ತೋಟಗಾರಿಕೆ ಮೇಳದಲ್ಲಿ ಜನಾಕರ್ಷಿಸಿದ ಶ್ವಾನ ಪ್ರದರ್ಶನ

| Published : Feb 12 2024, 01:38 AM IST

ಸಾರಾಂಶ

ಬಾಗಲಕೋಟೆ: ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿದ್ಯಾಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದಲ್ಲಿ ಪಶು ಸಂಗೋಪನ ಇಲಾಖೆ ವತಿಯಿಂದ ಆಯೋಜಿಸಿದ್ದ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಜನಾಕರ್ಷಿಸಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿದ್ಯಾಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದಲ್ಲಿ ಪಶು ಸಂಗೋಪನ ಇಲಾಖೆ ವತಿಯಿಂದ ಆಯೋಜಿಸಿದ್ದ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಜನಾಕರ್ಷಿಸಿತು.

ದೇಶದಲ್ಲಿಯೇ ಹೆಸರು ಮಾಡಿದ ಮುಧೋಳ ಹಂಡ್ಸ್, ಬೀಗಲ್, ರಾಟ್ ವೀಲರ್, ಡಾಲ್ಮೇಶಿಯನ್, ಬೆಲ್ಜಿಯನ್ ಶೆಫರ್ಡ್‌, ಬಾಕ್ಸರ್, ಪಂಚಾಬಿ ಗ್ರೇ ಹೌಂಡ್, ಡ್ಯಾಷ್ಪಂಡ್, ಸೈಬೇರಿಯನ್ ಹಸ್ಕಿ, ಪೊಮೊರೇನಿಯನ್, ಗ್ರೇಟ್ ಡೇನ್, ಲ್ಯಾಬ್ರಡಾರ್ ರಿಟ್ರೈವರ್, ಶಿಹ್ತ್ಸು, ಲಾಸಾ ಅಪ್ಸೋ, ಪಗ್ ಡಾಗ್, ಡಾಬರ್ಮನ್, ಜರ್ಮನ್ ಶಪರ್ಡ್‌, ಗೋಲ್ಡನ್ ರೇಟ್ರಿವರ್ ಸೇರಿದಂತೆ ಒಟ್ಟು 17 ಜಾತಿಯ ಶ್ವಾನಗಳನ್ನು ಪ್ರದರ್ಶಿಸಲಾಯಿತು.

ಪಶು ಇಲಾಖೆ ಉಪನಿರ್ದೇಶಕ ಎಸ್.ಎಚ್. ಕರಡಿಗುಡ್ಡ, ಮುಖ್ಯ ಪಶು ವೈದ್ಯಾಧಿಕಾರಿ ಆರ್.ಎಸ್. ಪದರಾ, ಹಿರಿಯ ಪಶು ವೈದ್ಯ ಪರಿವೀಕ್ಷಕ ಐ.ಎಸ್. ಜಿಗಜಿನ್ನಿ, ಸೇರಿದಂತೆ ಪಶು ವೈದ್ಯರು ಮುತುವರ್ಜಿ ವಹಿಸಿ, ಸಾರ್ವಜನಿಕರಿಗೆ ಶ್ವಾನಗಳ ಪಾಲನೆ ಪೋಷಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಕೃಷಿಕರಿಗಾಗಿ ವಿಶೇಷ ವಿನ್ಯಾಸದ ಕೃಷಿ ಪರಿಕರಗಳು ರೈತರನ್ನು ಆಕರ್ಷಿಸಿದವು. ಪವರ್ ಸ್ಪೈ ಯಂತ್ರ, ಡಸ್ಟ್ ಸ್ಪೈ, ಮಿನಿ ಟ್ರ್ಯಾಕ್ಟರ್‌, ವಿವಿಧ ಜಾತಿಯ ಸಸಿಗಳು ತೆಂಗು, ಮಾವು ಚಿಕ್ಕು ಸೇರಿದಂತೆ ಇತರೆ ಜಾತಿಯ ಸಸಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.