ಚುನಾವಣಾ ಕಾರ್ಯ ಮುಗಿಸಿ ಮನೆಗೆ ಬಂದ ಪೊಲೀಸ್ ಪೇದೆಗೆ ಹೃದಯಾಘಾತ

| Published : Nov 15 2024, 12:37 AM IST

ಚುನಾವಣಾ ಕಾರ್ಯ ಮುಗಿಸಿ ಮನೆಗೆ ಬಂದ ಪೊಲೀಸ್ ಪೇದೆಗೆ ಹೃದಯಾಘಾತ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು- ನಾಲ್ಕು ದಿನಗಳಿಂದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಂದೋಬಸ್ತಿನ ಕಾರ್ಯಕ್ಕೆ ಗುರುಲಿಂಗಪ್ಪ ನಿಯೋಜನೆಗೊಂಡಿದ್ದರು.

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕರ್ತವ್ಯ ಮುಗಿಸಿ ಮನೆಗೆ ವಾಪಸ್ಸಾಗಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೇದೆ ಗುರುಲಿಂಗಪ್ಪ (33)ಮೃತರು. ಮೂಲತಃ ಬಳ್ಳಾರಿ ಜಿಲ್ಲೆ ಸಿರಿಗೇರಿ ಗ್ರಾಮದವರು. ಕಳೆದ ಮೂರು- ನಾಲ್ಕು ದಿನಗಳಿಂದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಂದೋಬಸ್ತಿನ ಕಾರ್ಯಕ್ಕೆ ಗುರುಲಿಂಗಪ್ಪ ನಿಯೋಜನೆಗೊಂಡಿದ್ದರು. ಕರ್ತವ್ಯದ ವೇಳೆಯೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕರ್ತವ್ಯ ಮುಗಿಸಿ ರಾತ್ರಿ ಫೋನಿನಲ್ಲಿ ಬೆಂಗಳೂರಿನಲ್ಲಿದ್ದ ಪತ್ನಿಯೊಂದಿಗೆ ಮಾತನಾಡಿದ ಗುರುಲಿಂಗಪ್ಪ, ಬೆಳಗ್ಗೆ ಮನೆಗೆ ವಾಪಸ್ ಬರುವುದಾಗಿ ಹೇಳಿದ್ದಾರೆ. ಕೆಲಸ ಮುಗಿಸಿಕೊಂಡು ಗುರುಲಿಂಗಪ್ಪ ವಸತಿ ಗೃಹಕ್ಕೆ ಬಂದು ಮಲಗಿದಾಗ ಹೃದಯಾಘಾತ ಸಂಭವಿಸಿದೆ. ಬೆಳಗ್ಗೆ ಪತ್ನಿ ಊರಿನಿಂದ ಹೊರಡುವಾಗ ಕರೆ ಮಾಡಿದಾಗ ಗುರುಲಿಂಗಪ್ಪ ಸ್ವೀಕರಿಸಿಲ್ಲ. ಡ್ಯೂಟಿ ಮಾಡಿ ಸುಸ್ತಾಗಿ ಮಲಗಿರಬಹುದು ಎಂದು ಭಾವಿಸಿ ಪತ್ನಿ ಬೆಂಗಳೂರಿನಿಂದ ರಾಮನಗರಕ್ಕೆ ಬಂದು ವಸತಿಗೃಹಕ್ಕೆ ಬಂದಿದ್ದಾರೆ. ಮನೆಗೆ ಹೋಗಿ ನೋಡಿದಾಗ ಗುರುಲಿಂಗಪ್ಪ ಮೃತಪಟ್ಟಿರುವುದು ಗೊತ್ತಾಗಿದೆ. ಇದನ್ನು ನೋಡಿದ ಪತ್ನಿ ಜೋರಾಗಿ ಚೀರಾಡುತ್ತ ನೆರೆ ಹೊರೆಯವರ ಸಹಾಯದಿಂದ ಪತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಗುರುಲಿಂಗಪ್ಪ ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿದ್ದಾರೆ ಎನ್ನಲಾಗಿದೆ. ಈ ದಂಪತಿಗೆ 4 ವರ್ಷದ ಗಂಡು ಮಗುವಿದೆ. ಈ ಸಂಬಂಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.