ಅಂಧಮಕ್ಕಳ ಶಾಲೆಯ ನೂತನ ಕಟ್ಟಡಕ್ಕೆ ಶೀಘ್ರ ಗುದ್ದಲಿ ಪೂಜೆ

| Published : Jan 23 2025, 12:48 AM IST

ಅಂಧಮಕ್ಕಳ ಶಾಲೆಯ ನೂತನ ಕಟ್ಟಡಕ್ಕೆ ಶೀಘ್ರ ಗುದ್ದಲಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂ. ಕೃಷ್ಣ ಅಂಧ ಮಕ್ಕಳ ವಸತಿಯುತ ಶಾಲೆಯು ಹಳೆಯದಾಗಿದ್ದು, ನೂತನ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚನೆ ಮಾಡಿ ಇನ್ನೊಂದು ವಾರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿ ಕೆಲಸ ಮುಗಿಸಿ ನಾನೇ ಉದ್ಘಾಟನೆ ಮಾಡುವವರೆಗೂ ನೋಡಿಕೊಳ್ಳುವುದಾಗಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಎಂ. ಕೃಷ್ಣ ಅಂಧ ಮಕ್ಕಳ ವಸತಿಯುತ ಶಾಲೆಯು ಹಳೆಯದಾಗಿದ್ದು, ನೂತನ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚನೆ ಮಾಡಿ ಇನ್ನೊಂದು ವಾರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿ ಕೆಲಸ ಮುಗಿಸಿ ನಾನೇ ಉದ್ಘಾಟನೆ ಮಾಡುವವರೆಗೂ ನೋಡಿಕೊಳ್ಳುವುದಾಗಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಸ್ವಾಮೀಜಿ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಂ. ಕೃಷ್ಣ ಅಂಧರ ಮಕ್ಕಳ ಶಾಲೆಯಲ್ಲಿ ಒಂದು ಕಟ್ಟಡ ನಿರ್ಮಾಣ ಸಮಿತಿ ರಚನೆ ಮಾಡಬೇಕು. ಲೋಪದೋಷವಾಗಿದೆ ಎಂದು ಯಾರೂ ದೂರಬಾರದು. ಸಭೆ ಮಾಡಿ ಚರ್ಚಿಸಿ ಸಮಿತಿ ಮಾಡಿದ ನಂತರ ಕಟ್ಟಡ ನಿರ್ಮಾಣದ ಗುತ್ತಿಗೆದಾರರನ್ನು ನೇಮಿಸಬೇಕಾಗಿದೆ. ನೂರಕ್ಕೆ ನೂರು ಭಾಗ ಹೊಸ ಕಟ್ಟಡವಾಗಲಿದ್ದು, ನೂರಕ್ಕೆ ನೂರು ಭಾಗ ನಾನೇ ಗುದ್ದಲಿ ಪೂಜೆ ಮಾಡಿ ನೂತನ ಕಟ್ಟಡ ಉದ್ಗಾಟಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದರ ಸಂಪೂರ್ಣ ಹೊರೆಯನ್ನು ನಾನು ಮತ್ತು ರಘುಗೌಡ ಅವರು ಜವಬ್ಧಾರಿವಹಿಸಿಕೊಳ್ಳುತ್ತೇವೆ. ಈ ಕಟ್ಟಡ ನಿರ್ಮಾಣಕ್ಕೆ ಯಾರಾರು ದಾನಿಗಳು ಬರುತ್ತಾರೆ. ಅದನ್ನ ಸಂಸ್ಥೆಗೆ, ಸಂಘಕ್ಕೆ ಚೆಕ್ ಮೂಲಕ ಲೆಕ್ಕದ ದಾಖಲೆ ಇದ್ದರೇ ಒಳ್ಳೆಯದು. ಮುಂಧೆ ನಾವು ಇಲ್ಲವೇ ಸಂಬಂಧಪಟ್ಟವರು ಲೆಕ್ಕ ಕೇಳಿದಾಗ ಕೊಡಬೇಕು ಎಂದರು. ನಮ್ಮ ಶಾಸಕರ ನಿಧಿ ಹಣ ಮಾರ್ಚ್‌ಗೆ ಬರುತ್ತದೆ. ಅದ್ನನ ಕಾಯದೇ ಮುಂದಿನ ತಿಂಗಳು ಬೇಡ, ಮುಂದಿನ ವಾರವೇ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಮಾಡೋಣ. ನನ್ನ ಶಾಸಕರ ನಿಧಿಯಿಂದಲೇ ಶೀಘ್ರವೇ ಹಣ ಕೊಡಲಾಗುವುದು. ಸರಕಾರದಲ್ಲಿ ಯಾವ ರೀತಿ ನಿಯಮಗಳಿವೆ ನೋಡಿಕೊಂಡು ಹಳೆ ಕಟ್ಟಡ ನೆಲಸಮ ಮಾಡಲಾಗುವುದು. ಹೊಸ ಕಟ್ಟಡ ನಿರ್ಮಿಸಿದ ಮೇಲೆ ನಂತರದಲ್ಲಿ ಹಳೆ ಕಟ್ಟಡದ ಬಗ್ಗೆ ಚರ್ಚೆ ಮಾಡೋಣ. ಸಂಬಂಧಪಟ್ಟ ಅಧಿಕಾರಿಗಳ ಕರೆಯಿಸಿ ಮುಂದಿ ನಿರ್ಧಾರಕೈಗೊಳೋಣ ಎಂದು ಹೇಳಿದರು.

