ಅಂಬೇಡ್ಕರ್‌ ವಿಚಾರಗಳನ್ನು ಅನುಸರಿಸುವ ಅಂಬೇಡ್ಕರ್ ವಾದಿಗಳಾಗಿ: ಶಿಕ್ಷಕ ನಾಗೇಶ ಹರಳಯ್ಯಾ

| Published : May 02 2025, 12:10 AM IST

ಅಂಬೇಡ್ಕರ್‌ ವಿಚಾರಗಳನ್ನು ಅನುಸರಿಸುವ ಅಂಬೇಡ್ಕರ್ ವಾದಿಗಳಾಗಿ: ಶಿಕ್ಷಕ ನಾಗೇಶ ಹರಳಯ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರೆಲ್ಲರಿಗೂ ಏಪ್ರಿಲ್ 14 ಹಾಗೂ ಡಿ. 6ಕ್ಕೆ ಬಂದಾಗ ಮಾತ್ರ ಅಂಬೇಡ್ಕರ್ ಅವರು ನೆನಪಿಗೆ ಬರುತ್ತಾರೆ. ನಾವೆಲ್ಲರೂ ಸೀಸನ್ ಅಂಬೇಡ್ಕರ್ ವಾದಿಗಳು ಆಗಿದ್ದೇವೆ ಎಂದು ಶಿಕ್ಷಕ ನಾಗೇಶ ಹರಳಯ್ಯಾ ವಿಷಾದಿಸಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ದಲಿತರೆಲ್ಲರಿಗೂ ಏಪ್ರಿಲ್ 14 ಹಾಗೂ ಡಿ. 6ಕ್ಕೆ ಬಂದಾಗ ಮಾತ್ರ ಅಂಬೇಡ್ಕರ್ ಅವರು ನೆನಪಿಗೆ ಬರುತ್ತಾರೆ. ನಾವೆಲ್ಲರೂ ಸೀಸನ್ ಅಂಬೇಡ್ಕರ್ ವಾದಿಗಳು ಆಗಿದ್ದೇವೆ ಎಂದು ಶಿಕ್ಷಕ ನಾಗೇಶ ಹರಳಯ್ಯಾ ವಿಷಾದಿಸಿದರು.

ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

70 ಪ್ರತಿಶತ ಜನರು ಸೀಜನ್ ಅಂಬೇಡ್ಕರ್ ವಾದಿಗಳು ಹೆಚ್ಚಾಗಿದ್ದಾರೆ. ಎಪ್ರಿಲ್ ತಿಂಗಳು ಬಂದಾಗ ಜಯಂತಿಯಲ್ಲಿ ಡಿಜೆ ಹಚ್ಚಿ ಕುಣಿಯುವುದು, ಯಾವುದಾದರೂ ಒಂದು ದೊಡ್ಡ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಮತ್ತು ಡಿಸೆಂಬರ್ 6 ರಂದು ಅಂಬೇಡ್ಕರ್ ಭಾವಚಿತ್ರದ ಒಂದೆರಡು ಕ್ಯಾಂಡಿಡ್ ಹಚ್ಚುವುದು, ಅಂಬೇಡ್ಕರ್ ಅಂದರೆ ಇಷ್ಟೇ ಅಂದುಕೊಂಡಿದ್ದಾರೆ ನಮ್ಮ ಜನ ಎಂದರು.

ನಮ್ಮಲ್ಲಿ ಎರಡು ಗುಂಪುಗಳಿವೆ, ಅದರಲ್ಲಿ ಒಂದು ಗುಂಪು ಅಂಬೇಡ್ಕರ್ ಅವರನ್ನು ಅನುಸರಿಸುವ ಗುಂಪು, ಈ ಗುಂಪು ಮಾಡುವುದು ಇಡೀ ವರ್ಷ ಅಂಬೇಡ್ಕರ್ ಅವರ ಆಚಾರ ವಿಚಾರಗಳನ್ನು ಓದುತ್ತ ಅನುಸರಿಸುತ್ತಾ ಬರುತ್ತಾರೆ. ಆಚರಿಸುವ ಗುಂಪಿನ ಕೆಲಸವೇನೆಂದರೆ ಏ. 14 ಬಂತು ಅಂದರೆ ಮಾತ್ರ ಸಕ್ರಿಯ ಆಗಿರುತ್ತಾರೆ. ಇಂಥವರನ್ನು ಸೀಸನ್ ಅಂಬೇಡ್ಕರ್ ವಾದಿಗಳು ಎನ್ನುತ್ತೇವೆ. ಈ ತರಹ ಮಾಡುವುದರಿಂದ ದಲಿತರು ಯಾವತ್ತೂ ಉದ್ದಾರ ಆಗುವುದಿಲ್ಲ, ಹಾಗಾಗಿ ನಾವೆಲ್ಲರೂ ಸೀಸನ್ ಅಂಬೇಡ್ಕರ್ ವಾದಿಗಳಾಗದೆ ಅಂಬೇಡ್ಕರ್ ವಿಚಾರ ಅನುಸರಿಸುವ ಅಂಬೇಡ್ಕರ್ ವಾದಿಗಳಾಗಬೇಕೆಂದರು.

ಸಹ ಶಿಕ್ಷಕ ನಾಗ್ಯಶ ಹೆರುರಸ, ದಸ್ತಾಪುರ ಶಾಲೆಯ ಮುಖ್ಯ ಶಿಕ್ಷಕ ದಿಲೀಪ್ ಕರಾಳೆ, ಸಹಶಿಕ್ಷಕ ಮಲ್ಲಿಕಾರ್ಜುನ್ ಖೊಬ್ರೇ, ಪಿಎಸ್ಐ ಆಶಾ ರಾಠೋಡ, ಶ್ರೀಮಂತ ಕಗಲಮಡಿ, ಬಿಎಸ ಪಿ ಗ್ರಾಮೀಣ ಅಧ್ಯಕ್ಷ ಅಂಬರಾಯ ದಸ್ತಾಪುರ, ಎಸ್ ಡಿ ಎಮ್ ಸಿ ಅಧ್ಯಕ್ಷ ಮಸ್ತಾನ ದಂಡೆ, ರಾಜಶೇಖರ ದಂಡೆ, ಗ್ರಾಪಂ ಸದಸ್ಯ ಪಂಡಿತ ಜಂಮಗಾ, ಈಶ್ವರ ಖೊಬ್ರೇ, ದೇವನಂದ ಖೊಬ್ರೇ, ಶಿವರಾಯ ಹೊಳಿ, ಸುರೇಶ ಖೊಬ್ರೇ, ಧೂಳಪ್ಪ ಕಮಲಾಪುರ, ಶಿವಪುತ್ರ ಹಿರನಾಗವ, ಪ್ರದೀಪ್ ಹರಿದಾಸ, ಚೆನ್ನವೀರ ದಂಡೆ, ಜೈ ಭೀಮ್ ಪೂತಿ, ಸತೀಶ ದಂಡೆ, ರಮೇಶ ಪೋತಿ, ಅಂಬರಾಯ ಖೊಬ್ರೇ, ಸಂಜು ಕಗಲಮಡಿ, ಗೌತಮ, ಹಿರಿನಾಗಾಂವ, ಅನಿಲ ಮಹಾಗಾಂವ, ದೇವ ಕಗಲಮಡಿ, ಜೀತೆಂದ್ರ ಹಿರಿನಾಗಾಂವ, ಗೌತಮ ಖೆಲ್ಡ್, ಯೆಶ್ವಂತ ಕಗಲಮಡಿ ಇದ್ದರು.