ಸಾಮಾಜಿಕ ನ್ಯಾಯದ ದಾರಿ ತೋರಿ ಮಾತು ಕಳೆದುಕೊಂಡ ದೀನ ದಲಿತರು ಬಡವರಿಗೆ ಮಾತು ಬರುವಂತೆ, ಶಿಕ್ಷಣ, ಉದ್ಯೋಗ, ಸಮಾನತೆಗೆ ದಿಟ್ಟ ಹೆಜ್ಜೆ ಹಾಕಿದ ಡಿ.ದೇವರಾಜ ಅರಸು ನಾಡು ಕಂಡ ಅಪರೂಪದ ಮುಖ್ಯಮಂತ್ರಿ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಹಾನಗಲ್ಲ: ಸಾಮಾಜಿಕ ನ್ಯಾಯದ ದಾರಿ ತೋರಿ ಮಾತು ಕಳೆದುಕೊಂಡ ದೀನ ದಲಿತರು ಬಡವರಿಗೆ ಮಾತು ಬರುವಂತೆ, ಶಿಕ್ಷಣ, ಉದ್ಯೋಗ, ಸಮಾನತೆಗೆ ದಿಟ್ಟ ಹೆಜ್ಜೆ ಹಾಕಿದ ಡಿ.ದೇವರಾಜ ಅರಸು ನಾಡು ಕಂಡ ಅಪರೂಪದ ಮುಖ್ಯಮಂತ್ರಿ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಗುರುವಾರ ಹಾನಗಲ್ಲಿನ ಬಾಬು ಜಗಜೀವನರಾಮ್ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಬೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ ಡಿ. ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೈಸೂರು ಎಂದಿದ್ದ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಊಳುವವನೆ ಒಡೆಯ ಜಾರಿಯಾದುದು, ಹಾವನೂರ ವರದಿ ಅನುಷ್ಠಾನ, ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ, ವಿದ್ಯಾವಂತರಿಗೆ ಸ್ಟೈಫಂಡ್ ಸೇರಿದಂತೆ ಸಮಾಜದ ಎಲ್ಲ ಸ್ತರದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಅಪರೂಪದ ಮುಖ್ಯಮಂತ್ರಿ. ಅಧಿಕಾರಕ್ಕೆ ಅಂಟದೇ ಸಮಾಜೋದ್ಧಾರವೇ ಸಂಕಲ್ಪವಾಗಿ ಸತ್ಯ ಶುದ್ಧ ಯೋಜನೆ, ಯೋಚನೆ ಮೂಲಕ ಕರ್ನಾಟಕದಲ್ಲಿ ದಾಖಲೆ ಆಡಳಿತ ನೀಡಿದ ಹೆಮ್ಮೆ ಅವರದು. ನಾನೇ ಸರ್ಕಾರ, ನನ್ನದೇ ಕಾನೂನು ಎಂದು ಗುಡುಗಿ ಸರಿ ಎನಿಸಿದ್ದನ್ನು ಅಂಜದೇ ಅಳುಕದೇ ಕಾರ್ಯರೂಪಕ್ಕೆ ತಂದ ಧೀಮಂತ ನಾಯಕ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ

ಮಾತನಾಡಿ, ದಲಿತರು ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯ, ಅಧಿಕಾರ ಮತ್ತು

ಅವಕಾಶಗಳನ್ನು ನೀಡಿ, ಇವೆಲ್ಲ ಕೆಲವೇ ವರ್ಗಗಳಿಗೆ ಸೀಮಿತವಾಗಬಾರದು ಎಂದು ದಿಟ್ಟ ಹೆಜ್ಜೆ ಹಾಕಿ, ಹಿಂದುಳಿದ, ದಲಿತ ಮತ್ತು ಸಮುದಾಯಗಳ ನಾಯಕರನ್ನು ರಾಜಕೀಯವಾಗಿ ಮುಂಚೂಣಿಗೆ ತಂದವರು ದೇವರಾಜ ಅರಸು ಎಂದರು.

ತಾಲೂಕು ತಹಸೀಲ್ದಾರ ವಿಠ್ಠಲ್ ಚೌಗುಲಾ ಮಾತನಾಡಿ, ಸಾಮಾಜಿಕ ಬದುಕಿನ ಭದ್ರತೆ ನೀಡಿದ ದೇವರಾಜ ಅರಸು ಅವರ ದಾರಿಯಲ್ಲಿ ನಾವೆಲ್ಲ ನಡೆಯಬೇಕಾಗಿದೆ. ಯುವಕರು, ವಿದ್ಯಾರ್ಥಿಗಳು ಸಾಧಕರಾಗಬೇಕು. ಒಳ್ಳೆಯ ಹವ್ಯಾಸಗಳ ಮೂಲಕ ವೈಯಕ್ತಿಕ ಹಾಗೂ ಸಮಾಜಕಿಕ ಹಿತಕ್ಕೆ ಬದ್ಧರಾಗಬೇಕು ಎಂದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಹನ್ಮಂತಪ್ಪ ಮರಗಡಿ, ಭೂ ಸುಧಾರಣೆ

ಕಾಯ್ದೆ, ಉಳುವವನೇ ಹೊಲದ ಒಡೆಯ ಎಂಬ ತತ್ವದಡಿ ಕ್ರಾಂತಿಕಾರಿ ಭೂ ಸುಧಾರಣೆ ಜಾರಿಗೆ ತಂದು,

ಲಕ್ಷಾಂತರ ಬಡ ಹಾಗೂ ಹಿಂದುಳಿದ ರೈತರಿಗೆ ಭೂಮಿಯ ಹಕ್ಕು ಕಲ್ಪಿಸಿಕೊಟ್ಟರು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಎಸ್.ಆನಂದ, ಹನುಮಂತಪ್ಪ ಯಳ್ಳೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಗಂಗಮ್ಮ ಹಿರೇಮಠ, ಮಹೇಶ ಪವಾಡಿ, ಬಸವಣ್ಣೆಪ್ಪ ವಾಲೀಕಾರ, ರಾಜೇಂದ್ರ ರೆಡ್ಡೇರ, ಬಸವರಾಜ ಚವ್ಹಾಣ, ಮಂಜಪ್ಪ ತಡಸದ, ರಾಜೇಂದ್ರ ಬಾರ್ಕಿ, ವಸಂತ ವೆಂಕಟಾಪುರ, ಪರಶುರಾಮ ಹುಳ್ಳೀಕಾಸಿ, ನಿಂಗಪ್ಪ ಕಾಳೇರ, ಶಿವಾಜಿ ಹರಿಜನ, ಚಿದಾನಂದ ಹಿರೇಮಠ, ಪುಟ್ಟಪ್ಪ ಶಿಗ್ಲಿ, ಎಂ.ಎ.ನೆಗಳೂರ, ಬಸನಗೌಡ ಪಾಟೀಲ, ಮಿನಾಕ್ಷಿ ಲಕ್ಕುಂಡಿ, ಸಿದ್ದು ಗೌರಣ್ಣನವರ, ರಾಜು ಶಿರಪಂಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.