ಈಗಾಗಲೇ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ನನಗೆ ಕರೆ ಮಾಡಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ೫೦ ಲಕ್ಷದ ಪಟ್ಟಿ ಕೊಡು. ಅನುಧಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ೧೦ ಲಕ್ಷವನ್ನು ಹೊಸ ಕಟ್ಟಡ ನಿರ್ಮಾಣಕ್ಕೆ ಸೇರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನುಡಿದರು. ಎಂ.ಎಲ್.ಸಿ, ಸದಸ್ಯರದ್ದು ಕೂಡ ಇಲ್ಲಿಗೆ ಅನುದಾನ ತರಲು ಸೇರಿಸಲಾಗುವುದು. ಸಂಸದರು ಕೂಡ ಸಹೋದರರ ಸಮಾನ. ಅವರು ಕೂಡ ಈ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡುವರು. ಈ ಕಟ್ಟಡ ನಿರ್ಮಾಣದ ಮುಗಿಸುವ ಕೆಲಸ ಕೂಡ ನಾನೇ ಮಾಡುತ್ತೇನೆ. ಹಣ ಕಡಿಮೆಯಾದರೆ ಭಿಕ್ಷಾಟನೆ ಮಾಡಿದರೂ ಪರವಾಗಿಲ್ಲ. ಈ ಕೆಲಸವನ್ನು ಎಲ್ಲರೂ ಸೇರಿ ಪೂರ್ಣಗೊಳಿಸೋಣ ಎಂದು ಕರೆ ಕೊಟ್ಟರು. ಇದೇ ವೇಳೆ ಎಂ. ಕೃಷ್ಣ ಅಂಧರ ಶಾಲೆಯ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಈ ಶಾಲೆಯು ಹಳೆಯದಾಗಿರುವುದರಿಂದ ಇಲ್ಲಿ ಅಂಧ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಶಾಸಕರಲ್ಲಿ ಚರ್ಚೆ ಮಾಡಿದಾಗ ಅನುಧಾನ ಕೊಡಿಸುವುದಾಗಿ ಹೇಳಿದ್ದಾರೆ. ಜಿಲ್ಲೆಯ ಲೋಕಸಭಾ ಸದಸ್ಯರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಎಲ್ಲರೂ ಸೇರಿಕೊಂಡರೇ ಇನ್ನೊಂದು ತಿಂಗಳಲ್ಲಿ ಗುದ್ದಲಿ ಪೂಜೆ ಮಾಡಬಹುದು ಎಂದರು. ಈಗಾಗಲೇ ಶಾಸಕರು ಪೂರ್ಣ ಭರವಸೆ ನೀಡಿದ್ದು, ಅದರಂತೆ ಕಾಮಗಾರಿ ಆರಂಭವಾಗಲಿ ಎಂದು ಸಂತೋಷಪಟ್ಟರು. ಇದೇ ವೇಳೆ ಶ್ರೀ ಆದಿಚುಂಚನಗಿರಿ ಶಾಖ ಮಠದ ಶ್ರಿ ಶಂಭುನಾಥ ಸ್ವಾಮೀಜಿ, ಶ್ರೀ ಜವೇನಹಳ್ಳ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಭಾವಚಿತ್ರ ಅನಾವರಣಗೊಳಿಸಿದರು. ಸಮವಸ್ತ್ರ ವಿತರಣೆ ಮಾಡಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ, ಕೆಯೆಹೆಚ್. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ರಘುಗೌಡ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಡಾ. ಅಬ್ದುಲ್ ಬಶೀರ್‌, ಒಕ್ಕೂಟದ ಅಧ್ಯಕ್ಷ ಬಿ.ಕೆ. ಮಂಜುನಾಥ್, ಆದಿಚುಂಚನಗಿರಿ ಮಹಿಳಾ ಸಂಘ ಡಾ. ಭಾರತೀ, ಡಾ. ಹೇಮಾಲತಾ ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ತಮ್ಮಯ್ಯ, ಪಾರ್ಶನಾಥ್, ಹಿರಿಯ ನಾಗರಿಕ ವೇದಿಕೆಯ ಜಯಲಕ್ಷ್ಮಿ ರಾಜಣ್ಣಗೌಡ, ಕಸಾಪ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಶಾಂತೇಗೌಡ ಇತರರು ಭಾಗವಹಿಸಿದ್ದರು.