ತರಕಾರಿ ವೃತ್ತದಲ್ಲಿ ರಾಮಚಂದ್ರಪ್ಪ ಅವರೆಕಾಯಿ ಮಂಡಿ ಹಾಗೂ ಜಾವಿದ್ ತರಕಾರಿ ಅಂಗಡಿ ಮುಂಭಾಗ ಫುಟ್‌ಪಾತ್ ಆವರಿಸಿಕೊಂಡು ಅವರೆಕಾಯಿ ಮೂಟೆಗಳನ್ನು ಹರಡಿದ್ದರು.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಅಪಘಾತ ತಪ್ಪಿಸಲು ಹೋದ ಪೊಲೀಸ್ ವಾಹನ ರಸ್ತೆ ವಿಭಜದ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಾರಿ ಗಾತ್ರದ ವಿದ್ಯುತ್ ಕಂಬ ನೆಲಕ್ಕೆ ಉರುಳಿ ಬಿದ್ದ ಘಟನೆ ಇಂದು ಮಧ್ಯಾಹ್ನ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಅವರೆಕಾಯಿ ಮಂಡಿ ಬಳಿ ನಡೆದಿದೆ.ಘಟನೆಯಲ್ಲಿ ಅದೃಶ್ಯಾವತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ದ್ವಿಚಕ್ರ ವಾಹನ ಸವಾರ ಮಹಿಳೆಗೆ ತಲೆಗೆ ಪೆಟ್ಟಾಗಿದ್ದು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ತರಕಾರಿ ವೃತ್ತದಲ್ಲಿ ರಾಮಚಂದ್ರಪ್ಪ ಅವರೆಕಾಯಿ ಮಂಡಿ ಹಾಗೂ ಜಾವಿದ್ ತರಕಾರಿ ಅಂಗಡಿ ಮುಂಭಾಗ ಫುಟ್‌ಪಾತ್ ಆವರಿಸಿಕೊಂಡು ಅವರೆಕಾಯಿ ಮೂಟೆಗಳನ್ನು ಹರಡಿದ್ದರು. ಇದನ್ನು ತುಂಬಿಸಿಕೊಳ್ಳಲು ಟೆಂಪೋ ಹಾಗೂ ಆಟೋ ನಿಂತಿದ್ದು, ಅದೇ ಸಮಯಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ವಾಹನ ಕೋಲಾರ ಕಡೆಯಿಂದ ಬಂದಿದೆ. ಅದೇ ಸಮಯದಲ್ಲಿ ಅಲ್ಲಿ ಸಡನ್ ಆಗಿ ಬಂದ ದ್ವಿಚಕ್ರ ವಾಹನ ಸವಾರ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೊಲೀಸ್ ವ್ಯಾನ್ ಎಡಕ್ಕೆ ತಿರುಗಿಸಿದ ಪರಿಣಾಮ ವಾಹನ ರಸ್ತೆ ವಿಭಜಕ ಹತ್ತಿದೆ. ಅಲ್ಲಿದ್ದ ಬೀದಿ ದೀಪದ ವಿದ್ಯತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಕಂಬ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.