ಪಿಲಿಕುಳ ಉದ್ಯಾನದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ

| Published : Mar 23 2024, 01:07 AM IST

ಪಿಲಿಕುಳ ಉದ್ಯಾನದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರೀಡಿಂಗ್ ವೇಳೆ ಗುರುವಾರ ರಾತ್ರಿ ಹೆಣ್ಣು ಕಾಳಿಂಗ ಸರ್ಪ, ಬಲೆಯ ನಡುವೆ ತಪ್ಪಿಸಿಕೊಂಡಿದ್ದು ಶುಕ್ರವಾರ ಸಿಬ್ಬಂದಿ ಅದನ್ನು ಪತ್ತೆ ಮಾಡಿ ಮೃಗಾಲಯಕ್ಕೆ ವಾಪಸ್ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ‌ ಸರ್ಪ ತಪ್ಪಿಸಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಬಳಿಕ ಅದನ್ನು ಸುರಕ್ಷಿತವಾಗಿ ಮರಳಿ ಉದ್ಯಾನವನಕ್ಕೆ ಸೇರಿಸಲಾಗಿದೆ.ಶುಕ್ರವಾರ ಮುಂಜಾನೆ ಜೈವಿಕ ಉದ್ಯಾನವನದ ಟಿಕೆಟ್​ ಕೌಂಟರ್ ಬಳಿ ಬಂದಿದ್ದ ಕಾಳಿಂಗ‌ ಸರ್ಪ ಕಂಡು ಸ್ಥಳೀಯರು ಹೌಹಾರಿದ್ದಾರೆ. ಬಳಿಕ ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದ್ದು, ಬಳಿಕ ಕಾಳಿಂಗ‌ ಸರ್ಪ ಹಿಡಿಯಲು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ.ವಿಷಪೂರಿತ ಹಾವು ಕಾಳಿಂಗ ಸರ್ಪವಾಗಿರುವುದರಿಂದ ಸ್ಥಳದಲ್ಲಿ ಸೇರಿದ ಮಂದಿ ಆತಂಕಗೊಂಡಿದ್ದರು. ಸುಮಾರು 7 ಅಡಿಗಿಂತಲೂ ಅಧಿಕ ಗಾತ್ರದ ಕಾಳಿಂಗವೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.ಬ್ರೀಡಿಂಗ್ ವೇಳೆ ಗುರುವಾರ ರಾತ್ರಿ ಹೆಣ್ಣು ಕಾಳಿಂಗ ಸರ್ಪ, ಬಲೆಯ ನಡುವೆ ತಪ್ಪಿಸಿಕೊಂಡಿದ್ದು ಶುಕ್ರವಾರ ಸಿಬ್ಬಂದಿ ಅದನ್ನು ಪತ್ತೆ ಮಾಡಿ ಮೃಗಾಲಯಕ್ಕೆ ವಾಪಸ್ ಕಳುಹಿಸಿದ್ದಾರೆ. ಶುಕ್ರವಾರ ಪ್ರವಾಸಿಗರು ಆಗಮಿಸುವುದಕ್ಕೂ ಮುನ್ನ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜೈವಿಕ ಉದ್ಯಾನವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.