ಸಾರಾಂಶ
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‌ರವರು ಬಡವರ ಹಾಗೂ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದು ಸೇವೆ ಮಾಡಿದರೆ ಮಾಜ ಪ್ರಧಾನಿ ರಾಜೀವ್‌ಗಾಂಧೀಯವರು ದೂರದೃಷ್ಠಿಯ ನಾಯಕರಾಗಿ ಮಿಂಚಿದ್ದಾರೆ ಎಂದು ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಮಲೇಬೆನ್ನೂರು: ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‌ರವರು ಬಡವರ ಹಾಗೂ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದು ಸೇವೆ ಮಾಡಿದರೆ ಮಾಜ ಪ್ರಧಾನಿ ರಾಜೀವ್‌ಗಾಂಧೀಯವರು ದೂರದೃಷ್ಠಿಯ ನಾಯಕರಾಗಿ ಮಿಂಚಿದ್ದಾರೆ ಎಂದು ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸಮಾರಂಭದಲ್ಲಿ ಅರಸು ಮತ್ತು ರಾಜೀವ್‌ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಧ್ಬಾವನಾ ದಿನದ ಪ್ರತಿಜ್ಞೆ ಬೋಧಿಸಿ ಮಾತನಾಡಿ, ಅರಸು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯದ ಪರ, ಮಲ ಹೊರುವ ಪದ್ದತಿ ಹಾಗೂ ಜೀತ ಪದ್ದತಿಯನ್ನು ಕೊನೆಗೊಳಿಸಿದರು ಎಂದರು.ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನವನ್ನು, ತಮಿಳುನಾಡಲ್ಲಿ ಭಯೋತ್ಪಾದಕ ದಾಳಿಗೆ ತುತ್ತಾಗಿ ಹುತಾತ್ಮರಾದ ನೆನಪಿಗೆ ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್‌ಅಲಿ, ಮಂಜಣ್ನ,ಖಲೀಲ್, ರೇವಣಸಿದ್ದಪ್ಪ, ಫಕೃಧ್ದೀನ್, ಅರೀಫ್‌ಅಲಿ, ನಯಾಜ್, ಬೀರಪ್ಪ, ಶಬ್ಬೀರ್, ಎಕೆ ಲೋಕೇಶ್, ರಫೀಕ್, ಖಲೀಲ್,ಚಂದ್ರಪ್ಪ, ಚಿಕ್ಕಪ್ಪ, ಗಂಗಾಧರ್ ಮತ್ತಿತರರು ಇದ್ದರು.