ಕಡೂರುಸತತ ಬರಗಾಲದಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಸರಸ್ವತೀಪುರ ಭಾಗದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶಾಸಕ ಕೆ.ಎಸ್.ಆನಂದ್ । ಸರಸ್ವತೀಪುರದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ
ಕನ್ನಡಪ್ರಭ ವಾರ್ತೆ, ಕಡೂರುಸತತ ಬರಗಾಲದಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಸರಸ್ವತೀಪುರ ಭಾಗದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಸರಸ್ವತೀಪುರದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಸ್ವತೀ ಪುರ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ₹5.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗೋವಿಂದಪುರ, ಚೆನ್ನೇನ ಹಳ್ಳಿ ಹಾಗೂ ಸರಸ್ವತೀಪುರಗಳಲ್ಲಿ ನಿರಂತರವಾದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ ಎಂದರು.ಹುಲಿಗೊಂದಿರಾಯನ ಕೆರೆಗೆ ಪೈಪ್ಲೈನ್ ಅಳವಡಿಕ್ಎ ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆಗೆ ನೀರು ಹರಿಸುವ ವ್ಯವಸ್ಥೆಯಾಗಲಿದೆ. ಗೋವಿಂದಪುರ ಸಮೀಪದ ಸರ್ಕಾರಿ ಜಾಗದಲ್ಲಿ ಹೊಸ ಕೆರೆ ನಿರ್ಮಿಸಿದರೆ ಈ ಭಾಗದ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೀರಾವರಿ ಹಾಗೂ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನಿಸುವ ಭರವಸೆ ನೀಡಿದರು.ಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಯಾಗದೆ ನಿರಂತರ ಅನುದಾನದ ಪ್ರಯತ್ನ ಮಾಡುತ್ತಿದ್ದೇನೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಕಡೂರು ಕ್ಷೇತ್ರಕ್ಕೆ ಹಿಂದೆಂದೂ ಬಾರದಷ್ಟು ಅನುದಾನ ಬಂದಿದೆ. ರಾಜ್ಯದಲ್ಲೂ ಕಡೂರು ಕ್ಷೇತ್ರಕ್ಕೆ ನೀರಾವರಿ ಯೋಜನೆಗಳಿಗೆ ದೊರೆತಷ್ಟು ಅನುದಾನ ಬೇರೆ ಯಾವುದೇ ಕ್ಷೇತ್ರಕ್ಕೆ ಬಂದಿಲ್ಲ ಎಂಬುದು ವಾಸ್ತವ ಎಂದು ತಿಳಿಸಿದರು.118 ಕೆರೆಗಳಿಗೆ ನೀರು ತುಂಬಿಸುವ 3ನೇ ಹಂತದ ಕಾಮಗಾರಿ ಆರಂಭಾವಗಿದ್ದು ಹುಲ್ಲೆಹಳ್ಳಿ ಮತ್ತು ಕೇದಿಗೆರೆ ಭಾಗದ ಕೆರೆಗಳ ಕಾರ್ಯ ಆರಂಭವಾಗಲಿದೆ. ಈಗಾಗಲೇ ಅಂತರಘಟ್ಟೆ, ಚೌಳಹಿರಿಯೂರು ಹಾಗೂ ಕುಕ್ಕ ಸಮುದ್ರ ಕೆರೆಗಳಿಗೆ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗಿದೆ ಎಂದರು.ಹುಲಿಗೊಂದಿರಾಯನ ಕೆರೆ ಹಾಗೂ ಬಸವನಕಟ್ಟೆ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಗೆ ಅನುಕೂಲವಾಗಲಿದೆ ಎಂದು ಸರಸ್ವತೀಪುರದ ಎಸ್.ಎಲ್.ಮಂಜಪ್ಪ ಮನವಿ ಮಾಡಿದಾಗ ಹುಲಿಗೊಂದಿರಾಯನ ಕೆರೆಗೆ ಪೈಪ್ಲೈನ್ ಕಾಮಗಾರಿ ಆರಂಭವಾಗಿದ್ದು, ಕೆರೆಗೆ ನೀರು ಬಂದ ಬಳಿಕ ಬಸವನಕಟ್ಟೆ ಸೇರಿದಂತೆ ಇತರೆ ಕೆರೆಗಳಿಗೂ ನೀರು ಹರಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈ ಗೊಳ್ಳುವ ಭರವಸೆ ಶಾಸಕರು ನೀಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪೂರ್ಣಿಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು....ಬಾಕ್ಸ್....ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳು ಹಳೆ ವಿದ್ಯುತ್ ಕಂಬಗಳ ಬದಲಾವಣೆಯಲ್ಲಿ ವಿಳಂಬ, ಸರಸ್ವತೀಪುರ ಭಾಗದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಸ್ಥಾಪನೆ, ಸರಸ್ವತೀಪುರ ತಾಂಡ್ಯಕ್ಕೆ ಸ್ಮಶಾನ ಭೂಮಿ ಮಂಜೂರು, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾ ಣಕ್ಕೆ ಅನುದಾನ ಸೇರಿದಂತೆ ಹಲವು ಬೇಡಿಕೆಗಳು ಪ್ರಸ್ತಾಪವಾದವು. ಜಾನುವಾರುಗಳಿಗೆ ಮೇವು ಮತ್ತು ಕುಡಿವ ನೀರಿನ ಸಮಸ್ಯೆ ಹಾಗೂ ಪಿಂಚಣಿ ಹಣ ಪಾವತಿಯಾಗದಿರುವ ಕುರಿತು ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದರು.
