ರಾಮನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶೋಭಾಯಾತ್ರೆ

| Published : Dec 30 2023, 01:30 AM IST

ರಾಮನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ ಹನುಮಂತ ದೇವಸ್ಥಾನದಿಂದ ಆರಂಭವಾದ ಯಾತ್ರೆಯು ಮಹಾರಾಜರ ಮಠ, ವಿರಕ್ತಮಠ, ಶಿವಾಜಿ ಗಲ್ಲಿ, ಅಂಬಿಗರ ಚೌಡಯ್ಯ ವೃತ್ತ, ಗೌರಿ-ಶಂಕರ ದೇವಸ್ಥಾನ, ಬಸವ ಜನ್ಮ ಸ್ಮಾರಕ, ಪತ್ತಾರ ಗಲ್ಲಿ, ಅಗಸಿ ಮೂಲಕ ತೆರಳಿ ಹನುಮಂತ ದೇವಸ್ಥಾನಕ್ಕೆ ಮರಳಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಪಟ್ಟಣದಲ್ಲಿ ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿಯಿಂದ ಶೋಭಾಯಾತ್ರೆ ನಡೆಯಿತು.

ಹನುಮಂತ ದೇವಸ್ಥಾನದಿಂದ ಆರಂಭವಾದ ಯಾತ್ರೆಯು ಮಹಾರಾಜರ ಮಠ, ವಿರಕ್ತಮಠ, ಶಿವಾಜಿ ಗಲ್ಲಿ, ಅಂಬಿಗರ ಚೌಡಯ್ಯ ವೃತ್ತ, ಗೌರಿ-ಶಂಕರ ದೇವಸ್ಥಾನ, ಬಸವ ಜನ್ಮ ಸ್ಮಾರಕ, ಪತ್ತಾರ ಗಲ್ಲಿ, ಅಗಸಿ ಮೂಲಕ ತೆರಳಿ ಹನುಮಂತ ದೇವಸ್ಥಾನಕ್ಕೆ ಮರಳಿತು. ಯಾತ್ರೆಯುದ್ದಕ್ಕೂ ಮನೆ ಮನೆಗೆ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಯ ಸ್ಟಿಕ್ಕರ್ ಅಂಟಿಸಿ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದು ಪ್ರತಿ ಹಿಂದುಗಳು ತಮ್ಮ ಮನೆ ಮುಂದೆ ಐದು ದೀಪ ಬೆಳಗುವ ಮೂಲಕ ಶ್ರೀರಾಮನಿಗೆ ಭಕ್ತಿ ಸಮರ್ಪಿಸಬೇಕೆಂದು ಕಾರ್ಯಕರ್ತರು ಮನವಿ ಮಾಡಲಾಯಿತು.

ಶೋಭಾಯಾತ್ರೆಯಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮ ವೇಷಧಾರಿಗಳು ಗಮನ ಸೆಳೆದರು. ಯಾತ್ರೆಯಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ ಹಿರೇಮಠ, ಸಹ ಸಂಚಾಲಕ ತಮ್ಮಣ್ಣ ಬಡಿಗೇರ, ತಾಲೂಕು ಸಂಚಾಲಕ ರಾಹುಲ ಜಗತಾಪ, ತಾಲೂಕು ಸಹ-ಸಂಚಾಲಕ ಪದ್ಮರಾಜ ಒಡೆಯರ, ಮಾತೃಶಕ್ತಿಯ ತಾಲೂಕಾಧ್ಯಕ್ಷೆ ರೂಪಾ ಜಾಧವ, ಉಪಾಧ್ಯಕ್ಷೆ ವಿದ್ಯಾಶ್ರೀ ಬಡಿಗೇರ, ಲಕ್ಷ್ಮೀ ವಸ್ತ್ರದ, ಶಿವು ಬೆಲ್ಲದ, ದುಂಡಪ್ಪ ಜೀರ, ಮಂಜುನಾಥ ಮುದೂರ, ಸುಜಾತಾ ಭಂಡಾರಿ, ಸುನಂದಾ ಗಾಯಕವಾಡ, ಶಕುಂತಲಾ ನಿಕ್ಕಂ, ಶೃತಿ ಅರಸನಾಳ, ರಾಧಿಕಾ ಕಕೇರಿ, ಸವಿತಾ ಮಾದರ, ಶಿಲ್ಪಾ ಲಮಾಣಿ, ವಿರೇಶ ಹಿರೇಮಠ, ಬಸವರಾಜ ಇಂಗಳೇಶ್ವರ, ಭಾಗ್ಯವಂತ ಇಂಗಳೇಶ್ವರ, ಸಂತೋಷ ಜಾಧವ, ಸಂಗಮೇಶ ಪೂಜಾರಿ, ದಾನೇಶ ಬಡಿಗೇರ, ಶಿವಕುಮಾರ ನಾಯ್ಕೋಡಿ, ಪ್ರವೀಣ ಬಸ್ತಾಳ ಸೇರಿದಂತೆ ಇತರರು ಇದ್ದರು.