ಯೋಗ ದಿನಾಚರಣೆ ಪೂರ್ವಭಾವಿ ಯೋಗೋತ್ಸವ

| Published : Jun 18 2024, 12:46 AM IST

ಸಾರಾಂಶ

ಜೂನ್ ೨೧ರಂದು ಆಚರಿಸಲಿರುವ ೨೦೨೪ನೇ ಸಾಲಿನ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವ ೨೦೨೪ನ್ನು ಶಿಗ್ಗಾಂವಿ ತಾಲೂಕಿನ ವಿವಿಧೆಡೆ ಆಚರಿಸಲಾಯಿತು.

ಶಿಗ್ಗಾಂವಿ: ಜೂನ್ ೨೧ರಂದು ಆಚರಿಸಲಿರುವ ೨೦೨೪ನೇ ಸಾಲಿನ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗೋತ್ಸವ ೨೦೨೪ನ್ನು ಶಿಗ್ಗಾಂವಿ ತಾಲೂಕಿನ ವಿವಿಧೆಡೆ ಆಚರಿಸಲಾಯಿತು.

ಜೇಕಿನಕಟ್ಟಿಯ ಮೊರಾರ್ಜಿ ವಸತಿ ಶಾಲೆ ಮತ್ತು ರಾಣಿಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ರಾಣಿಚೆನ್ನಮ್ಮ ಬಾಲಕಿಯರ ವಸತಿ ಶಾಲೆ ಶಿವಪುರ, ಮೊರಾರ್ಜಿ ವಸತಿ ಶಾಲೆ ಗಂಜಿಗಟ್ಟಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಬಾಡ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಶಿಗ್ಗಾಂವಿ, ಮೆಟ್ರಿಕ್ ನಂತರದ ಬಾಲಕರ ವಸತಿ ಶಾಲೆ ಶಿಗ್ಗಾಂವಿಯಲ್ಲಿ ಆಯೋಜಿಸಲಾಗಿತ್ತು.

ಆಯುಷ್ಯ ಪದ್ಧತಿ, ಆಯುರ್ವೇದದಲ್ಲಿ ಹೇಳಿರುವ ದಿನಚರ್ಯ, ಆಹಾರ ಪದ್ಧತಿ, ಆರೋಗ್ಯ ಸೂತ್ರಗಳು, ವೈಯಕ್ತಿಕ ಸ್ವಚ್ಛತೆ ಬಗ್ಗೆ ಶಿಗ್ಗಾಂವಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯರಾದ ಡಾ. ಲಕ್ಷ್ಮಣ ಶಿವಳ್ಳಿ ಅವರು ಮಾಹಿತಿ ನೀಡಿದರು. ಯೋಗ ತರಬೇತುದಾರರು ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿದರು

ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರಸ್ವತಿ ಘಜಕೋಶ, ಯೋಗ ತರಬೇತಿದಾರರಾದ ರೇಖಾ ಪಾಟೀಲ್, ನೀಲಮ್ಮ ವನಹಳ್ಳಿ, ಸಂತೋಷಿಮಾತ, ವಿಶ್ವನಾಥ ಹಾಗೂ ಡಾ. ಮುಸ್ಕಾನ್, ಮೈಲಾರಿ ಸೇರಿದಂತೆ ವಸತಿ ಶಾಲೆಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ಸಿಬ್ಬಂದಿಗಳು ಇತರರಿದ್ದರು.