ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲೆಯ ಪಂಚತ್ಸರಣ ಸ್ಕೌಟ್ ಟ್ರೂಪ್ ವತಿಯಿಂದ ಬುಧವಾರ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಮೂಲಕ ಶಬ್ದ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಬೇಕೆಂಬ ಸಂದೇಶ ಸಾರುವ ಕಾರ್ಯಕ್ರಮವನ್ನು ನಡೆಯಿತು.ಸ್ಕೌಟ್ಗಳು ಸರಸ್ವತಿಪುರಂ ಬಡಾವಣೆಯ ಮನೆಗಳಿಗೆ ತೆರಳಿ ದೀಪಗಳನ್ನು ನೀಡಿ ದೀಪ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ ಸುಡುವುದನ್ನು ನಿಲ್ಲಿಸಿ ಪರಿಸರ ಉಳಿಸಿ ಎಂದು ಹೇಳುತ್ತಾ ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಘೋಷಣೆಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಬೀದಿಗಳಲ್ಲಿ ಸಂಚರಿಸಿದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಆರ್. ಕವಿತಾ ಅವರು ಪರಿಸರ ಸ್ನೇಹಿ ದೀಪಾವಳಿ ಆಚರಿಸುವುದರ ಮಹತ್ವವನ್ನು ತಿಳಿಸುತ್ತಾ ಪ್ರತಿಯೊಬ್ಬರು ತಮ್ಮ ಹತ್ತಿರದವರಿಗೆ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ದೀಪಬೆಳಗಿಸುವುದರ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮಾಡಬೇಕೆಂದು ಕರೆ ನೀಡಿದರು.ಎಲ್ಲ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.