಗಳಿಗೆ ಮೇಯಿಸಲು ಸಾಲ-ಶೂಲ ಮಾಡಿ ಬಣವೆ ಹಾಕಿಕೊಂಡಿದ್ದೆವು. ಬೆಳೆದ ಭತ್ತ ಕೈಗೆ ಬಂದರೂ ಹುಲ್ಲಿನ ಬಣಿವೆಯಿಂದ ನಷ್ಟ ಅನುಭವಿಸಿದ್ದೇವೆ ಎಂದರು.ಅಗ್ನಿಶಾಮಕ ಠಾಣಾ ಸಿಬ್ಬಂದಿ ಮಂಜುನಾಥ್, ಸೂಗೂರಯ್ಯ ಚಾಲಕ ಯುವರಾಜ ಕಿರಣ್ ವಿನೋದ್ ಕುಮಾರ್ ಇದ್ದರು.