ಬಸವ ಜಯಂತಿಗೆ ಜೋಡು ಎತ್ತುಗಳ ಮೆರವಣಿಗೆ

| Published : May 02 2025, 12:11 AM IST

ಸಾರಾಂಶ

ಓಕಳಿ ಬಂಡೆಯಲ್ಲಿ ಆಂಜನೇಯ ಭಾವಚಿತ್ರ ಮತ್ತು ಬಸವ ಜಯಂತಿ ನಿಮಿತ್ತ ಜೋಡು ಎತ್ತುಗಳ ಮೆರವಣಿಗೆ ಬುಧವಾರ ಅದ್ಧೂರಿಯಗಿ ನಡೆಯಿತು.

ಡಂಬಳ: ಓಕಳಿ ಬಂಡೆಯಲ್ಲಿ ಆಂಜನೇಯ ಭಾವಚಿತ್ರ ಮತ್ತು ಬಸವ ಜಯಂತಿ ನಿಮಿತ್ತ ಜೋಡು ಎತ್ತುಗಳ ಮೆರವಣಿಗೆ ಬುಧವಾರ ಅದ್ಧೂರಿಯಗಿ ನಡೆಯಿತು.

ಡಂಬಳ ಗ್ರಾಮದ ಯುವಕರ ಆಶ್ರಯದಲ್ಲಿ ನಡೆದ ಮೆರವಣಿಗೆಯಲ್ಲಿ ಗ್ರಾಮದ ರೈತರು ತಮ್ಮ ಜೋಡೆತ್ತುಗಳ ಮೆರವಣಿಗೆ ಮಾಡಿದರು.

ರೈತರು ಎತ್ತು, ಹೋರಿ, ಆಕಳುಗಳಿಗೆ ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ ಸಿಂಗರಿಸಿದ್ದರು. ಗಳೆ, ನೊಗ, ಗಾಡಿ, ಹಗ್ಗ, ಪಲಗ, ದಿಂಡು ಮಂತಾದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿ ಪೂಜೆ ಮಾಡಿದರು.

ರೈತರು ಉತ್ಸಾಹದಿಂದ ಹೊಲ ಗದ್ದೆಗಳಿಗೆ ತೆರಳಿ ನಸುಕಿನ ಜಾವದಲ್ಲಿಯೇ ಎತ್ತು, ಗೋವುಗಳಿಗೆ ಸ್ನಾನ ಮಾಡಿಸಿಕೊಂಡು ಊರ ಹೊರಗಡೆ ಎತ್ತುಗಳಿಗೆ ಮತಾಟಿ, ಮಗಡಾ, ಹಣಿಕಟ್ಟು, ಗೊಂಡ್ಯಾ, ಕೊರಳ ಪಟ್ಟಿ, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ಹಗ್ಗದ ವಸ್ತುಗಳಿಂದ ಸಿಂಗಾರ ಮಾಡಿ ವಿವಿಧ ವಾಧ್ಯಗಳೋಂದಿಗೆ ಮೆರವಣಿಗೆ ಮಾಡಿಕೊಂಡು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ‌ ಗ್ರಾಮದ ಆರಾಧ್ಯ ದೇವರಾದ ಆಂಜನಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಹಾಲೇಶ್ವರ ಗದ್ದುಗೆಯ ಆವರಣದಲ್ಲಿ ಗೋದಿ ಹುಗ್ಗಿ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ, ರಮೇಶ ಹೊಂಬಳ, ಹಾಲಪ್ಪ ಡೊಳ್ಳಿನ್, ಸಣ್ಣ ಹನುಮಪ್ಪ ಬಂಡಿ, ರಾಮಪ್ಪ ಪೂಜಾರಿ, ರಾಮಪ್ಪ ಹೊಂಬಾಳ, ಹನುಮಪ್ಪ ರಾಘಣ್ಣನವರ್‌, ಸೋಮಪ್ಪ ಗಿರಾಗತಿ, ಬೀರಪ್ಪ ಪೂಜಾರ, ಕೆಂಚಪ್ಪ ಡೊಳ್ಳಿನ, ಸಿದ್ದಪ್ಪ ಹೊಂಬಾಳ, ಕುಬೇರಪ್ಪ ಕವಲಿ, ಬಸವರಾಜ್ ಕವಲಿ,ಸಿದ್ದಪ್ಪ ಮಂಗೋಜಿ, ಭರ್ಮಪ್ಪ ಕೋತಂಬರಿ ಭೀಮಪ್ಪ ಕಿತ್ನೂರ, ಹನುಮಪ್ಪ ಪಲ್ಲೆದ, ಗುರಪ್ಪ ಬಂಡಿ, ಗೂರಪ್ಪ ಮಂಗೋಜಿ, ರೇವಣಸಿದ್ದಪ್ಪ ಕರಿಗಾರ, ಸಿದ್ದಪ್ಪ ಹೊಂಬಾಳ, ರವಿ ಆಲೂರ, ಸಿದ್ದಪ್ಪ ಪಲ್ಲೆದ, ಕರಿಯಪ್ಪ ಪಲ್ಲೇದ, ಬಸಪ್ಪ ಕರಿಗಾರ, ಮಾರುತಿ ಹೊಂಬಾಳ, ಯಲ್ಲಪ್ಪ ಕರಿಗಾರ, ರಾಮಪ್ಪ ಚವಡಕಿ ಗ್ರಾಮದ ಹಿರಿಯರು ಯುವಕರು ಇದ್ದರು.