ಸಾರಾಂಶ
A quarrel over money ends in murder
ಹಿರಿಯೂರು: ದಿಂಡಾವರ ಗ್ರಾಮದಲ್ಲಿ ಇಬ್ಬರ ನಡುವೆ ಹಣದ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ದಿಂಡಾವರ ಗ್ರಾಮದ ಜಯಣ್ಣ (65) ಮೃತ ದುರ್ದೈವಿ.
ಏಪ್ರಿಲ್ 2021ರಲ್ಲಿ ಜಯಣ್ಣನ ಮಗ ಅಣ್ಣಪ್ಪ ಹಾಗೂ ಆರೋಪಿ ಗಂಗಾಧರ ಹೋಗುತ್ತಿದ್ದ ವಾಹನಕ್ಕೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಣ್ಣಪ್ಪ ಸಾವನ್ನಪ್ಪಿದ್ದಾನೆ. ಈ ಘಟನೆ ಬಳಿಕ ಆರೋಪಿ ಗಂಗಾಧರ ಊರು ತೊರೆದು ಬೆಂಗಳೂರು ಸೇರಿದ್ದವನು ಸೋಮವಾರ ಗ್ರಾಮದಲ್ಲಿ ಭೂತಪ್ಪನ ಹಬ್ಬಕ್ಕೆ ಬಂದಿದ್ದನು. ಅಪಘಾತದಲ್ಲಿ ಸಾವನ್ನಪ್ಪಿದ್ದ ಅಣ್ಣಪ್ಪನಿಂದ ಆರೋಪಿ ಸಾಲ ಮಾಡಿದ್ದ ಎನ್ನಲಾಗಿದೆ. ಊರ ಹಬ್ಬಕ್ಕೆ ಬಂದಿದ್ದ ಗಂಗಾಧರನಿಗೆ ಅಣ್ಣಪ್ಪನ ತಂದೆ ಮೃತ ಜಯಣ್ಣ ಹಣ ಕೊಡುವಂತೆ ಕೇಳಿದಾಗ, ಹಣ ಕೊಡುವುದು ಯಾವುದೂ ಇಲ್ಲ, ಪದೇ ಪದೇ ಕೇಳಿ ಮರ್ಯಾದೆ ತೆಗೆಯುತ್ತೀಯ ಎಂದು ಆತನ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ಬೀಳಿಸಿ ಎದೆಗೆ ಹೊಡೆದ ಎನ್ನಲಾಗಿದೆ. ನೆಲಕ್ಕೆ ಬಿದ್ದ ಜಯಣ್ಣನನ್ನು ಸ್ಥಳೀಯ ದಿಂಡಾವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಮಾರ್ಗ ಮಧ್ಯೆ ಜಯಣ್ಣ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ದುರುದ್ದೇಶದಿಂದ ಜಯಣ್ಣನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಗಂಗಾಧರ, ಭೂತೇಶ್, ದೇವರಾಜ್ ಎನ್ನುವವರ ಮೇಲೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಫೋಟೊ: ಚಿತ್ರ 1 ಕೊಲೆಗೀಡಾದ ಜಯಣ್ಣ.