ನೆರವಿನ ಹಸ್ತ ಚಾಚಿದ ಬಡ ಕುಟುಂಬ

| Published : Jun 15 2024, 01:14 AM IST

ಸಾರಾಂಶ

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕಮಲಾ ಸೀತಾರಾಮ ಕಾಂಬಳೆ ಜೂ.07 ರಂದು ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಪರದಾಡುತ್ತಿರುವ ಬಡ ಕುಟುಂಬಕ್ಕೆ ನೆರವಿನ ಅವಶ್ಯಕತೆಯಿದೆ.

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಕಮಲಾ ಸೀತಾರಾಮ ಕಾಂಬಳೆ ಜೂ.07 ರಂದು ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಪರದಾಡುತ್ತಿರುವ ಬಡ ಕುಟುಂಬಕ್ಕೆ ನೆರವಿನ ಅವಶ್ಯಕತೆಯಿದೆ. ಜೂ.7 ರಂದು ಹಿರಿಯ ಮಗ ಸುನೀಲ ಸೀತಾರಾಮ ಕಾಂಬಳೆ ಜತೆ ಬೈಕ್ ಮೇಲೆ ಶಿರಗುಪ್ಪಿಯಿಂದ ಅಥಣಿಗೆ ಹೋಗುವಾಗ ಉಗಾರ ಬಳಿ ಅಪಘಾತ ಸಂಭವಿಸಿ, ತಾಯಿಯ ತಲೆಗೆ ಗಂಭೀರವಾದ ಗಾಯವಾಗಿದೆ. ಇದರಿಂದ ಮಹಾರಾಷ್ಟ್ರದ ಮಿರಜ್‌ನ ಸಮರ್ಥ ನ್ಯೂರೋ ಆಸ್ಪತ್ರೆಯಲ್ಲಿ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿಯ ವೈದ್ಯರು ತಲೆಗೆ ಬಲವಾದ ಪಟ್ಟು ಬಿದ್ದ ಕಾರಣ ಆಪರೇಷನ್ ಮಾಡಬೇಕೆಂದು ತಿಳಿಸಿದ್ದಾರೆ. ₹7 ರಿಂದ ₹8 ಲಕ್ಷದವರೆಗೆ ಖರ್ಚಾಗಬಹುದೆಂದು ತಿಳಿಸಿದ್ದಾರೆ. ತೀರ ಬಡ ಕುಟುಂಬ ತಮ್ಮ ತಾಯಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ದಾನಿಗಳು, ಸಹೃದಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಈ ಬಡ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಮೊ.7090837626 ಗೆ ಸಂಪರ್ಕಿಸಿ, ಸಹಾಯ ಮಾಡಬಹುದಾಗಿದೆ. ಕಾಗವಾಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.