ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ಮಹಾತ್ಮಾ ಗಾಂಧೀಜಿಯವರನ್ನು ವಿರೋಧಿಸುವ ಕುತಂತ್ರ ಬಿಜೆಪಿಯವರಿಂದ ನಡೆದಿದೆ. ನನ್ನ ಉಸಿರು ಇರುವವರೆಗೂ ಹುನಗುಂದ ಮತಕ್ಷೇತ್ರದಲ್ಲಿ ಬಿಜೆಪಿಯವರ ಆಟ ನಡೆಯೋಕೆ ಬಿಡುವುದಿಲ್ಲ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಗುಡುಗಿದರು.ನಗರದ ಎಸ್.ಆರ್.ಕಂಠಿ ವೃತ್ತದಲ್ಲಿ ಹುನಗುಂದ ವಿಧಾನಸಭಾ ಮತಕ್ಷೇತ್ರದ ಹುನಗುಂದ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಎಸ್.ಆರ್.ಕೆ ಪ್ರತಿಷ್ಠಾನ ಇಳಕಲ್ಲ ವತಿಯಿಂದ ಮಹಾತ್ಮ ಗಾಂಧೀಜಿ ಅವರ ೧೫೫ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಅವರ ೧೨೫ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಬೃಹತ್ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಧೋಳದ ಕಾರ್ಯಕ್ರಮದಲ್ಲಿ ವಿಜಯಪುರದ ಶಾಸಕ ಬಸನಗೌಡ ಯತ್ನಾಳ ಹಜರತ್ ಟೀಪು ಸುಲ್ತಾನ ಬಗ್ಗೆ ಅವ್ಯಾಚ್ಚವಾಗಿ ಮಾತನಾಡಿದ್ದನ್ನು ಖಂಡಿಸಿ ಒಬ್ಬ ಸ್ವಾತಂತ್ರ ಹೋರಾಟಗಾರ, ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಮಹಾನ್ ಹೋರಾಟಗಾರನ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿದರು.
ವಿಜಯ ಮಹಾಂತೇಶ ಗದ್ದನಕೇರಿ ಪ್ರಾಸ್ತಾವಿಕ ಮಾತನಾಡಿದರು. ಇಳಕಲ್ಲ ದರ್ಗಾದ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸರ್ವಧರ್ಮಗಳ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ್ , ಬೌದ್ಧ, ಜೈನ್, ವೀರಶೈವ ಲಿಂಗಾಯತ ಧರ್ಮಗಳ ಪಠಣ ಜರುಗಿತು.ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಸಾಕಾ, ರಾಜು ಬೋರಾ, ಶಾಂತಕುಮಾರ ಸುರಪೂರ, ಶರಣಪ್ಪ ಆಮದಿಹಾಳ, ರಜಾಕ್ ತಟಗಾರ, ಅರುಣ ಬಿಜ್ಜಲ, ಜಬ್ಬರ ಕಲಬುರ್ಗಿ, ನಗರಸಭೆ ಅಧ್ಯಕ್ಷ ಸುಧಾರಾಣಿ ಸಂಗಮ, ಉಪಾಧ್ಯಕ್ಷ ಕಾಳಮ್ಮ ಜಕ್ಕಾ ಸೇರಿದಂತ ಅನೇಕರು ಉಪಸ್ಥಿತರಿದ್ದರು.ಸ್ವರಸಿಂಧು ಮೆಲೋಡಿಯಸ್ ಅವರಿಂದ ವಂದೆ ಮಾತರಂ ಗೀತೆ ಪ್ರಸ್ತುತಪಡಿಸಲಾಯಿತು. ಸುಶ್ಮೀತಾ ಬಾರಿಗಿಡದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಅಂಹಿಸಾ ಮಾರ್ಗದ ಮೂಲಕ ಮಾತ್ರ ಶಾಶ್ವತ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಜಗತ್ತಿಗೆ ತೋರಿಸಿದ ಮಹಾತ್ಮಾ ಗಾಂಧಿಯವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
-ವಿಜಯಾನಂದ ಕಾಶಪ್ಪನವರ, ಶಾಸಕರು.