ಸಾರಾಂಶ
ಕವಿಗೆ ಸೂಕ್ಷ್ಮದೃಷ್ಟಿ ಇರಬೇಕು. ಜೊತೆಗೆ ಸಾಮಾಜಿಕ ಕುಂದುಕೊರತೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಕವಿತೆಗಳು ಹೊರತರುವ ಕಾಳಜಿಯೂ ಕವಿಗಳಲ್ಲಿರಬೇಕು ಎಂದು ಸಾಹಿತಿ ಚಂದ್ರಶೇಖರ್ ತಾಳ್ಯ ಜಗಳೂರಲ್ಲಿ ಹೇಳಿದ್ದಾರೆ.
- ಭಾಷೆ, ಶಿಕ್ಷಣ ದೃಷ್ಟಿಯಿಂದ ದೇಶದಲ್ಲಿ ಬಿಕ್ಕಟ್ಟುಗಳು ಗಾಯಗಳಂತಾಗಿವೆ ಎಂದು ಆತಂಕ - - - ಕನ್ನಡಪ್ರಭ ವಾರ್ತೆ ಜಗಳೂರು
ಕವಿಗೆ ಸೂಕ್ಷ್ಮದೃಷ್ಟಿ ಇರಬೇಕು. ಜೊತೆಗೆ ಸಾಮಾಜಿಕ ಕುಂದುಕೊರತೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಕವಿತೆಗಳು ಹೊರತರುವ ಕಾಳಜಿಯೂ ಕವಿಗಳಲ್ಲಿರಬೇಕು ಎಂದು ಸಾಹಿತಿ ಚಂದ್ರಶೇಖರ್ ತಾಳ್ಯ ಹೇಳಿದರು.ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ನಡೆದ ಎರಡನೇ ದಿನದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗ ತಾರತಮ್ಯ, ಜಾತೀಯತೆ, ಕೋಮುವಾದ ಹರಡುವ ದೇಶದಲ್ಲಿ ಸಮುದಾಯ ದೃಷ್ಠಿಯಿಂದ ಕವಿತೆಗಳು ಹೆಚ್ಚು ಹೆಚ್ಚು ಹೊರಹೊಮ್ಮಬೇಕಿದೆ. ಕವಿಗಳು ಜಾಗರೂಕರಾಗಿ ಬರವಣಿಗೆ ಮೈಗೂಡಿಸಿಕೊಳ್ಳಬೇಕಿದೆ. ಜಾತಿವ್ಯವಸ್ಥೆ ಬಿಗಿಯಾಗಿದ್ದು, ದೇಶದಲ್ಲಿ ಮರ್ಯಾದೆ ಹತ್ಯೆ, ಭ್ರೂಣಹತ್ಯೆಗಳು ನಡೆಯುತ್ತಿವೆ. ಪ್ರತಿಯೊಂದು ಮನಸ್ಸುಗಳು ವಿಕಾರಗೊಳ್ಳುತ್ತಿವೆ. ಅಪಾಯವನ್ನು ಎದುರಿಸುತ್ತಿದ್ದೇವೆ. ಮನೆಯ ಒಳಗಡೆಯೂ ಅನೇಕ ಭಿನ್ನತೆ ಅನುಭವಿಸುತ್ತಿದ್ದೇವೆ. ಹಂತಹಂತವಾಗಿ ಕುಟುಂಬದಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಭಾಷೆ, ಶಿಕ್ಷಣ ದೃಷ್ಟಿಯಿಂದ ದೇಶದಲ್ಲಿನ ಬಿಕ್ಕಟ್ಟುಗಳು ಮೈತುಂಬ ಗಾಯಗಳಾಗಿ ಮಾರ್ಪಟ್ಟಿವೆ ಎಂದು ಆತಂಕ ವ್ಯಕ್ತಪಡಿಸಿದರು.ಕವಿಗಳಾದ ಬಸವೇಶ ಸಿ.ಎಂ.ಹೊಳೆ, ವೈ.ಹನುಮಂತಪ್ಪ, ರವಿಕುಮಾರ್ ಬಿ., ಅನ್ನಪೂರ್ಣ ಪಾಟೀಲ್, ಜಿ.ಕೆ.ಕುಲಕರ್ಣಿ, ಕುಂದೂರು ಮಂಜಪ್ಪ, ಎಸ್.ವಿ. ಶಾಂತಕುಮಾರ್, ಶಾಲಿನಿ ಸಿ.ಎಂ., ಧನರಾಜು, ಬಿ.ವಿ. ಬಸವರಾಜ್, ಸೊಂಡೂರ್ ಮಹೇಶ್ವರಪ್ಪ, ಕೆ.ಎಂ. ಮಂಜಪ್ಪ ಕಂಚಿಗನಾಳ್, ಶಿವಕುಮಾರ್ ದಂಡಿನ, ರುಜುವಾನ್, ಗೀತಾ ತಿಪ್ಪೇಸ್ವಾಮಿ, ಯಶೋಧ ಸೇರಿದಂತೆ 20ಕ್ಕೂ ಅಧಿಕ ಕವಿ, ಕವಯಿತ್ರಿಯರು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಎ.ಬಿ.ರಾಮಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ರಾಜಶೇಖರ್ ಗುಂಡಗಟ್ಟಿ, ಕದಳಿ ಮಹಿಳಾ ವೇದಿಕೆ, ಸಿಡಿಪಿಒ ಮೇಲ್ವಿಚಾರಕಿ ಎಚ್.ವಿ. ಶಾಂತಮ್ಮ ಇತರರು ಇದ್ದರು.- - - -12ಜೆ.ಜಿ.ಎಲ್‌ಪಿ.1 :
ಜಗಳೂರು ಪಟ್ಟಣದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಸಾಹಿತಿ ಚಂದ್ರಶೇಖರ್ ತಾಳ್ಯ ಮಾತನಾಡಿದರು.